No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
  • Advertise With Us
  • Grievances
  • About Us
  • Contact Us
Wednesday, September 9, 2026
Follow Us
kalpa.news
Advertisement
ADVERTISEMENT
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ
Subscribe
kalpa.news
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
  • ಜಿಲ್ಲೆ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
  • ರೈಲ್ವೆ ಸುದ್ದಿಗಳು
  • ಇತರೆ
ADVERTISEMENT
Home ಸಿನೆಮಾ

ಅವರು ಕಾಣೋದೇ ಇಲ್ವಾ? ಅವರು ನೆನಪಿಗೆ ಬರುವುದೇ ಇಲ್ವಾ ನಿಮಗೆ?: ನೋವಿನ ಆಕ್ರೋಶ ಹೊರಹಾಕಿದ ನಟ ಅನಿರುದ್

ಕಲಾವಿದರ ಸಂಘದ ಕಟ್ಟಡದಲ್ಲಿಲ್ಲ ‘ವಿಷ್ಣುದಾದಾ’ ಹೆಸರು || ಮೇರು ನಟರ ಸಾಲಿನಲ್ಲಿ ಸಾಹಸಸಿಂಹನ ಹೆಸರು ಸೇರಿಸದೇ ಇರುವುದಕ್ಕೆ ವ್ಯಾಪಕ ಆಕ್ರೋಶ

kalpa News by kalpa News
June 19, 2021
in ಸಿನೆಮಾ
0
ಅವರು ಕಾಣೋದೇ ಇಲ್ವಾ? ಅವರು ನೆನಪಿಗೆ ಬರುವುದೇ ಇಲ್ವಾ ನಿಮಗೆ?: ನೋವಿನ ಆಕ್ರೋಶ ಹೊರಹಾಕಿದ ನಟ ಅನಿರುದ್
Share on FacebookShare on TwitterShare on WhatsApp

ಕಲ್ಪ ಮೀಡಿಯಾ ಹೌಸ್

ಬೆಂಗಳೂರು: ಚಾಮರಾಜಪೇಟೆಯಲ್ಲಿರುವ ಕರ್ನಾಟಕ ಚಲನಚಿತ್ರ ಕಲಾವಿದರ ಸಂಘದ ಕಟ್ಟಡದ ಮುಂಭಾಗದಲ್ಲಿ ಡಾ.ರಾಜ್’ಕುಮಾರ್ ಹಾಗೂ ಡಾ.ಅಂಬರೀಷ್ ಅವರ ಹೆಸರಿನ ಜೊತೆಯಲ್ಲಿ ಹಿರಿಯ ನಟ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರು ಇಲ್ಲದೇ ಇರುವುದಕ್ಕೆ ವಿಷ್ಣು ಅಳಿಯ, ನಟ ಅನಿರುದ್ ಬೇಸರ ವ್ಯಕ್ತಪಡಿಸಿದ್ದಾರೆ.

ಈ ಕುರಿತಂತೆ ಸ್ವತಃ ವೀಡಿಯೋ ಮೂಲಕ ಮಾತನಾಡಿರುವ ಅವರು, ಈ ಕಟ್ಟಡದಲ್ಲಿ ಇಬ್ಬರು ಧೀಮಂತರ ಹೆಸರುಗಳನ್ನು ನೋಡಿದಾಗ ಸಂತೋಷವಾಯಿತು. ಇಬ್ಬರು ಧೀಮಂತರ ಹೆಸರನ್ನು ಭವನಕ್ಕೆ ಹಾಗೂ ಆಡಿಟೋರಿಯಂಗೆ ಇಟ್ಟಿರುವುದು ಅತ್ಯಂತ ಸೂಕ್ತವಾಗಿದೆ. ಆದರೆ, ಅಲ್ಲಿ ಅಪ್ಪಾವ್ರ ಅಂದರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರು ಇಲ್ಲದೇ ಇರುವುದು ಬೇಸರ ಮೂಡಿಸಿದೆ ಎಂದಿದ್ದಾರೆ.
ತಾವು ಈ ಬಗ್ಗೆ ಭಾರತಿ ಅಮ್ಮನವರ ಜೊತೆಯಲ್ಲಿ ಮಾತನಾಡಿ, ಈ ವಿಚಾರದ ಬಗ್ಗೆ ಸಂಬಂಧಿಸಿದವರೊಟ್ಟಿಗೆ ಕೇಳಬಹುದೇ ಎಂದಾಗ, ಬೇಡ, ಅಧಿಕಾರಿಗಳಿಗೆ ಇಂದಲ್ಲ ನಾಳೆ ಗಮನಕ್ಕೆ ಬಂದು ಅವರಿಗೇ ಅರ್ಥವಾಗಬಹುದು. ನಾವಾಗಿಯೇ ಕೇಳುವುದು ಬೇಡ ಎಂದರು. ಆದರೆ, ಈಗ ಸುಮಾರು ವರ್ಷಗಳೇ ಕಳೆದಿವೆ. ಈ ವಿಚಾರ ಕಲಾವಿದರಿಗೆ, ಅಧಿಕಾರಿಗಳ ಗಮನಕ್ಕೆ ಬಂದಿಲ್ಲ. ಇತ್ತೀಚೆಗೆ ಅಭಿಮಾನಿಗಳು ಕರೆ ಮಾಡಿ, ನೀವೇಕೆ ಸುಮ್ಮನಿದ್ದೀರಿ ಎಂದು ಪ್ರಶ್ನಿಸುತ್ತಿದ್ದಾರೆ. ಹೀಗಾಗಿ, ಅನಿವಾರ್ಯವಾಗಿ ನಾವಾಗಿಯೇ ಕೇಳುವ ಸಂದರ್ಭ ಬಂದಿದೆ ಎಂದಿದ್ದಾರೆ.

ನಿಮಗೆ ಪದ್ಮಶ್ರೀ, ಪದ್ಮವಿಭೂಷಣ, ದಾದಾ ಸಾಹೇಬ್ ಪಾಲ್ಕೆ ಸೇರಿದಂತೆ ಹಲವು ಪ್ರಶಸ್ತಿಗಳು ಬರಬೇಕು ಎಂದು ವಿಷ್ಣು ದಾದಾ ನಮ್ಮೊಂದಿಗೆ ಶಾರೀರಿಕವಾಗಿ ಇದ್ದಾಗ ಅವರ ಬಳಿಯೇ ನಾನು ಹಲವು ಬಾರಿ ಕೇಳಿದ್ದೆ. ಆದರೆ, ನಾವು ಏನನ್ನೂ ನಿರೀಕ್ಷೆ ಮಾಡಬಾರದು, ಬಂದಿದ್ದನ್ನು ಸ್ವೀಕರಿಸಬೇಕು ಎಂದಷ್ಟೇ ಅವರು ಹೇಳುತ್ತಿದ್ದರು. ಅವರು ನಿರೀಕ್ಷೆ ಮಾಡದಿದ್ದರೂ ಅವರ ಕುಟುಂಬ ಸದಸ್ಯನಾಗಿ, ಅಭಿಮಾನಿಯಾಗಿ ಅವರಿಗೆ ಸಿಗಬೇಕಾದ ನ್ಯಾಯ ಸಿಗಬೇಕು ಎಂದು ಅನಿಸುತ್ತದೆ ಎಂದು ಮನದಾಳದ ನೋವನ್ನು ವ್ಯಕ್ತಪಡಿಸಿದ್ದಾರೆ.

ಹಿಂದೆ ವಾಣಿಜ್ಯ ಮಂಡಳಿಯಲ್ಲಿ ವಿಷ್ಣುದಾದಾ ಪುತ್ಥಳಿ ನಿರ್ಮಾಣ ವಿಚಾರದಲ್ಲಿ ಆದ ನೋವಿನಿಂದಾಗಿ ಈಗ ಈ ವಿಚಾರವನ್ನು ಈ ವೀಡಿಯೋ ಮೂಲಕ ಮಾತನಾಡುತ್ತಿದ್ದೇನೆ. ಅಪ್ಪಾವ್ರು ಸಂಘದ ಅಧ್ಯಕ್ಷರಾಗಿಲ್ಲದೇ ಇರಬಹುದು. ಆದರೆ ತಾವೇ ಕಂಡಂತೆ ವಿಷ್ಣು ದಾದಾ ಅವರು ಕಲಾವಿದರ ಸಂಘದಿಂದ ಹಾಗೂ ಹಲವು ಸಾಮಾಜಿಕ ಕಾರ್ಯಗಳಿಗೆ ಮುಂದಾಳತ್ವ ವಹಿಸಿದ್ದರು. ಹಲವು ಸಭೆಗಳನ್ನು ಅವರೇ ನೇತೃತ್ವ ವಹಿಸಿ ಮುನ್ನಡೆಸಿ ಸಲಹೆ ಸೂಚನೆಗಳನ್ನು ನೀಡಿದ್ದಾರೆ. ನಮ್ಮ ಮನೆಯಲ್ಲೇ ಬಹಳಷ್ಟು ಬಾರಿ ಸಭೆಗಳು ಆಗಿವೆ ಎಂದು ಅನಿರುದ್ ನೆನಪಿಸಿದ್ದಾರೆ.
ಅವರು ಕಾಣೋದೇ ಇಲ್ವಾ ನಿಮಗೆ? ಅವರು ನೆನಪಿಗೆ ಬರುವುದೇ ಇಲ್ಲವಾ ನಿಮಗೆ? ಅವರ ಹೆಸರಿಟ್ಟರೆ ಯಾರಿಗೆ ಗೌರವ? ಇದನ್ನು ನಾನು ಓರ್ವ ಕುಟುಂಬ ಸದಸ್ಯನಾಗಿ ಕೇಳಿಕೊಳ್ಳಬೇಕಾ? ಇದಕ್ಕಿಂತ ದುರಂತ ಬೇಕಾ? ಎಂದು ಸಾತ್ವಿಕವಾದ ಆಕ್ರೋಶವನ್ನು ಹೊರಹಾಕಿದ್ದಾರೆ.

200ಕ್ಕಿಂತಲೂ ಹೆಚ್ಚು ಸಿನಿಮಾದಲ್ಲಿ ಅಭಿನಯಿಸಿದ ಹಿರಿಯ ಕಲಾವಿದರ ಹೆಸರು ಅಲ್ಲಿ ಇಲ್ಲ ಎಂದು ಯಾರಿಗೂ ಏನೂ ಅನಿಸುವುದೇ ಇಲ್ಲವಾ? ಅಲ್ಲಿ ಇನ್ನೂ ಹಿರಿಯ ಕಲಾವಿದರ ಹೆಸರು ಇಲ್ಲ ಎನ್ನುವುದೂ ಸಹ ಚರ್ಚೆ ಆಗಬೇಕು. ಆದರೆ, ಅಲ್ಲಿ ಅಪ್ಪಾವ್ರ ಅವರ ಹೆಸರು ಇರಲೇಬೇಕು. ಕರ್ನಾಟಕ ಕಲಾವಿದರ ಸಂಘ ಎಂದರೆ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಹೆಸರನ್ನು ಮರೆಯಲು ಸಾಧ್ಯವೇ ಇಲ್ಲ ಎಂದಿದ್ದಾರೆ.
ಇದನ್ನು ನಾನೊಬ್ಬ ಕಲಾವಿದನಾಗಿ, ವಿಷ್ಣುವರ್ಧನ್ ಕುಟುಂಬ ಸದಸ್ಯನಾಗಿ ಈ ಪ್ರಶ್ನೆಯನ್ನು ಕಲಾವಿದರ ಸಂಘದ ಅಧಿಕಾರಿಗಳಿಗೆ ಹಾಗೂ ಕಲಾವಿದರಿಗೆ ಕೇಳುತ್ತಿದ್ದೇನೆ ಎಂದು ಹೇಳುವ ಮೂಲಕ ನೋವಿನ ಅಸಮಾಧಾನವನ್ನು ಹೊರಹಾಕಿದ್ದಾರೆ.

ಇನ್ನು, ಈ ವಿಚಾರಕ್ಕೆ ಸಂಬಂಧಿಸಿದಂತೆ ಕಲಾವಿದರ ಸಂಘದ ಕಟ್ಟಡದಲ್ಲಿ ವಿಷ್ಣುವರ್ಧನ್ ಹೆಸರು ಇಲ್ಲದೇ ಇರುವುದಕ್ಕೆ ರಾಜ್ಯದಾದ್ಯಂತ ಅಭಿಮಾನಿಗಳಿಂದ ವ್ಯಾಪಕ ಆಕ್ರೋಶ ವ್ಯಕ್ತವಾಗಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

Tags: Actor AnirudhActor Dr VishnuvardhanAnirudh JatkarBENGALURUKannada MoviesKannada News WebsiteKarnataka Film Artists AssociationLatest News Kannadasandalwoodಕರ್ನಾಟಕ ಚಲನಚಿತ್ರ ಕಲಾವಿದರ ಸಂಘಕಲಾವಿದನಟ ಡಾ.ವಿಷ್ಣುವರ್ಧನ್ಸಾಹಸಸಿಂಹ ಡಾ.ವಿಷ್ಣುವರ್ಧನ್
Share203Tweet123Send
Aniruddha Vasishta S R

Aniruddha Vasishta S R

Editor-in-Chief

Previous Post

ಏನಾಗಲಿದೆ ಜಿಲ್ಲೆಯಲ್ಲಿನ ಲಾಕ್ ಡೌನ್ ಭವಿಷ್ಯ: ಜಿಲ್ಲಾಧಿಕಾರಿಗಳು ಹೇಳಿದ್ದೇನು?

Next Post

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಪ್ರತಿಮೆ ಯಾರದು ಗೊತ್ತಾ? ಇಲ್ಲಿದೆ ಮಾಹಿತಿ

kalpa News

kalpa News

Next Post
ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಪ್ರತಿಮೆ ಯಾರದು ಗೊತ್ತಾ? ಇಲ್ಲಿದೆ ಮಾಹಿತಿ

ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹರಿದಾಡುತ್ತಿರುವ ಈ ಪ್ರತಿಮೆ ಯಾರದು ಗೊತ್ತಾ? ಇಲ್ಲಿದೆ ಮಾಹಿತಿ

Leave a Reply Cancel reply

Your email address will not be published. Required fields are marked *

No Result
View All Result
Anak Krakatau Eeruption Disrupts Flights Indonesia-Singapore
English Articles

Singapore Issues Travel Advisory as Mount Anak Krakatau Eruption Disrupts 2.3K Flights in Indonesia

by kalpa News
September 8, 2026
0

Kalpa Media House  |  Singapore/Jakarta  | Singapore has advised its citizens in Indonesia to prioritise their safety and remain alert...

Read moreDetails
Pink Power Run 3.0 Breast Cancer Awareness

Pink Power Run 3.0 to bring 20,000 participants together in Hyderabad

September 8, 2026
Agilent Technologies New Laboratory Solutions India

Agilent Launches 9500 ICP-MS, New GC Systems and OpenLab Sync in India

September 8, 2026
Bengaluru Sparsh Hospital Hennur Completes One Year

When Patients Travel for Hope: How Bengaluru Is Becoming a Destination for Complex Transplant Care

September 4, 2026
Railway Board hubballi-rameswaram-train-extended-9-trip

Railway Board Hubballi–Rameswaram Special Express Services Extended

September 3, 2026
kalpa.news

Copyright © 2026 Kalpa News. Designed by KIPL

Navigate Site

  • Advertise With Us
  • Grievances
  • Privacy & Policy
  • About Us
  • Contact Us

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In
error: Content is protected by Kalpa News!!
No Result
View All Result
  • Home
  • ರಾಜಕೀಯ
  • ಶಿವಮೊಗ್ಗ
    • ಶಿವಮೊಗ್ಗ
    • ಶಿಕಾರಿಪುರ
    • ಸಾಗರ
    • ಸೊರಬ
    • ಹೊಸನಗರ
    • ತೀರ್ಥಹಳ್ಳಿ
    • ಭದ್ರಾವತಿ
  • ಜಿಲ್ಲೆ
    • ಉಡುಪಿ
    • ಉತ್ತರ ಕನ್ನಡ
    • ಕಲಬುರಗಿ
    • ಕೊಪ್ಪಳ
    • ಕೋಲಾರ
    • ಗದಗ
    • ಚಾಮರಾಜನಗರ
    • ಚಿಕ್ಕ ಬಳ್ಳಾಪುರ
    • ಚಿಕ್ಕಮಗಳೂರು
    • ಚಿತ್ರದುರ್ಗ
    • ತುಮಕೂರು
    • ದಕ್ಷಿಣ ಕನ್ನಡ
    • ದಾವಣಗೆರೆ
    • ಹುಬ್ಬಳ್ಳಿ-ಧಾರವಾಡ
    • ಬಳ್ಳಾರಿ
    • ಬಾಗಲಕೋಟೆ
    • ಬೀದರ್
    • ಬೆಂಗಳೂರು ನಗರ
    • ಬೆಂ. ಗ್ರಾಮಾಂತರ
    • ಬೆಳಗಾವಿ
    • ಕೊಡಗು
    • ಮಂಡ್ಯ
    • ಮೈಸೂರು
    • ಯಾದಗಿರಿ
    • ರಾಮನಗರ
    • ರಾಯಚೂರು
    • ವಿಜಯಪುರ
    • ಶಿವಮೊಗ್ಗ
    • ಹಾವೇರಿ
    • ಹಾಸನ
    • ವಿಜಯನಗರ
  • ರಾಷ್ಟ್ರೀಯ
  • ಸಿನೆಮಾ
  • ವಾಣಿಜ್ಯ
  • ಅಂಕಣ
    • ಅಜೇಯ್ ಕಿರಣ್ ಆಚಾರ್
    • ಪುನೀತ್ ಜಿ. ಕೂಡ್ಲೂರು
    • ಆನಂದ ಕಂದ
    • ನಾದ ಕಲ್ಪ
    • ಡಾ. ಮೈತ್ರೇಯಿ ಆದಿತ್ಯಪ್ರಸಾದ್
  • ರೈಲ್ವೆ ಸುದ್ದಿಗಳು
  • ಇತರೆ
    • ವಿಜ್ಞಾನ-ತಂತ್ರಜ್ಞಾನ
    • ಜಾಬ್-ಸ್ಟ್ರೀಟ್
    • ಕೈ ರುಚಿ
    • ನಿತ್ಯ ಪಂಚಾಂಗ/ದಿನ ವಿಶೇಷ
    • ಮುಂಜಾನೆ ಸುವಿಚಾರ
    • ಆಧ್ಯಾತ್ಮ/ಭಕ್ತಿಭಾವ

Copyright © 2026 Kalpa News. Designed by KIPL