ನವದೆಹಲಿ: ಜವಹರ ಲಾಲ್ ನೆಹರೂ ಭಾರತವನ್ನು ಧರ್ಮದ ಆಧಾರದ ವಿಭಜನೆ ಮಾಡಿದ್ದೇ, ಕಾಶ್ಮೀರದ ಇಂದಿನ ಸಮಸ್ಯೆಗೆ ಕಾರಣ ಎಂದ ಕೇಂದ್ರ ಗೃಹ ಸಚಿವ ಅಮಿತ್ ಶಾ ವಾಗ್ದಾಳಿ ನಡೆಸಿದ್ದಾರೆ.
ಜಮ್ಮು ಕಾಶ್ಮೀರದಲ್ಲಿ ರಾಷ್ಟ್ರಪತಿ ಆಡಳಿತ ಮುಂದುವರೆಸುವ ಕುರಿತ ಮಸೂದೆಯನ್ನು ಲೋಕಸಭೆಯಲ್ಲಿಂದು ಮಂಡಿಸಿ ಮಾತನಾಡಿ ವಾಗ್ದಾಳಿ ನಡೆಸಿದ ಅವರು, ಕಾಶ್ಮೀರದ ಇಂದಿನ ಈ ಬಿಕ್ಕಟ್ಟಿಗೆ ನೆಹರೂ ಅವರೇ ನೇರ ಕಾರಣ ಎಂದರು.
ದೇಶ ವಿಭಜನೆಯ ವಿಚಾರವನ್ನು ಅಮಿತ್ ಶಾ ಸದನದಲ್ಲಿ ಪ್ರಸ್ತಾಪಿಸಿದ ವೇಳೆ ಕಾಂಗ್ರೆಸ್ ತೀವ್ರ ವಿರೋಧ ವ್ಯಕ್ತಪಡಿಸಿತು. ಆದರೆ, ದೇಶ ವಿಭಜನೆಯ ಕುರಿತಾಗಿ ಕಾಂಗ್ರೆಸ್’ನ ಮನೀಶ್ ತಿವಾರಿ ಪದೇ ಪದೇ ಪ್ರಶ್ನೆಗಳನ್ನು ಎತ್ತುತ್ತಾರೆ. ಹೀಗಾಗಿ, ನಾನು ದೇಶ ವಿಭಜನೆಗೆ ಕಾರಣರಾರು ಎಂದು ನಾನು ಅವರನ್ನು ಪ್ರಶ್ನಿಸಲು ಬಯಸುತ್ತೇನೆ ಎಂದು ಕುಟುಕಿದರು.
ನೆಹರೂ ಅವರ ತಪ್ಪಿನಿಂದಾಗಿ ಜಮ್ಮು ಕಾಶ್ಮೀರದಲ್ಲಿ ಸಾವಿರಾರು ಜನ ಸಾವನ್ನಪ್ಪುತ್ತಿದ್ದಾರೆ. ಅಲ್ಲಿನ ಭಯೋತ್ಪಾದನೆ ದೇಶವ್ಯಾಪಿ ವಿಸ್ತರಿಸಿದ್ದು, ಅಲ್ಲಿನ ಮೂರನೆಯ ಒಂದರಷ್ಟು ಭಾಗ ನಮ್ಮ ಹತೋಟಿಯಲ್ಲೇ ಇಲ್ಲ ಎಂದು ಖೇದ ವ್ಯಕ್ತಪಡಿಸಿದರು.
Discussion about this post