ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪಾಲಿಕೆ ವ್ಯಾಪ್ತಿಯಲ್ಲಿ ಇನ್ನು ಮುಂದೆ ನಾಗರಿಕರ ತಮ್ಮ ಮನೆಯ ಕಸವನ್ನು ಹಸಿ ಕಸ ಹಾಗೂ ಒಣ ಕಸವನ್ನಾಗಿ ಮೂಲದಲ್ಲಿಯೇ ಬೇರ್ಪಡಿಸಿ ನೀಡುವುದು ಕಡ್ಡಾಯವಾಗಿದೆ.
ಈ ಕುರಿತಂತೆ ಪಾಲಿಕೆ ಆಯುಕ್ತರು ಆದೇಶ ಹೊರಡಿಸಿದ್ದು, ಇನ್ನು ಮುಂದೆ ಮನೆ ಮನೆಗೆ ಕಸ ಸಂಗ್ರಹಿಸಲು ಬರುವ ಗಾಡಿಗಳಿಗೆ ಹಸಿ ಕಸ, ಒಣ ಕಸವನ್ನು ಕಡ್ಡಾಯವಾಗಿ ವಿಂಗಡಿಸಿ ನೀಡುವಂತೆ ಕಟ್ಟುನಿಟ್ಟಾಗಿ ಸೂಚಿಸಿದ್ದಾರೆ.
ಈ ರೀತಿ ಕಸವನ್ನು ವಿಂಗಡಿಸಿ ನೀಡದೇ ಇರುವವರಿಗೆ ಕಾರ್ಪೊರೇಷನ್ ಆಕ್ಟ್ ಮತ್ತು ಘನತ್ಯಾಜ್ಯ ನಿರ್ವಹಣೆ ಉಪಅಧಿನಿಯಮ 2019ರ ಅನ್ವಯ ದಂಡ ವಿಧಿಸಲಾಗುತ್ತದೆ ಎಂದು ಸೂಚಿಸಲಾಗಿದೆ.
ಯಾವತ್ತು ಯಾವ ಕಸ?
ಪ್ರತಿ ಭಾನುವಾರ, ಬುಧವಾರ ಒಣ ಕಸ ಸಂಗ್ರಹ
ಉಳಿದ ದಿನಗಳಲ್ಲಿ ಮಾತ್ರ ಹಸಿ ಕಸ ಸಂಗ್ರಹ

ಕೊಳೆತ ತರಕಾರಿ, ಅಡುಗೆ ಮನೆಯ ತ್ಯಾಜ್ಯ ಸೇರಿದಂತೆ ಹಸಿಯಾಗಿರುವ ವಸ್ತುಗಳು
ಒಣಕಸ ಎಂದರೆ ಯಾವುದು?
ಪೇಪರ್, ಪ್ಲಾಸ್ಟಿಕ್, ಗಾಜಿನ ಚೂರುಗಳು ಸೇರಿದಂತೆ ಇತರೆ ಕಚ್ಚಾ ಕಸದ ವಸ್ತುಗಳು

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news








Discussion about this post