ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ನಮ್ಮ ದೇಶದ ಅತ್ಯುನ್ನತ ಸ್ಪೈ ಏಜೆನ್ಸಿಗಳಲ್ಲಿ ಒಂದಾದ `ರಾ’ RAW (ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್) ಮುಂದಿನ ಮುಖ್ಯಸ್ಥರನ್ನಾಗಿ ಹಿರಿಯ ಐಪಿಎಸ್ ಅಧಿಕಾರಿ ರವಿ ಸಿನ್ಹಾ Ravi Sinha ಅವರನ್ನು ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.
ಈ ಕುರಿತಂತೆ ಸಂಪುಟ ನೇಮಕಾತಿ ಸಮಿತಿಯು ಅನುಮೋದನೆ ನೀಡಿದ್ದು, 1988ರ ಇಂಡಿಯನ್ ಪೊಲೀಸ್ ಸೇವೆಯ ಅಧಿಕಾರಿ ಛತ್ತೀಸ್’ಗಡ ಕೇಡರ್ ಅಧಿಕಾರಿಯಾಗಿದ್ದ ಇವರು ಸದ್ಯ ಕ್ಯಾಬಿನೆಟ್ ಕಾರ್ಯಾಲಯದಲ್ಲಿ ವಿಶೇಷ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯಲ್ಲಿರುವ ಅಧಿಕಾರಿ ನೇರವಾಗಿ ಪ್ರಧಾನಮಂತ್ರಿಯವರಿಗೆ ವರದಿ ಮಾಡಿಕೊಳ್ಳುತ್ತಾರೆ.
ಸದ್ಯ ರಾ ಮುಖ್ಯಸ್ಥರಾಗಿರುವ ಸಮಂತ್ ಗೋಯೆಲ್ ಅವರ ಅಧಿಕಾರದ ಅವಧಿ ಜೂನ್ 30 ರಂದು ಮುಕ್ತಾಯವಾಗಲಿದೆ. ಪ್ರಧಾನಿ ಕಾರ್ಯಾಲಯದ ಆಪರೇಷನ್ ಮ್ಯಾನ್ ಎಂದೇ ಗುರುತಿಸಿಕೊಂಡಿರುವ ರವಿ ಸಿನ್ಹಾ ಎರಡು ವರ್ಷಗಳ ಕಾಲ ಈ ಹುದ್ದೆಯಲ್ಲಿ ಇರಲಿದ್ದಾರೆ.
Also read: ಪೋಷಕರಿಗೆ ಸಿಕ್ಕಿಬಿದ್ದ ಪ್ರೇಮಿಗಳು ಮೊಸಳೆಗೆ ಆಹಾರವಾದರು: ಹೇಗೆ ಗೊತ್ತಾ?
ರವಿ ಸಿನ್ಹಾ ಬಿಹಾರದ ಭೋಜ್ಪುರ ಜಿಲ್ಲೆಯವರು. ದೆಹಲಿಯ ಸೇಂಟ್ ಸ್ಟೀಫನ್ಸ್ ಕಾಲೇಜಿನಲ್ಲಿ ಓದಿರುವ ರವಿ ಸಿನ್ಹಾ, 1988ರಲ್ಲಿ ಯುಪಿಎಸ್’ಸಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದರು. ಬಳಿಕ ಭಾರತೀಯ ಪೊಲೀಸ್ ಸೇವೆಯ ಅಧಿಕಾರಿಯಾಗಿ ಮಧ್ಯಪ್ರದೇಶ ಕೆಡರ್ ಅನ್ನು ಪಡೆದುಕೊಂಡಿದ್ದರು. ಆದರೆ, 2000 ರಲ್ಲಿ, ಆಗಿನ ಅಟಲ್ ಬಿಹಾರಿ ವಾಜಪೇಯಿ ಸರ್ಕಾರವು ಮಧ್ಯಪ್ರದೇಶದ ಬುಡಕಟ್ಟು ಪ್ರಾಬಲ್ಯದ ಪ್ರದೇಶಗಳನ್ನು ವರ್ಗೀಕರಿಸಿ ಛತ್ತೀಸ್’ಗಢ ರಾಜ್ಯವನ್ನು ರಚಿಸಿದಾಗ, ಸಿನ್ಹಾ ತಾಂತ್ರಿಕವಾಗಿ ಛತ್ತೀಸ್’ಗಡ ಕೇಡರ್’ಗೆ ಸೇರ್ಪಡೆಯಾಗಿದ್ದರು.
ಐಪಿಎಸ್ ರವಿ ಸಿನ್ಹಾ ಅವರು ಪ್ರಸ್ತುತ ಕ್ಯಾಬಿನೆಟ್ ಸೆಕ್ರೆಟರಿಯೇಟ್’ನಲ್ಲಿ ಪ್ರಧಾನ ಸಿಬ್ಬಂದಿ ಅಧಿಕಾರಿ ಆಗಿ ಸೇವೆ ಸಲ್ಲಿಸುತ್ತಿದ್ದಾರೆ. ಈ ಹುದ್ದೆಯು ವಿಶೇಷ ಕಾರ್ಯದರ್ಶಿ ಶ್ರೇಣಿಯದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post