ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಹೆಚ್ಚುವರಿಯಾಗಿ ಯಕಶ್ಚಿತ್ ಸಾಸ್ ಕೇಳಿದ್ದಕ್ಕಾಗಿ ಗ್ರಾಹಕನ ಮುಖಕ್ಕೆ ತಿಂಡಿ ಗಾಡಿ ಮಾಲೀಕ ಚಾಕುವಿನಿಂದ ಇರಿದಿರುವ ಘಟನೆ ಶಹದಾರದ ಫಾಶರ್ ಬಜಾರ್’ನಲ್ಲಿ ನಡೆದಿದೆ.
ಗಾಯಾಳು ವ್ಯಕ್ತಿಯನ್ನು ಸಂದೀಪ್(34) ಎಂದು ಗುರುತಿಸಲಾಗಿದ್ದು, ಈತನನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಸಂದೀಪ್ ಎನ್ನುವ ವ್ಯಕ್ತಿ ರಸ್ತೆಬದಿ ಮಾರುತ್ತಿರುವ ಗಾಡಿಯಿಂದ ಮೋಮೊಗಳನ್ನು ಖರೀದಿಸಲು ಹೋಗಿದ್ದರು. ಹೀಗೆ ಮೋಮೊಸ್ ಖರೀದಿಸಿದ ಬಳಿಕ ಗಾಡಿ ಮಾಲೀಕ ವಿಕಾಸ್ (22) ಬಳಿ ಹೆಚ್ಚಿನ ರೆಡ್ ಸಾಸ್ ನೀಡುವಂತೆ ಕೇಳಿದ್ದಾನೆ. ಆದರೆ ಆತ ಕಡಿಮೆ ಇದೆ ಎಂದು ಹೇಳಿ ಕೊಡಲು ನಿರಾಕರಿಸಿದ್ದಾನೆ.
Also read: ಮೈಸೂರಿನಲ್ಲಿ ಯತೀಂದ್ರ ಗೆಲುವು ಸಾಧಿಸುತ್ತಾರೆ | ಶಾಸಕ ಪ್ರದೀಪ್ ಈಶ್ವರ್ ಮಾತಿನ ಮರ್ಮವೇನು?
ಇದಾದ ಕೆಲವೇ ದಿನಗಳಲ್ಲಿ ಇಬ್ಬರ ನಡುವೆ ವಾಗ್ವಾದ ನಡೆದಿದ್ದು, ಮಾತಿಗೆ ಮಾತು ಬೆಳೆದು ವಿಕಾಸ್, ಗ್ರಾಹಕ ಸಂದೀಪ್ ಮುಖಕ್ಕೆ ಎರಡು ಬಾರಿ ಇರಿದು ಪರಾರಿಯಾಗಿದ್ದಾನೆ.
ಘಟನೆ ಸಂಬಂಧ ಕೊಲೆ ಯತ್ನದಡಿ ಗಾಡಿ ಮಾಲೀಕ ವಿಕಾಸ್ ವಿರುದ್ಧ ಎಫ್’ಐಆರ್ ದಾಖಲಿಸಲಾಗಿದೆ. ಪರಾರಿಯಾಗಿರುವ ವಿಕಾಸ್’ಗಾಗಿ ಪೊಲೀಸರು ಬಲೆ ಬೀಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post