ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಗೃಹ ಬಳಕೆಯ ಗ್ಯಾಸ್ ಸಿಲಿಂಡರ್ ಬೆಲೆ ಇಳಿಕೆಯಾದ ಬೆನ್ನಲ್ಲೇ ಇದೀಗ ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆಯೂ Commercial Gas ಗಣನೀಯ ಇಳಿಕೆಯಾಗಿದ್ದು, ಗ್ರಾಹಕರ ಮುಖದಲ್ಲಿ ಸಂತೋಷ ಮೂಡಿಸಿದೆ.
ತೈಲ ಮಾರುಕಟ್ಟೆ ಕಂಪನಿಗಳು (ಒಎಂಸಿ) 19 ಕೆ.ಜಿ ತೂಕದ ವಾಣಿಜ್ಯ ಬಳಕೆ ಸಿಲಿಂಡರ್ ದರವನ್ನು ಇಳಿಕೆ ಮಾಡಿದ್ದು, ಪ್ರತೀ ಸಿಲಿಂಡರ್ ದರಗಳಲ್ಲಿ 158ರೂ ಇಳಿಕೆ ಮಾಡಲಾಗಿದೆ. ಪರಿಷ್ಕೃತ ದರ ಇಂದಿನಿಂದ ಜಾರಿಗೆ ಬರಲಿದ್ದು, ದೆಹಲಿಯಲ್ಲಿ 19 ಕೆ.ಜಿ ತೂಕದ ಸಿಲಿಂಡರ್ ದರ 1,522 ರೂ ನಷ್ಟಿದ್ದರೆ, ಬೆಂಗಳೂರಿನಲ್ಲಿ ಈ ದರ 1,609 ರೂ ರಷ್ಟಿದೆ ಎನ್ನಲಾಗಿದೆ.
ಈ ಹಿಂದೆ, ಕೇಂದ್ರ ಸರ್ಕಾರವು ರಕ್ಷಾ ಬಂಧನದ ಮುನ್ನಾದಿನದಂದು, ಎಲ್‌ಪಿಜಿ ಬೆಲೆಯನ್ನು 200ರೂ. ಕಡಿತಗೊಳಿಸಿ ದೇಶದ ಮಹಿಳೆಯರಿಗೆ ಉಡುಗೊರೆಯಾಗಿ ಘೋಷಿಸಿತ್ತು.
Also read: ನಿರ್ಲಕ್ಷ್ಯ ಧೋರಣೆ ಹಿನ್ನೆಲೆ: ಪಾಮನಕಲ್ಲೂರು ಪಿಡಿಒ ವಿರುದ್ಧ ಮಹಿಳೆಯರ ಆಕ್ರೋಶ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post