ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲಾ ಪಂಚಾಯತ್ ಮತ್ತು ತೋಟಗಾರಿಕೆ ಇಲಾಖೆ ಹಾಗೂ ಜಿಲ್ಲಾ ಉದ್ಯಾನ ಕಲಾ ಸಂಘ ಸಂಯುಕ್ತಾಶ್ರಯದಲ್ಲಿ ಗಣರಾಜ್ಯೋತ್ಸವದ ಅಂಗವಾಗಿ ಜ.24 ರಿಂದ 27ರಂದು ನಗರದ ತೋಟಗಾರಿಕೆ ಇಲಾಖೆ, ಮಹಾತ್ಮ ಗಾಂಧಿ ಪಾರ್ಕ್ ಆವರಣದಲ್ಲಿ 60ನೇ ಫಲ ಪುಷ್ಪ ಪ್ರದರ್ಶನವನ್ನು ಆಯೋಜಿಸಲಾಗಿದ್ದು, ಸಾರ್ವಜನಿಕರಿಂದ ನೊಂದಣಿಗಾಗಿ ಅರ್ಜಿ ಆಹ್ವಾನಿಸಿದೆ.
ಈ ಪ್ರದರ್ಶನದಲ್ಲಿ ತೋಟಗಾರಿಕಾ ಬೆಳೆಗಳು, ಹೂವು, ಹಣ್ಣು, ತರಕಾರಿ, ಕುಬ್ಜ ಗಿಡಗಳು ಹಾಗೂ ಔಷಧಿಗಳ ಸಸ್ಯಗಳ ಪ್ರದರ್ಶನ ಹಾಗೂ ಸ್ಪರ್ಧೆಯನ್ನು ಏರ್ಪಡಿಸಿದೆ. ಜಿಲ್ಲಾ ಮಾನ್ಯ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಕಾರ್ಯಕ್ರಮವನ್ನು ಉದ್ಘಾಟಿಸಲಿದ್ದಾರೆ.
ಪ್ರದರ್ಶನದಲ್ಲಿ ವಿವಿಧ ಸ್ಪರ್ಧೆಗಳನ್ನು ಏರ್ಪಡಿಸಲಾಗಿದ್ದು, ನಗರದ ಶಾಲಾ ಮಕ್ಕಳಿಂದ ಸ್ವಚ್ಛ ಭಾರತ ವಿಷಯದ ಕುರಿತು ನನ್ನೂರಿನ ಸ್ವಚ್ಛ ಪರಿಸರಕ್ಕೆ ನನ್ನ ಪುಟ್ಟ ಪ್ರಯತ್ನ ಎಂಬ ಘೋಷ ವಾಕ್ಯದ ಮೇರೆಗೆ ಚಿತ್ರ ಕಲಾ ರಚನೆ ಸ್ಪರ್ಧೆ, ಮಹಿಳೆಯರಿಗೆ ತೋಟಗಾರಿಕೆ ರಂಗೋಲಿ ಸ್ಪರ್ಧೆ (ಹೂವು, ಹಣ್ಣು, ತರಕಾರಿ, ಸಾಂಬಾರು ಪರ್ದಾಥಗಳು, ದ್ವಿದಳ ಧಾನ್ಯಗಳು, ಎಲೆಗಳನ್ನು ಉಪಯೋಗಿಸಿಕೊಂಡು), ಮನೆ/ಕಚೇರಿ/ಸಂಸ್ಥೆ/ಶಾಲೆ/ ಅಂಗನವಾಡಿಗಳಿಗೆ ಕೈತೋಟ ಉದ್ಯಾನವನಗಳ, ತಾರಸಿ ತೋಟಗಳ ಸ್ಪರ್ಧೆ. ರೈತರು ಬೆಳೆದ ತೋಟಗಾರಿಕೆ ಉತ್ಪನ್ನಗಳ ಪ್ರದರ್ಶಿಕೆಗಳ ಸ್ಪರ್ಧೆಗಳಲ್ಲಿ ಆಸಕ್ತಿವುಳ್ಳ ಸಾರ್ವಜನಿಕರು, ಶಾಲಾ ಹಾಗೂ ಸಂಘ ಸಂಸ್ಥೆಯವರು ಜ. 18 ರಂದು ಸಂಜೆ 5 ಗಂಟೆಯೊಳಗಾಗಿ ಹೆಸರುಗಳನ್ನು ನೊಂದಾಯಿಸಿಕೊಳ್ಳುವಂತೆ ತಿಳಿಸಿದೆ.
ಹೆಚ್ಚಿನ ಮಾಹಿತಿಗೆ ಹಾಗೂ ಮಳಿಗೆ ನೊಂದಣಿಗಾಗಿ ಮೊ.ಸಂ: 9900617544. 0818-222794, ರೈತರ ಪ್ರದರ್ಶಿಕೆಗಳಿಗೆ: 9483155292, 7259463875 ಹಾಗೂ ತೋಟಗಾರಿಕೆ ರಂಗೋಲಿ/ಚಿತ್ರಕಲೆಗೆ 08182-279415-7349467767 ಗಳನ್ನು ಸಂರ್ಪಕಿಸಬಹುದಾಗಿದೆ.
Get in Touch With Us info@kalpa.news Whatsapp: 9481252093
Discussion about this post