ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಉತ್ತರಪ್ರದೇಶ, ಉತ್ತರಾಖಂಡ, ಗೋವಾ, ಪಂಜಾಬ್ ಹಾಗೂ ಮಣಿಪುರ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ದಿನಾಂಕ ಪ್ರಕಟಿಸಿದ್ದು, ಈ ಮೂಲಕ ಹೈವೋಲ್ಟೇಜ್ ಕದನಕ್ಕೆ ಸಿದ್ಧವಾಗಿದೆ.
ಈ ಕುರಿತಂತೆ ಪತ್ರಿಕಾಗೋಷ್ಟಿಯಲ್ಲಿಂದು ಮಾತನಾಡಿದ ಮುಖ್ಯ ಚುನಾವಣಾ ಆಯುಕ್ತ ಸುಶೀಲ್ ಚಂದ್ರ ಒಟ್ಟು ಏಳು ಹಂತಗಳಲ್ಲಿ ಐದು ರಾಜ್ಯಗಳ ಚುನಾವಣೆ ನಡೆಯಲಿದೆ. ಉತ್ತರಪ್ರದೇಶದ 403, ಪಂಜಾಬ್‌ನ 117, ಉತ್ತರಾಖಂಡ 70, ಮಣಿಪುರದ 60 ಹಾಗೂ ಗೋವಾದ 40 ವಿಧಾನಸಭಾ ಕ್ಷೇತ್ರಗಳಿಗೆ ಮತದಾನ ನಡೆಯಲಿದೆ ಎಂದರು.
ಅತ್ಯಂತ ಪ್ರಮುಖವಾಗಿ ಕೋವಿಡ್ ನಿಯಮಾವಳಿಗಳ ಅನ್ವಯ ಈ ವೇಳಾಪಟ್ಟಿಯನ್ನು ಸಿದ್ಧಪಡಿಸಿದ್ದು, ಜನವರಿ 15ರವರೆಗೂ ಮಾತ್ರ ರಾಜಕೀಯ ರ್‍ಯಾಲಿಗಳು ಹಾಗೂ ರೋಡ್ ಷೋ, ಸೈಕಲ್ ಹಾಗೂ ಬೈಕ್ ರ್‍ಯಾಲಿಗಳು ಸೇರಿದಂತೆ ಯಾವುದೇ ರೀತಿಯ ಮೆರವಣಿಗೆಗಳಿಗೆ ಅವಕಾಶ ಇಲ್ಲ ಎಂದರು.
ಉತ್ತರಪ್ರದೇಶದಲ್ಲಿ ಫ್ರೆಬ್ರವರಿ 10ರಿಂದ ಮಾರ್ಚ್ 7ರವರೆಗೂ ಒಟ್ಟು ಏಳು ಹಂತದಲ್ಲಿ ಮತನಾದ ನಡೆಯಲಿದ್ದು, ಪಂಜಾಬ್ ಉತ್ತರಾಖಂಡ ಹಾಗೂ ಗೋವಾದಲ್ಲಿ ಫೆಬ್ರವರಿ 14, ಮಣಿಪುರದಲ್ಲಿ ಫೆಬ್ರವರಿ 27 ಹಾಗೂ ಮಾರ್ಚ್ ೩ರಂದು ಮತದಾನ ನಡೆಯಲಿದೆ.
ಮಾರ್ಚ್ 10ರಂದು ಐದು ರಾಜ್ಯಗಳ ಫಲಿತಾಂಶ ಘೋಷಣೆಯಾಗಲಿದೆ ಎಂದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post