ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಲೋಕಸಭಾ ಚುನಾವಣೆ ಘೋಷಣೆ ದಿನಾಂಕ ಸನಿಹಗೊಳ್ಳುತ್ತಿರುವಂತೆಯೇ ಪ್ರಧಾನಿ ನರೇಂದ್ರ ಮೋದಿ PM Narendra Modi ನೇತೃತ್ವದ ಎನ್’ಡಿಒ ಒಕ್ಕೂಟಕ್ಕೆ ದಿನದಿಂದ ದಿನಕ್ಕೆ ಬಲ ಹೆಚ್ಚುತ್ತಿದೆ.
ಒಂದೊಂದೇ ರಾಜ್ಯದಲ್ಲಿ ಮೋದಿ ಅವರಿಗೆ ಬೆಂಬಲ ವ್ಯಕ್ತವಾಗುತ್ತಿರುವ ಬೆನ್ನಲ್ಲೇ ಒಡಿಶಾ ಸಿಎಂ ನವೀನ್ ಪಟ್ನಾಯಕ್ ಪ್ರಧಾನಿಯವರನ್ನು ಹಾಡಿ ಹೊಗಳಿದ್ದಾರೆ.
ಪ್ರಧಾನಿ ಮೋದಿ ಅವರು ಭಾರತೀಯ ಆರ್ಥಿಕತೆಗೆ ಹೊಸ ಬೆಳವಣಿಗೆಯ ಪಥವನ್ನು ನೀಡಿದ್ದು, ಭಾರತವು ಮೂರನೇ ಅತಿದೊಡ್ಡ ಆರ್ಥಿಕತೆಯಾಗಲಿದೆ ಎಂದು ಪಟ್ನಾಯಕ್ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Also read: ದೇಶದ ಮೊದಲ ಅಂಡರ್ ವಾಟರ್ ಮೆಟ್ರೋ ಸುರಂಗ ಆರಂಭ | ಮೋದಿ ಪ್ರಯಾಣಿಸಿದ್ದು ಇವರೊಂದಿಗೆ!?
ಮತ್ತೊಂದೆಡೆ, ಒಡಿಶಾ ಸಿಎಂ Odisha CM ಜನಪ್ರಿಯ ಮುಖ್ಯಮಂತ್ರಿ ಎಂದು ಪ್ರಧಾನಿಯವರು ಕರೆದಿರುವುದು ತೀವ್ರ ಕುತೂಹಲಕ್ಕೆ ಕಾರಣವಾಗಿದೆ. ಇದರ ನಡುವೆಯೇ ಒಡಿಶಾ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಗೆ ಬಿಜೆಪಿ-ಬಿಜೆಡಿ ಮೈತ್ರಿ ಬಹುತೇಕ ದೃಢಪಟ್ಟಿದೆ.
ಬಿಜೆಪಿ 14 ಮತ್ತು ಬಿಜೆಡಿ 7 ಸ್ಥಾನಗಳಲ್ಲಿ ಸ್ಪರ್ಧಿಸುವ ಸಾಧ್ಯತೆಯಿದೆ ಎನ್ನಲಾಗಿದ್ದು, ಅಸೆಂಬ್ಲಿ ಚುನಾವಣೆಗೆ ಅನುಪಾತವು ವಿರುದ್ಧವಾಗಿದೆ.
ಒಡಿಶಾದಲ್ಲಿ ಪಟ್ನಾಯಕ್ ಪಕ್ಷವು ಎನ್’ಡಿಒ ಜೊತೆಯಲ್ಲಿ ಶೇ.85ರಷ್ಟು ಮತಗಳನ್ನು ಬಾಚಿಕೊಳ್ಳುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.
ಈ ನಡುವೆ, ಬಿಜೆಪಿ ನಾಯಕರು ದೆಹಲಿಯಲ್ಲಿ ಸಭೆ ನಡೆಸುತ್ತಿದ್ದರೆ, ಬಿಜೆಡಿ ನಾಯಕರು ಭುವನೇಶ್ವರದ ನವೀನ್ ನಿವಾಸ್ನಲ್ಲಿ ಹಿರಿಯ ನಾಯಕರನ್ನು ಕರೆದಿದ್ದಾರೆ.
ಏತನ್ಮಧ್ಯೆ, ಒಡಿಶಾದಲ್ಲಿ 20,000 ಕೋಟಿ ರೂಪಾಯಿಗಳ ಯೋಜನೆಗಳನ್ನು ಪ್ರಧಾನಿ ಮೋದಿ ಉದ್ಘಾಟಿಸಿದ್ದು, ನವೀನ್ ಪಟ್ನಾಯಕ್ ಅವರ ತಂದೆ ಬಿಜು ಪಟ್ನಾಯಕ್ ಅವರ 108 ನೇ ಜನ್ಮದಿನದಂದು ಉಭಯ ನಾಯಕರು ಅವರಿಗೆ ಗೌರವ ಸಲ್ಲಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post