ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭೆಯಲ್ಲಿ ಪ್ರಸಕ್ತ ಸಾಲಿನ ಬಜೆಟ್ ಮಂಡಿಸಿರುವ ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶದಲ್ಲಿ ಪ್ರಸಕ್ತ ಆರ್ಥಿಕ ವರ್ಷದಿಂದಲೇ ಡಿಜಿಟಲ್ ಕರೆನ್ಸಿ ಪರಿಚಯಿಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
2022-23ರ ಆರ್ಥಿಕ ವರ್ಷದಿಂದಲೇ ಭಾರತೀಯ ರಿಸರ್ವ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಪರಿಚಯಿಲಿದ್ದು, ಬ್ಲಾಕ್ ಚೈನ್ ತಂತ್ರಜ್ಞಾನವನ್ನು ಆಧರಿಸಿದೆ ಎಂದಿದ್ದಾರೆ.
ಏನಿದು ಡಿಜಿಟಲ್ ಕರೆನ್ಸಿ?
ಪ್ರಸ್ತುತ ದೇಶದಲ್ಲಿ ಚಲಾವಣೆಯಲ್ಲಿರುವ ಕರೆನ್ಸಿ ರೂಪಾಯಿಗೆ ಪರ್ಯಾಯವಾಗಿ ಬಳಸಬಹುದಾದ ಆಧುನಿಕ ತಂತ್ರಜ್ಞಾನದ ಕರೆನ್ಸಿಯೇ ಡಿಜಿಟಲ್ ಕರೆನ್ಸಿ. ಸೆಂಟ್ರಲ್ ಬ್ಯಾಂಕ್ ಡಿಜಿಟಲ್ ಕರೆನ್ಸಿಯನ್ನು ಚಲಾವಣೆಗೆ ತರಲು ಆರ್’ಬಿಐ ಸಿದ್ದವಾಗಿದೆ.
ವ್ಯತ್ಯಾಸವೇನು?
ಇದು ಬಿಟ್ ಕಾಯಿನ್ ಮಾದರಿಯ ಕ್ರಿಪ್ಟೊ ಕರೆನ್ಸಿ ರೀತಿಯಲ್ಲ. ಬಿಟ್ ಕಾಯಿನ್ ಡಿಜಿಟಲ್ ದತ್ತಾಂಶಗಳೊಂದಿಗೆ ಸ್ಟೋರ್ ಆಗಿ, ವಿಕೇಂದ್ರೀಕರಣವಾಗಿರುತ್ತದೆ. ಯಾವುದೇ ಸರಕಾರಿ ನಿಯಂತ್ರಕ ವ್ಯವಸ್ಥೆಗೆ ಸಂಬಂಧಿಸಿರುವುದಿಲ್ಲ. ಮತ್ತೊಂದು ಕಡೆ ಆರ್’ಬಿಐ ಡಿಜಿಟಲ್ ಕರೆನ್ಸಿ ಬಸರಕಾರದ ಮಾನ್ಯತೆ ಗಳಿಸಿರುತ್ತದೆ.
ಡಿಜಿಟಲ್ ಕರೆನ್ಸಿಯ ಪ್ರಯೋಜನವೇನು?
- ಸದ್ಯ ಚಲಾವಣೆಯಲ್ಲಿರುವ ಕಾಗದ ನೋಟುಗಳ ಮೇಲಿನ ಅವಲಂಬನೆ ಕಡಿಮೆಯಾಗಲಿದೆ
- ತಂತ್ರಜ್ಞಾನದ ನೆರವಿನಿಂದ ಹಣಕಾಸು ವರ್ಗಾವಣೆ ಸುಲಭವಾಗುತ್ತದೆ
- ಖಾಸಗಿ ಕ್ರಿಪ್ಟೊ ಕರೆನ್ಸಿಗಳಿಗೆ ಪರ್ಯಾಯವಾಗಿ ಡಿಜಿಟಲಲ್ ಕರೆನ್ಸಿಯನ್ನು ಚಲಾವಣೆಗೊಳಿಸಬಹುದು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post