ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ತೆಲಂಗಾಣ ರಾಜ್ಯದಲ್ಲಿ ಸಾಮಾನ್ಯ ತೆರಿಗೆಗಳ ಜೊತೆಯಲ್ಲಿ ಆರ್ ಆರ್ ತೆರಿಗೆ ಸಹ ಜಾರಿಯಲ್ಲಿದೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ #Amith Shah ಕಟಕಿಯಾಡಿದ್ದಾರೆ.
ಈ ಕುರಿತಂತೆ ಮಾತನಾಡಿದ ಅವರು, ತೆಲಂಗಾಣದಲ್ಲಿ ಆರ್ ಆರ್ ತೆರಿಗೆ ನಡೆಯುತ್ತಿದೆ. ಆರ್ ಆರ್ ತೆರಿಗೆ ಎಂದರೆ ರಾಹುಲ್ ಗಾಂಧಿ #Rahul Gandhi ಮತ್ತು ರೇವಂತ್ ರೆಡ್ಡಿ ತೆರಿಗೆ. ತೆಲಂಗಾಣದಲ್ಲಿ ಈಗ ಹೈಕಮಾಂಡ್’ಗೆ ಎಟಿಎಂ ಇದೆ. ಹೈಕಮಾಂಡ್’ಗೆ ಹಣ ತುಂಬಲು ರೇವಂತ್ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂದು ದೂರಿದರು.

Also read: ಚುನಾವಣೆಗೆ ಸಕಲ ಸಿದ್ಧತೆ: ಮತಗಟ್ಟೆಗಳತ್ತ ಹೆಜ್ಜೆ ಹಾಕಿದ ಸಿಬ್ಬಂದಿಗಳು
ರೇವಂತ್ ಈಗಷ್ಟೇ ಸಿಎಂ ಆಗಿದ್ದಾರೆ. ನನ್ನ ವಿರುದ್ಧ ಕೇಸ್ ಹಾಕಿದ್ದಾರೆ. ನಾನು ಅವರಂತೆ ದೂರು ನೀಡುವುದಿಲ್ಲ. ನಾನು ಅದನ್ನು ಹೈಕೋರ್ಟ್’ಗೆ ಕೊಂಡೊಯ್ಯುತ್ತೇನೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
















Discussion about this post