ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಇಂದಿರಾನಗರದ ಹೋಟೆಲ್‌ನಲ್ಲಿ ನಡೆದ ಯುವತಿ ಕೊಲೆ #Murder in Hotel ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಹಲವು ಮಾಹಿತಿ ಕಲೆಹಾಕಿದ್ದು, ಕೊಲೆ ಬಳಿಕ ಪ್ರೇಯಸಿಯ ಮೃತದೇಹವನ್ನ ಪೀಸ್ ಪೀಸ್ ಮಾಡುವ ಆಲೋಚನೆಯಲ್ಲಿ ಹಂತಕನಿದ್ದನಾ ಎಂಬ ಶಂಕೆ ವ್ಯಕ್ತವಾಗಿದೆ.
ಎರಡು ದಿನ ಪ್ರೇಯಸಿ ಜೊತೆ ಕಾಲ ಕಳೆದಿದ್ದು ಆ ಬಳಿಕ ಕೊಲೆ ಮಾಡಿ ಇಡೀ ರಾತ್ರಿ ಆಕೆಯ ಶವದ ಜೊತೆ ಕುಳಿತು ಹಂತಕ ಸಿಗರೇಟ್ ಸೇದಿದ್ದಾನೆ ಎಂಬುದು ಪೊಲೀಸ್ ತನಿಖೆಯಿಂದ ತಿಳಿದುಬಂದಿದೆ.
Also read: RSS, ಮನುಸ್ಮೃತಿ ಬಗ್ಗೆ ಮತ್ತೆ ಹಗುರವಾಗಿ ಮಾತನಾಡಿದ ಸಿಎಂ ಸಿದ್ದರಾಮಯ್ಯ
ಹಂತಕ ರೂಂನಿಂದ ಹೊರಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಹೋಟೆಲ್‌ನಲ್ಲೇ ಶವ ಬಿಟ್ಟು ಮೆಜೆಸ್ಟಿಕ್ ರೈಲ್ವೆ ನಿಲ್ದಾಣದ ವರೆಗೂ ಹೋಗಿದ್ದಾನೆ. ಆ ಬಳಿಕ ಮೊಬೈಲ್ ಸ್ವಿಚ್ ಆಫ್ ಮಾಡ್ಕೊಂಡು ಪರಾರಿಯಾಗಿದ್ದಾನೆ. ಹಂತಕ ಕೇರಳಕ್ಕೆ ಎಸ್ಕೇಪ್ ಆಗಿರುವ ಬಗ್ಗೆ ಅನುಮಾನ ವ್ಯಕ್ತವಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post