ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ಕಿಡ್ನಿ #Kidney ನಮ್ಮ ದೇಹದ ಬಹು ಮುಖ್ಯ ಅಂಗ. ಪ್ರತಿ ಕ್ಷಣ ನಾವು ಕಿಡ್ನಿ ಆರೋಗ್ಯದ ಬಗ್ಗೆ ಚಿಂತಿಸಬೇಕಾದ ಅಗತ್ಯವಿದೆ. ಹೀಗಿರುವಾಗ ಬೆಂಗಳೂರಿನ ವೈಟ್ ಫೀಲ್ಡ್ ನಲ್ಲಿ ಇರುವ ಮೆಡಿಕವರ್ ಆಸ್ಪತ್ರೆ #MediCoverHospital ಕಿಡ್ನಿ ತಪಾಸಣೆಗಾಗಿ ವಿಶೇಷ ಪ್ಯಾಕೇಜ್ ಆರಂಭಿಸಿದೆ. ಮುಂಚಿತವಾಗಿ ಕಿಡ್ನಿಗೆ ಸಂಬಂಧಿಸಿದ ತಪಾಸಣೆ ನಡೆಸಲು ಮತ್ತು ಯಾವುದೇ ಸಮಸ್ಯೆ ಆಗದಂತೆ ತಡೆಯಲು ಈ ಪ್ಯಾಕೇಜ್ ಸಹಾಯವಾಗಲಿದೆ.
ಈ ವಿಶೇಷ ಆರೋಗ್ಯ ಯೋಜನೆ 10ನೇ ಫೆಬ್ರವರಿ ರಿಂದ 28ನೇ ಫೆಬ್ರವರಿ ರವರೆಗೆ, ಬೆಳಿಗ್ಗೆ 10 ರಿಂದ ಸಂಜೆ 5 ಗಂಟೆಯವರೆಗೆ (ಭಾನುವಾರಗಳು ಮತ್ತು ಸಾರ್ವಜನಿಕ ರಜಾದಿನಗಳು ಹೊರತುಪಡಿಸಿ) ಲಭ್ಯವಿರುತ್ತದೆ.
Also Read>> ಶಿವಮೊಗ್ಗ ಮೂಲದ ವಿದುಷಿ ಲತಾ ಲಕ್ಷ್ಮೀಶ ಸಾರಥ್ಯದ 22ನೇ ರಂಗಪ್ರವೇಶ
ಕಿಡ್ನಿ ಆರೋಗ್ಯ ನಮ್ಮ ದೇಹದ ಸಂಪೂರ್ಣ ಸುರಕ್ಷತೆಯ ಸಂಕೇತವಾಗಿದೆ. ಕಿಡ್ನಿ ಸಮಸ್ಯೆಯನ್ನು ಮುಂಚಿತ ಪತ್ತೆ ಮಾಡುವುದರಿಂದ ಗಂಭೀರ ಸಮಸ್ಯೆಗಳನ್ನು ತಪ್ಪಿಸಬಹುದು. ಈ ತಪಾಸಣೆ ಪ್ಯಾಕೇಜ್ ಕಡಿಮೆ ದರದಲ್ಲಿ ಸಮಗ್ರ ತಪಾಸಣೆಯನ್ನು ಒದಗಿಸಲು ವಿನ್ಯಾಸಗೊಳಿಸಲಾಗಿದೆ. ಇದರಿಂದ ಅಪಾಯದಲ್ಲಿರುವ ವ್ಯಕ್ತಿಗಳು ಸಕಾಲದಲ್ಲಿ ವೈದ್ಯಕೀಯ ಸಲಹೆ ಪಡೆಯಬಹುದು.
ಪ್ಯಾಕೇಜ್ ವಿವರಗಳು: ಈ ತಪಾಸಣೆ ಪ್ಯಾಕೇಜ್ ಒಳಗೊಂಡಿದೆ:
- ಸಂಪೂರ್ಣ ಮೂತ್ರ ಪರೀಕ್ಷೆ
- ಸೀರಮ್ ಕ್ರಿಯಾಟಿನಿನ್ ಪರೀಕ್ಷೆ
- ಅಲ್ಟ್ರಾಸೌಂಡ್ ಸ್ಕ್ಯಾನಿಂಗ್ (KUB)
- ನಫ್ರೋಲಾಜಿಸ್ಟ್ ಸಮಾಲೋಚನೆ
- ಆಹಾರ ತಜ್ಞರ ಸಮಾಲೋಚನೆ
- ಈ ಪ್ಯಾಕೇಜ್‌ನ ಪ್ರಾರಂಭಿಕ ದರ 4140ರೂ ಆಗಿದ್ದು, ಇದನ್ನು ಈಗ ವಿಶೇಷ ರಿಯಾಯಿತಿ ದರದಲ್ಲಿ ₹1000 ಗೆ ನೀಡಲಾಗುತ್ತಾ ಇದೆ.
- ಕೆಳಕಂಡ ಲಕ್ಷಣಗಳು ಅಥವಾ ಸ್ಥಿತಿಯುಳ್ಳವರು ಈ ತಪಾಸಣೆಯನ್ನು ಮಾಡಿಸಿಕೊಳ್ಳುವುದು ಉತ್ತಮ
- ಮಧುಮೇಹ #Diabetes ರಕ್ತದೊತ್ತಡ
- ಪೆಲ್ವಿಕ್ ನೋವು ಹಾಗೂ ಮೂತ್ರದಲ್ಲಿ ರಕ್ತ
- ಅಸಹಜ ಬಣ್ಣದ ಮೂತ್ರ ವಿಸರ್ಜನೆ ಉರಿಯುವುದು
- ಈ ಎಲ್ಲಾ ರೋಗ ಲಕ್ಷಣಗಳು ಇರುವವರು ಬಂದು ಪರೀಕ್ಷೆ ಮಾಡಿಕೊಳ್ಳಬಹುದು.
ಹಿರಿಯ ತಜ್ಞ ನಫ್ರೋಲಾಜಿಸ್ಟ್ #Nephrologist ಮತ್ತು ಕಿಡ್ನಿ ಟ್ರಾನ್ಸ್‌ಪ್ಲಾಂಟೇಷನ್ ವೈದ್ಯರಾದ ಡಾ. ರವಿಶಂಕರ್ ರವರನ್ನ ಭೇಟಿಯಾಗಿ ಸಲಹೆ ಪಡೆಯಬಹುದಾಗಿದೆ.
ಸಂದರ್ಶನಕ್ಕೆ ಅಥವಾ ಹೆಚ್ಚಿನ ಮಾಹಿತಿಗಾಗಿ 040 68334455 ಅನ್ನು ಸಂಪರ್ಕಿಸಿ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post