ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಬೆಂಗಳೂರು (ಬಿಎಲ್‌ಆರ್ ವಿಮಾನ ನಿಲ್ದಾಣ) #BengaluruAirport ಪ್ರಯಾಣಿಕರು ಮತ್ತು ಸಂದರ್ಶಕರ ಅನುಕೂಲಕ್ಕಾಗಿ ಹೊಸ “ಎಲಿವೇಟೆಡ್ ವಾಕ್‌ವೇ”ನನ್ನು #ElevatedWalkway ಉದ್ಘಾಟಿಸಿದೆ.
ಈ ನೂತನ ವಾಕ್‌ವೇ ಟರ್ಮಿನಲ್ 1 #Terminal1 ರಿಂದ P4 ಪಾರ್ಕಿಂಗ್ ಅನ್ನು ಸಂಪರ್ಕಿಸಲಿದೆ.

ಕಾಲ್ನಡಿಗೆಯ ನಯವಾದ ಮತ್ತು ಆಧುನಿಕ ವಿನ್ಯಾಸದೊಂದಿಗೆ, ಎಲಿವೇಟರ್ #Elevator ಮತ್ತು ಎಸ್ಕಲೇಟರ್‌ಗಳಂತಹ #Escalator ಪ್ರಯಾಣಿಕ ಸ್ನೇಹಿ ಸೌಕರ್ಯಗಳನ್ನು ನೀಡಲಾಗಿದ್ದು, ಇದರಿಂದ ಪ್ರಯಾಣಿಕರು ಸುಲಭ ಮತ್ತು ಆರಾಮದಾಯಕವಾದ ನಡಿಗೆಯ ಅನುಭವ ಪಡೆಯಬಹುದು.

ಈ ಹೊಸ ಎಲಿವೇಟೆಡ್ ವಾಕ್‌ವೇ ಉದ್ಘಾಟನೆಯೊಂದಿಗೆ, #BLR ವಿಮಾನ ನಿಲ್ದಾಣವು ಎಲ್ಲರನ್ನೂ ಒಳಗೊಂಡ ಪ್ರಯಾಣದ ಅನುಭವದ ಕಡೆಗೆ ತನ್ನ ಬದ್ಧತೆಯನ್ನು ಪುನರುಚ್ಚರಿಸುತ್ತದೆ ಮತ್ತು ನಿರಂತರ ಆವಿಷ್ಕಾರಗಳ ಮೂಲಕ ಪ್ರಯಾಣಿಕರಿಗೆ ಮರೆಯಲಾಗದ ಅನುಭವಗಳನ್ನು ನೀಡುತ್ತದೆ.
(ವರದಿ: ಡಿ.ಎಲ್. ಹರೀಶ್, ಬೆಂಗಳೂರು)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post