ಶಿವಮೊಗ್ಗ: ತಾಳಗುಪ್ಪ-ಶಿವಮೊಗ್ಗ-ಬೆಂಗಳೂರು ನಡುವೆ ಸಂಚರಿಸುವ ಇಂಟರ್’ಸಿಟಿ ರೈಲಿನ ವೇಳಾಪಟ್ಟಿಯನ್ನು ತಾತ್ಕಾಲಿಕವಾಗಿ ಬದಲಾವಣೆ ಮಾಡಿ, ರೈಲ್ವೆ ಇಲಾಖೆ ಆದೇಶ ಹೊರಡಿಸಿದೆ.
ಮೇ 1ರಿಂದಲೇ ಜಾರಿಗೆ ಬರುವಂತೆ ವೇಳಾಪಟ್ಟಿಯನ್ನು ಬದಲಾವಣೆ ಮಾಡಲಾಗಿದ್ದು, ಜೂನ್ 6ರವರೆಗೂ ಈ ತಾತ್ಕಾಲಿಕ ಸಂಚಾರ ಸಮಯ ಜಾರಿಯಲ್ಲಿರುತ್ತದೆ.
20652 ನಂಬರಿನ ಇಂಟರ್’ಸಿಟಿ ರೈಲು ಈ ಹಿಂದೆ ಪ್ರತಿದಿನ ಬೆಳಗ್ಗೆ 6.40ಕ್ಕೆ ಶಿವಮೊಗ್ಗದಿಂದ ಹೊರಡುತ್ತಿತ್ತು. ಆದರೆ, ಬದಲಾಗಿರುವ ತಾತ್ಕಾಲಿಕ ವೇಳಾಪಟ್ಟಿಯಂತೆ ರೈಲು ಶಿವಮೊಗ್ಗದಿಂದ ಬೆಳಗ್ಗೆ 7.40ಕ್ಕೆ ಹೊರಡಲಿದೆ.
ಬದಲಾಗಿರುವ ವೇಳಾಪಟ್ಟಿ ಕೇವಲ ಶಿವಮೊಗ್ಗ ಹಾಗೂ ಬೆಂಗಳೂರು ನಡುವಿನ ಸಂಚಾರಕ್ಕೆ ಮಾತ್ರ ಅನ್ವಯಿಸುತ್ತಿದ್ದು, ತಾಳಗುಪ್ಪದಿಂದ ಹೊರಡುವ ಸಮಯದಲ್ಲಿ ಯಾವುದೇ ರೀತಿಯ ಬದಲಾವಣೆ ಮಾಡಿರುವುದಿಲ್ಲ.
Discussion about this post