ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ನಗರದ ಕೃಷ್ಣರಾಜೇಂದ್ರ ಜಲಶುದ್ಧೀಕರಣ ಘಟಕದಲ್ಲಿ ತುರ್ತು ದುರಸ್ಥಿ ಕಾರ್ಯ ಹಮ್ಮಿಕೊಂಡಿರುವುದರಿಂದ ಜೂನ್ 27ರಂದು ನಗರದ ಹಲವು ಭಾಗಗಳಲ್ಲಿ ನೀರು ಸರಬರಾಜು ಇರುವುದಿಲ್ಲ ಎಂದು ಕ.ನ.ನೀ.ಸ ಒಚ ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರು ತಿಳಿಸಿದ್ದಾರೆ.
ಪೊಲೀಸ್ ಕ್ವಾಟ್ರಸ್, ಟಿಪ್ಪುನಗರ, ತುಂಗಾನಗರ, ಜಿಲ್ಲಾ ಪಂಚಾಯತ್ ಕಚೇರಿ ಎದುರು, ಶಿವಮೊಗ್ಗ ಸರ್ಕಲ್, ಬಸವನಗುಡಿ, ರವೀಂದ್ರನಗರ, ಡಿ.ಸಿ. ಕಾಂಪೌಂಡ್, ಶೇಷಾದ್ರಿಪುರಂ, ಬಸವೇಶ್ವರನಗರ, ನವುಲೆ, ಶಾಂತಿನಗರ, ತ್ರಿಮೂರ್ತಿನಗರ, ಬೊಮ್ಮನಕಟ್ಟೆ, ದೇವರಾಜ್ ಅರಸ್ ಬಡಾವಣೆ, ಸೋಮಿನಕೊಪ್ಪ ಜೆ.ಎಚ್. ಪಟೇಲ್ ಬಡಾವಣೆ, ಚಿಕ್ಕಲ್, ಗುರುಪುರ, ಪುರಲೆ, ವಿದ್ಯಾನಗರ, ಮಲವಗೊಪ್ಪ, ಹರಿಗೆ, ಸೂಳೆಬೈಲ್, ಊರುಗಡೂರು, ವಾದಿ-ಎ-ಹುದಾ ಮತ್ತು ಮದಾರಿಪಾಳ್ಯ ಸುತ್ತುಮತ್ತಲಿನ ಪ್ರದೇಶಗಳಿಗೆ ಕುಡಿಯುವ ನೀರಿನ ಸರಬರಾಜಿನಲ್ಲಿ ವ್ಯತ್ಯಯವುಂಟಾಗಲಿದೆ.
Get In Touch With Us info@kalpa.news Whatsapp: 9481252093
Discussion about this post