ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಪ್ರಧಾನಿ ನರೇಂದ್ರ ಮೋದಿ PM Narendra Modi ಅವರನ್ನು ಹತ್ಯೆ ಮಾಡುವ ಜೊತೆಯಲ್ಲಿ ದೇಶದಲ್ಲಿ ಆರ್ಡಿಎಕ್ಸ್ ಸ್ಫೋಟಿಸಿ 2 ಕೋಟಿ ಜನರನ್ನು ಕೊಲ್ಲುವುದಾಗಿ ಅನಾಮದೇಯ ಬೆದರಿಕೆ ಪತ್ರವೊಂದು ಇ-ಮೇಲ್ ಮೂಲಕ ರಾಷ್ಟ್ರೀಯ ತನಿಖಾ ದಳಕ್ಕೆ National Investigation Force ಬಂದಿದೆ.
ಈ ಕುರಿತಂತೆ ಸ್ಫೋಟಕ ಮಾಹಿತಿಯನ್ನು ಹೊರಹಾಕಿರುವ ಗುಪ್ತಚರ ತನಿಖಾ ದಳ ಇ-ಮೇಲ್ ಮೂಲಕ ಅನಾಮಧೇಯ ವ್ಯಕ್ತಿಯಿಂದ ಈ ಬೆದರಿಕೆ ಬಂದಿದೆ. ಪ್ರಧಾನಿ ಮೋದಿ ನನ್ನ ಜೀವನವನ್ನು ಹಾಳು ಮಾಡಿದ್ದಾರೆ. ಇದಕ್ಕೆ ಪ್ರತಿಕಾರವಾಗಿ ಅವರನ್ನು ಹತ್ಯೆ ಮಾಡುವ ಜೊತೆಯಲ್ಲಿ 20 ಸ್ಥಳದಲ್ಲಿ ಆರ್ಡಿಎಫ್ ಸ್ಫೋಟಿಸುತ್ತೇವೆ. 2 ಕೋಟಿ ಜನರನ್ನು ಹತ್ಯೆ ಮಾಡುತ್ತೇನೆ. ಸಾಧ್ಯವಾದರೆ ನನ್ನನ್ನು ತಡೆಯಿರಿ ಎಂದು ಬೆದರಿಕೆ ಹಾಕಿರುವ ಘಟನೆ ನಡೆದಿದೆ.
Also read: ಧನುಷ್, ರೋಷಿಣಿ ಪ್ರಕಾಶ್ ಮುಖ್ಯಭೂಮಿಕೆಯ ಮನಸೆಲ್ಲಾ ನೀನೇ ಆಲ್ಬಂ ಹಾಡು ಬಿಡುಗಡೆ
ಈ ಬೆದರಿಕೆ ಪತ್ರವನ್ನು ಗಂಭೀರವಾಗಿ ಪರಿಗಣಿಸಿರುವ ರಾಷ್ಟ್ರೀಯ ತನಿಖಾ ದಳ ಈಗಾಗಲೇ ಇ-ಮೇಲ್ ಜಾಲವನ್ನು ಕಂಡುಹಿಡಿಯಲು ಆರಂಭಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post