ಹನುಮಂತಾಪುರ: ಜಿಲ್ಲೆಯ ಒಟ್ಟಾರೆ ನೀರಾವರಿ ಯೋಜನೆಗಳಿಗೆ ನಮ್ಮ ಸರ್ಕಾರ ಬಹಳಷ್ಟು ಅನುದಾನ ನೀಡಿದೆ ಎಂದು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಅಭ್ಯರ್ಥಿ ಮಧು ಬಂಗಾರಪ್ಪ ಹೇಳಿದರು.
ಹನುಮಂತಾಪುರದಲ್ಲಿ ನಡೆದ ಚುನಾವಣಾ ಪ್ರಚಾರದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಮುಖ್ಯಮಂತ್ರಿಯಾಗಿದ್ದ ವೇಳೆ ರೈತರಿಗೆ ಪಂಪಸೆಟ್’ಗೆ ಉಚಿತ ವಿದ್ಯುತ್ ನೀಡಿದ್ದರು. ಕುಮಾರಸ್ವಾಮಿಯವರು ರೈತರಸಾಲ ಮನ್ನಾ ಮಾಡಿದ್ದರು. ಬಜೆಟ್’ನಲ್ಲಿ ಜಿಲ್ಲೆಯ ನೀರಾವರಿ ಯೋಜನೆಗಳಿಗೆ ಸಾಕಷ್ಟು ಹಣವನ್ನು ನೀಡಿದ್ದಾರೆ ಎಂದರು.

ತಮ್ಮ ಇತಿಮಿತಿಯೊಳಗೆ ಕುಮಾರಸ್ವಾಮಿಯವರು 45 ಸಾವಿರ ಕೋಟಿ ರೂ. ಸಾಲ ಮನ್ನಾ ಮಾಡಿದ್ದಾರೆ. ಕೇಂದ್ರ ಸರ್ಕಾರ ರೈತರ ಸಾಲ ಮನ್ನಾ ಮಾಡಲಿಲ್ಲ. ರೈತರ ಸಾಲ ಮನ್ನ ಮಾಡಿದರೆ ಅದು ಪಾಪದ ಕೆಲಸವೆಂದು ಹೇಳಿದ್ದಾರೆ. ಬಿಜೆಪಿಯವರು ಚುನಾವಣೆಯಲ್ಲಿ ಸೈನಿಕರ ವಿಷಯವನ್ನು ಎಳೆದು ತರುತ್ತಾರೆ. ಚುನಾವಣೆಯಲ್ಲಿ ನಾನು ಸೈನಿಕರನ್ನು ಎಳೆದು ತರುವುದಿಲ್ಲ ಎಂದರು.
ರೈತ ಮುಖಂಡ ಎಚ್.ಆರ್. ಬಸವರಾಜಪ್ಪ ಅವರನ್ನು ಭೇಟಿ ಮಾಡಿದ ಮಧು ಬಂಗಾರಪ್ಪ ಅವರ ಮನೆಯಲ್ಲಿ ಮನೆಯಲ್ಲಿ ಒಟ್ಟಿಗೆ ತಿಂಡಿ ಸವಿದರು. ಈ ವೇಳೆ ಬಸವರಾಜಪ್ಪ ಅವರು ಮಾಜಿ ಮುಖ್ಯಮಂತ್ರಿ ಬಂಗಾರನವರೊಟ್ಟಿಗೆ ಸಂಬಂಧವನ್ನು ಮೆಲುಕು ಹಾಕಿದರು.

ನಂತರ ಮಾತನಾಡಿದ ಬಸವರಾಜಪ್ಪ, ಮೈತ್ರಿಕೂಟದ ಅಭ್ಯರ್ಥಿ ನಮ್ಮ ಬೆಂಬಲ ಕೇಳಲು ಬಂದಿದ್ದಾರೆ. ದೇಶದ ಭದ್ರತೆಯನ್ನು ಕಾಪಾಡುತ್ತಿರುವುದು ಸೈನಿಕರು ಹಾಗೂ ರೈತರು. ಈ ಹಿಂದೆಯು ಕೂಡ ಯುದ್ದಗಳು ನಡೆದಿವೆ. ಅಮೆರಿಕಾ ಇನ್ನಿತರ ದೇಶಗಳಿಂದ ಆಹಾರವನ್ನು ಅಮದು ಮಾಡಿಕೊಳ್ಳಲಾಗುತ್ತಿತ್ತು. ರೈತರು ಆಹಾರ ಬೆಳೆದು ದೇಶ ಸ್ವಾವಲಂಬಿಯನ್ನಾಗಿ ಮಾಡಿದೆ. ಯಾವುದೇ ರಾಜಕೀಯ ಪಕ್ಷದಿಂದ ದೇಶದ ಭದ್ರತೆಗೆ ಕಾಪಾಡುವುದಿಲ್ಲ. ರೈತರ ಸಾಲಮನ್ನಾ ವಿಚಾರಕ್ಕೆ ಬಂದರೆ ದೊಡ್ಡ ಚರ್ಚೆಯಾಗುತ್ತೆ. ಆದರೆ, ಉದ್ಯಮಿಗಳ ಸಾಲಮನ್ನಾ ಮಾಡಿರುವುದು ಗೊತ್ತೆ ಆಗಿಲ್ಲ. ರೈತರ ಸಾಲ ಮನ್ನ ಮಾಡಿದರೆ ದೇಶದ ಆರ್ಥಿಕ ಪರಿಸ್ಥಿತಿ ಬುಡಮೇಲು ಆಗುತ್ತೆ ಅಂತ ಹೇಳುತ್ತಾರೆ. ರೈತರಿಗೆ ಜಿಎಸ್’ಟಿ ಹಾಕಬೇಕಾ. ದಿನೇದಿನೇ ರೈತರ ಸಾಮಾಗ್ರಿಗಳು ಹೆಚ್ಚಾಗುತ್ತಿವೆ, ಯಾವುದೇ ಧರ್ಮದ ಹೆಸರಿನಲ್ಲಿ, ಜಾತಿ ಹೆಸರಿನಲ್ಲಿ, ಯಾವುದೇ ಆಮಿಷಕ್ಕೆ ಒಳಗಾಗ ಬೇಡಿ ಎಂದು ಕರೆ ನೀಡಿದರು.

ಹರತಾಳು ಗ್ರಾಮದಲ್ಲಿ ಮಾತನಾಡಿದ ಮಧು ಬಂಗಾರಪ್ಪ, ಈ ಭಾಗದಲ್ಲಿ ಅರಣ್ಯ ಭೂಮಿ ಸಮಸ್ಯೆಯಿದೆ. ಬಗರ್ ಹುಕುಂ ಸಮಸ್ಯೆ ಕಸ್ತೂರಿ ರಂಗನ ವರದಿ ಸೇರಿದಂತೆ ಇನ್ನು ಹಲವು ಸಮಸ್ಯೆಗಳು ಇವೆ. ಕಳೆದ 10 ವರ್ಷದಿಂದ ಯಡಿಯೂರಪ್ಪ ಹಾಗೂ ಅವರ ಮಗ ರಾಘವೇಂದ್ರರಿಗೆ ಅವಕಾಶ ನೀಡಿದ್ದೀರಾ. ಆದರೆ ಅವರು ಬಿಲ್ಲಿನ ಸಮಸ್ಯೆಗಳ ಬಗ್ಗೆ ಬಗೆಹರಿಸಲು ವಿಫಲರಾದರು ಮತ್ತು ಸಂಸತ್’ನಲ್ಲಿ ಒಂದು ಮಾತನಾಡಿಲ್ಲ. ಅವರಿಗೆ ಇಷ್ಟು ವರ್ಷ ಅದಿಕಾರ ನೀಡಿದ್ದೀರಾ. ನನಗೆ ಒಮ್ಮೆ ಅಧಿಕಾರ ಕೂಡಿ ನಾನು ನಿಮ್ಮ ಪರವಾಗಿ ಪ್ರಾಮಾಣಿಕವಾಗಿ ಕೆಲಸ ಮಾಡಿ ಸಂಸತ್ ನಲ್ಲಿ ಧ್ವನಿಯಾಗುತ್ತೇನೆ ಎಂದರು.



















