ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕುಸ್ತಿಪಟು ಬಜರಂಗ್ ಪುನಿಯಾ #Bajrang Punia ಅವರನ್ನು ರಾಷ್ಟ್ರೀಯ ಉದ್ದೀಪನ ಮದ್ದು ತಡೆ ಸಂಸ್ಥೆ #NADA ನಾಲ್ಕು ವರ್ಷಗಳ ಕಾಲ ಬ್ಯಾನ್ ಮಾಡಿದೆ.
ಮಾರ್ಚ್ 10 ರಂದು ಸೋನೆಪತ್‌ನಲ್ಲಿ ನಡೆದ ರಾಷ್ಟ್ರೀಯ ತಂಡದ ಆಯ್ಕೆಗೆ ನಡೆದ ಟ್ರಯಲ್ಸ್‌ನಲ್ಲಿ ಆಯ್ಕೆಯಾದ ನಂತರ ಪುನಿಯಾ ಮೂತ್ರದ ಮಾದರಿಯನ್ನು ಪರೀಕ್ಷೆಗೆ ನೀಡಲು ನಿರಾಕರಿಸಿದ್ದರು. ಇದನ್ನು ನಿಯಮ ಬಾಹಿರ ಎಂದು ಪರಿಗಣಿಸಿರುವ ಎನ್‌ಎಡಿಎ, ಪೂನಿಯಾರನ್ನು ನಾಲ್ಕು ವರ್ಷಗಳ ಕಾಲ ಬ್ಯಾನ್ ಮಾಡಿದೆ.
Also read: ಬೆಂಗಳೂರು | ಹೋಟೆಲ್‌ನಲ್ಲಿ ಯುವತಿ ಹತ್ಯೆ | ಹಂತಕ ಪರಾರಿ

ನಾಡಾಗೆ ಮೂತ್ರ ಮಾದರಿಯನ್ನು ನೀಡದೇ ಇದ್ದದ್ದು ಯಾಕೆ? ಎಂದು ಜೂನ್ 23 ರಂದು ಕುಸ್ತಿಪಟುಗೆ ನೋಟಿಸ್ ನೀಡಿತ್ತು. ಸೆಪ್ಟೆಂಬರ್ 20 ಮತ್ತು ಅಕ್ಟೋಬರ್ 4 ರಂದು ವಿಚಾರಣೆ ನಡೆಸಲಾಗಿತ್ತು. ಇದೀಗ ಆದೇಶ ಪ್ರಕಟಿಸಿರುವ ಎಡಿಡಿಪಿ, ಕಲಂ 10.3.1 ರ ಅಡಿಯಲ್ಲಿ ನಿರ್ಬಂಧಗಳಿಗೆ ಅಥ್ಲೀಟ್ ಹೊಣೆಗಾರನಾಗಿರುತ್ತಾನೆ ಮತ್ತು 4 ವರ್ಷಗಳ ಅವಧಿಗೆ ಅನರ್ಹತೆಗೆ ಹೊಣೆಗಾರನಾಗಿರುತ್ತಾನೆ ಎಂದು ಹೇಳಿದೆ. ಈ ಸಂದರ್ಭದಲ್ಲಿ ಬಜರಂಗ್ ಪುನಿಯಾ ಸ್ಪರ್ಧಾತ್ಮಕ ಕುಸ್ತಿಗೆ ಮರಳಲು ಮತ್ತು ವಿದೇಶದಲ್ಲಿ ಕೋಚಿಂಗ್ ಕೆಲಸಕ್ಕೆ ಅರ್ಜಿ ಸಲ್ಲಿಸಲು ಸಾಧ್ಯವಾಗುವುದಿಲ್ಲ ಎಂದು ಸಹ ತನ್ನ ಆದೇಶದಲ್ಲಿ ತಿಳಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post