ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಕೆಮ್ಮು ಸಿರಪ್ Cough Syrup ಸೇವಿಸಿ ವಿಶ್ವದಾದ್ಯಂತ ಕನಿಷ್ಠ 141 ಮಕ್ಕಳು ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ ಮುಂಜಾಗ್ರತೆ ವಹಿಸಿರುವ ಕೇಂದ್ರ ಸರ್ಕಾರ, ಶೀತಕ್ಕೆ ಸಂಬಂಧಿಸಿದಂತೆ 4 ವರ್ಷದ ಒಳಗಿನ ಮಕ್ಕಳಿಗೆ ಕುಡಿಸುವ ಹಲವು ಔಷಧಿಗಳನ್ನು ನಿಷೇಧಿಸಿದೆ.
ಈ ಕುರಿತಂತೆ ಡ್ರಗ್ ಕಂಟ್ರೋಲರ್ ಜನರಲ್ ಆಫ್ ಇಂಡಿಯಾ (ಡಿಸಿಜಿಐ) Drug Controller General of India ಆದೇಶ ಹೊರಡಿಸಿದ್ದು, ನಾಲ್ಕು ವರ್ಷದ ಒಳಗಿನ ಮಕ್ಕಳಿಗೆ ಶೀತ ತಡೆಗಟ್ಟಲು ನೀಡುವ ಔಷಧಿಗಳ ಸಂಯೋಜನೆಯ ಬಳಕೆಯನ್ನು ನಿಷೇಧಿಸಿದೆ.

Also read: ಡಿ.23ರಂದು ವೈಕುಂಠ ಏಕಾದಶಿ: ಶ್ರೀಲಕ್ಷ್ಮೀನರಸಿಂಹ ದೇಗುಲದಲ್ಲಿ ವಿಶೇಷ ದರ್ಶನ
ವರದಿಗಳ ಅನ್ವಯ, GlaxoSmithKlineನ ಟಿ-ಮಿನಿಕ್ ಓರಲ್ ಡ್ರಾಪ್ಸ್, ಗ್ಲೆನ್ಮಾರ್ಕ್ ಆಸ್ಕೋರಿಲ್ ಫ್ಲೂ ಸಿರಪ್ ಮತ್ತು IPCA ಲ್ಯಾಬೊರೇಟರೀಸ್ ಸೊಲ್ವಿನ್ ಕೋಲ್ಡ್ ಸಿರಪ್ ಅನ್ನು ಉತ್ಪಾದಿಸುವ ಫಾರ್ಮಾ ಸಂಸ್ಥೆಗಳು `ಎಚ್ಚರಿಕೆ’ ಎನ್ನುವುದನ್ನು ಮುದ್ರಿಸಲು ಸೂಚನೆ ನೀಡಿದೆ.

ಕ್ಲೋಫೆರ್’ನಿರಮೈನ್ ಮಲೇಟ್ ಮತ್ತು ಫೆನೈಲೆಫ್ರಿನ್ ತಯಾರಕರು ಕಡ್ಡಾಯವಾಗಿ ಹಾಕಬೇಕು ಎಂದು ಖಚಿತಪಡಿಸಿಕೊಳ್ಳಲು ಎಲ್ಲಾ ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳ ಔಷಧ ನಿಯಂತ್ರಕರಿಗೆ ಪತ್ರ ಬರೆದಿದ್ದಾರೆ. ಶಿಶುಗಳು ಮತ್ತು ನಾಲ್ಕು ವರ್ಷದೊಳಗಿನ ಮಕ್ಕಳಿಗೆ ಶಿಫಾರಸು ಮಾಡದ ಉತ್ಪನ್ನಗಳ ಮೇಲೆ ಎಚ್ಚರಿಕೆ ಎಂದು ಮುದ್ರಿಸಲು ಸೂಚಿಸಿದ್ದಾರೆ.

ಇನ್ನು, ಕಳೆದ ಜೂನ್’ನಲ್ಲಿ ಕೇಂದ್ರ ಸರ್ಕಾರವು ಇಂತಹ 14 ಎಫ್’ಡಿಸಿ ಔಷಧಿಗಳನ್ನು ನಿಷೇಧಿಸಿತ್ತು. ಅಲ್ಲದೇ, ಈ ಔಷಧಿಗಳು ಯಾವುದೇ ರೀತಿಯ ಚಿಕಿತ್ಸೆಗೆ ಅರ್ಹವಲ್ಲ ಎಂದು ಹೇಳಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news









Discussion about this post