ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿರುವ ರಾಷ್ಟ್ರೀಯ ಹೆದ್ದಾರಿಗಳನ್ನು ಹಸಿರೀಕರಣ ಮಾಡುವ ದೃಷ್ಠಿಯಿಂದ ಹಸಿರು ಹೆದ್ದಾರಿಗಳು (ಪ್ಲಾಂಟೇಶನ್, ಟ್ರಾನ್ಸ್ಪ್ಲಾಂಟೇಶನ್, ಸುಂದರೀಕರಣ ಮತ್ತು ನಿರ್ವಹಣೆ) ನೀತಿ, 2015ರ ನಿಯಮದ ಅಡಿಯಲ್ಲಿ 2021ರ ಡಿಸೆಂಬರ್ ಅಂತ್ಯದ ವೇಳೆಗೆ 244.68 ಗಿಡಗಳನ್ನು ನೆಡಲಾಗಿದೆ ಎಂದು ಕೇಂದ್ರ ಮಾಹಿತಿ ನೀಡಿದೆ.
ಈ ಕುರಿತಂತೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಾಹಿತಿ ಪ್ರಕಟಿಸಿದ್ದು, 51,178 ಕಿಮೀ ಉದ್ದದ 869 ರಾಷ್ಟ್ರೀಯ ಹೆದ್ದಾರಿಗಳಲ್ಲಿ ಗ್ರೀನ್ ಕಾರಿಡಾರ್’ಗೆ ಕ್ರಮ ಕೈಗೊಳ್ಳಲಾಗಿದೆ ಎಂದಿದೆ.
ಇನ್ನು, ಸಚಿವಾಲಯದ ಮಾಹಿತಿಯಂತೆ ಕರ್ನಾಟಕಾದ್ಯಂತ ಒಟ್ಟು 47 ಪ್ರಾಜೆಕ್ಟ್ ಅಡಿಯಲ್ಲಿ 3282.464 ಕಿಮೀ ಉದ್ದದ ಹೆದ್ದಾರಿಯಲ್ಲಿ ಒಟ್ಟು 14.55 ಲಕ್ಷ ಸಸಿಗಳನ್ನು ನೆಡಲಾಗಿದೆ ಎಂದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news











Discussion about this post