ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2023-24ರ ಬಜೆಟ್‌ನಲ್ಲಿ ಕೇಂದ್ರ ಸರ್ಕಾರ Union Budget 2023-24 ಘೋಷಿಸಿರುವ ತೆರಿಗೆ ಬದಲಾವಣೆಗಳು ಏಪ್ರಿಲ್ 1ರಿಂದ ಜಾರಿಯಾಗುತ್ತಿವೆ. ಇದರ ಪರಿಣಾಮ ಏಪ್ರಿಲ್ 1ರಿಂದ ಕೆಲವು ವಸ್ತುಗಳು ದುಬಾರಿಯಾಗುತ್ತವೆ ಮತ್ತೆ ಕೆಲವು ಅಗ್ಗವಾಗಲಿದೆ.
ಯಾವುದು ದುಬಾರಿ?
ಎಲ್‌ಇಡಿ ಬಲ್ಬ್, ಸಿಗರೇಟ್, ಖಾಸಗಿ ಜೆಟ್, ಹೆಲಿಕಾಪ್ಟರ್, ಹೈ-ಎಂಡ್ ಎಲೆಕ್ಟ್ರಾನಿಕ್ ಉತ್ಪನ್ನಗಳು, ಪ್ಲಾಸ್ಟಿಕ್ ವಸ್ತುಗಳು, ಬೆಳ್ಳಿ, ಇಮಿಟೇಶನ್ ಜ್ಯುವೆಲ್ಲರಿ, ಚಿನ್ನದ ಗಟ್ಟಿ, ಪ್ಲಾಟಿನಮ್, ಹೈ-ಗ್ಲಾಸ್ ಪೇಪರ್, ಕಿಚನ್ ಚಿಮಿಣಿಗಳು, ವಿಟಮಿನ್‌ಗಳು ದುಬಾರಿಯಾಗಲಿವೆ.

ಮೊಬೈಲ್ ಫೋನ್, ಭಾರತದಲ್ಲಿ ಉತ್ಪಾದನೆಯಾಗುವ ಸ್ಮಾರ್ಟ್‌ಫೋನ್‌ನ ಬಿಡಿಭಾಗಗಳು, ಟಿ.ವಿ, ಆಟಿಕೆಗಳು, ಸೈಕಲ್, ಲಿಥಿಯಂ ಬ್ಯಾಟರಿ, ಎಲ್‌ಇಡಿ ಟಿವಿ, ಎಲೆಕ್ಟ್ರಿಕ್ ವಾಹನ, ಕ್ಯಾಮೆರಾ ಲೆನ್ಸ್ ಮೇಲಿನ ಸುಂಕ ಇಳಿಕೆಯ ಪರಿಣಾಮ ಇವುಗಳ ದರ ಇಳಿಕೆ ನಿರೀಕ್ಷಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news










Discussion about this post