ಕಲ್ಪ ಮೀಡಿಯಾ ಹೌಸ್ | ನವದೆಹಲಿ |
2022-23ನೆಯ ಸಾಲಿನ ಕೇಂದ್ರ ಬಜೆಟನ್ನು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಲೋಕಸಭೆಯಲ್ಲಿ ಮಂಡಿಸಿದ್ದು, ವಿಶೇಷವೆಂದರೆ ಚುನಾವಣೆ ನಡೆಯಲಿರುವ ಪಂಚ ರಾಜ್ಯಗಳಿಗೆ ಯಾವುದೇ ವಿಶೇಷ ಕೊಡುಗೆ ನೀಡಲ್ಲ.
ಈಗ ನಡೆಯಲಿರುವ ಐದು ರಾಜ್ಯಗಳಿಗೆ ಬಜೆಟ್’ನಲ್ಲಿ ಬಂಪರ್ ಘೋಷಿಸಲಾಗುವುದು ಎಂದು ನಿರೀಕ್ಷಿಸಲಾಗಿತ್ತು. ಆದರೆ, ಇಂತಹ ಎಲ್ಲ ನಿರೀಕ್ಷೆಗಳಿಗೆ ವಿರುದ್ಧವಾಗಿ ಬಜೆಟ್ ಮಂಡಿಸಲಾಗಿದ್ದು, ಚುನಾವಣಾ ಗಿಮಿಕ್ ಬಜೆಟ್ ಆಗದೇ ದೂರದೃಷ್ಠಿಯ ಆಯವ್ಯಯ ಮಂಡಿಸಲಾಗಿದೆ.
ಬಿಜೆಪಿ ಆಡಳಿತವಿರುವ ಉತ್ತರ ಪ್ರದೇಶ ಸೇರಿ ಐದು ರಾಜ್ಯಗಳ ಚುನಾವಣೆಯ ಘೋಷಣೆಯಾಗಿದೆ. ಇಂತಹ ಸಂದರ್ಭದಲ್ಲಿ ಚುನಾವಣೆಯಲ್ಲಿ ಗೆಲುವು ಸಾಧಿಸುವ ಉದ್ದೇಶದಿಂದ ಜನಪ್ರಿಯ ಯೋಜನೆ ಹಾಗೂ ಆರ್ಥಿಕ ಪ್ಯಾಕೇಜ್ ಘೋಷಿಸುವ ಸಾಧ್ಯತೆಯಿದೆ ಎನ್ನಲಾಗಿತ್ತು. ಬಜೆಟ್ ಆರಂಭದಲ್ಲಿ ವಿತ್ತ ಸಚಿವರೇ ಹೇಳಿದಂತೆ ಮುಂದಿನ 25 ವರ್ಷಗಳ ದೂರದೃಷ್ಠಿಯ ಬಜೆಟ್ ಇದಾಗಿದೆ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.
ಬಂಡವಾಳ ಹೂಡಿಕೆ ಮೇಲೆ ವೆಚ್ಚವನ್ನು ಏರಿಕೆ ಮಾಡುವ ಮೂಲಕ ಭವಿಷ್ಯದ 25 ವರ್ಷಗಳನ್ನು ದೃಷ್ಠಿಯಲ್ಲಿಟ್ಟುಕೊಂಡು ಎಲ್ಲ ಕ್ಷೇತ್ರಗಳನ್ನು ಬೇರುಮಟ್ಟದಿಂದ ಸಬಲಗೊಳಿಸುವ ಬಜೆಟ್ ಇದಾಗಿದೆ ಎಂದು ವಿಶ್ಲೇಷಿಸಲಾಗುತ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post