ಕಲ್ಪ ಮೀಡಿಯಾ ಹೌಸ್
ನವದೆಹಲಿ: ಒಲಿಂಪಿಕ್ಸ್ ಕ್ರೀಡಾಕೂಟಕ್ಕೂ ಮುನ್ನ ಪ್ರಧಾನಿ ನರೇಂದ್ರ ಮೋದಿಯವರು ತಾವು ಕೊಟ್ಟ ಮಾತನ್ನು ಈಗ ಈಡೇರಿಸಿದ್ದಾರೆ.
ಮೈ-ಮನಗಳನ್ನು ರೋಮಾಂಚನಗೊಳಿಸುವ ಈ ದೇಶ ಭಕ್ತಿ ಗೀತೆಯನ್ನೊಮ್ಮೆ ನೋಡಿ
ಹೌದು… ಈ ಹಿಂದೆ ತಾವು ಮಾತು ಕೊಟ್ಟಂತೆ ಎರಡು ಬಾರಿ ಒಲಿಂಪಿಕ್ಸ್ ಪದಕ ವಿಜೇತೆ ಪಿ.ವಿ. ಸಿಂಧು ಅವರೊಂದಿಗೆ ಐಸ್ ಕ್ರೀಂ ಸವಿದಿದ್ದು, ಈ ಮೂಲಕ ಕ್ರೀಡಾಪಟುಗಳ ಆತ್ಮವಿಶ್ವಾಸವನ್ನು ಹೆಚ್ಚಿಸಿದ್ದಾರೆ.


ಕಳೆದ ಜುಲೈನಲ್ಲಿ ಕ್ರೀಡಾಪಟುಗಳು ಟೋಕಿಯೋಗೆ ತೆರಳುವ ಮುನ್ನ ಪ್ರಧಾನಿಯವರು ಅವರೊಂದಿಗೆ ಸಂವಾದ ನಡೆಸಿದ್ದರು. ಆ ವೇಳೆ ಮಾತನಾಡಿದ್ದ ಪ್ರಧಾನಿಯವರು ರಿಯೋ ಒಲಿಂಪಿಕ್ಸ್’ಗೆ ತೆರಳುವ ಮುನ್ನ ಐಸ್ ಕ್ರೀಂ ಸೇವನೆ ಹೇಗೆ ಸಾಧ್ಯ ಎಂದು ಅದನ್ನು ತಡೆ ಹಿಡಿದಿದ್ದರು. ಆದರೆ, ಒಲಿಂಪಿಕ್ಸ್ ಮುಗಿದ ನಂತರ ಅವರೊಂದಿಗೆ ಸವಿಯುವುದಾಗಿ ಹೇಳಿದ್ದರು.


ಈಗ ಪ್ರಧಾನಿಯವರು ಸಿಂಧು ಸೇರಿದಂತೆ ಒಲಿಂಪಿಕ್ಸ್’ನಲ್ಲಿ ಪಾಲ್ಗೊಂಡಿದ್ದ ಅಥ್ಲೆಟಿಕ್ಸ್ ಕ್ರೀಡಾಪಟುಗಳಿಗೆ ಔತಣ ನೀಡಿ, ಐಸ್ ಕ್ರೀಂ ಸವಿದಿದ್ದಾರೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















