ಕಲ್ಪ ಮೀಡಿಯಾ ಹೌಸ್ | ಪಣಜಿ |
ಮರಾಠಿ ಚಿತ್ರರಂಗದ ಯುವ ನಟಿ ಈಶ್ವರಿ ದೇಶಪಾಂಡೆ ಕಾರು ಅಪಘಾತದಲ್ಲಿ ಮೃತಪಟ್ಟಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.
ಸೋಮವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ನಟಿ ಈಶ್ವರಿ ದೇಶಪಾಂಡೆ (25) ದುರಂತ ಸಾವನ್ನಪಿದ್ದಾರೆ. ಗೆಳೆಯ ಶುಭಂ ದಡ್ಗೆ ಜೊತೆ ಕಾಲ ಕಳೆಯಲ ಗೋವಾಗೆ ಬಂದಿದ್ದ ನಟಿ ಈಶ್ವರಿ ದೇಶಪಾಂಡೆ ಬಾರದ ಲೋಕಕ್ಕೆ ಪಯಣಿಸಿದ್ದಾರೆ.
ಕಳೆದ ಸೆ.15ರಂದೇ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಗೋವಾಗೆ ಬಂದಿದ್ದರು. 20 (ಸೋಮವಾರ) ಬೆಳಗ್ಗೆ ಬಾರ್ಡೇಜ್ ತಾಲೂಕಿನ ಬಳಿ ಈಶ್ವರಿ ದೇಶಪಾಂಡೆ ಮತ್ತು ಶುಭಂ ದಡ್ಗೆ ಪ್ರಯಾಣ ಮಾಡುತ್ತಿದ್ದ ಕಾರು ಅಪಘಾತಕ್ಕೀಡಾಗಿದ್ದು, ಇಬ್ಬರೂ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ ಎನ್ನಲಾಗಿದೆ.
ಈಶ್ವರಿ ದೇಶಪಾಂಡೆ ಪ್ರೇಮಾಚೆ ಸೈಡ್ ಎಫೆಕ್ಟ್ಸ್ ಸಿನಿಮಾ ಮೂಲಕ ಮರಾಠಿ ಚಿತ್ರರಂಗ ಪ್ರವೇಶಿಸಲು ತಯಾರಾಗಿದ್ದರು. ಆದರೆ ಅದು ನೆರವೇರುವ ಅವರು ಮೃತಪಟ್ಟಿದ್ದಾರೆ. ಗೋವಾ ಪ್ರವಾಸಕ್ಕೆ ತೆರಳುವ ಮುನ್ನವೇ ಕೆಲ ಸಿನಿಮಾಗಳ ಚಿತ್ರೀಕರಣ ಮುಗಿಸಿದ್ದರು ಎನ್ನಲಾಗಿದೆ. ಯುವ ನಟಿ ಈಶ್ವರಿ ದೇಶಪಾಂಡೆ ನಿಧನಕ್ಕೆ ಮರಾಠಿ ಚಿತ್ರರಂಗ ಕಂಬನಿ ಮಿಡಿದಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post