ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಲಾಕ್ ಡೌನ್ ಘೋಷಣೆ ಮಾಡಿರುವ ನಡುವೆಯೇ ನಗರದಲ್ಲಿ ಇಂದು ಹಲವು ಮಾಂಸ ಮಾರಾಟ ಅಂಗಡಿಗಳ ಮುಂದೆ ಜನರು ಮುಗಿಬಿದ್ದ ಘಟನೆ ನಡೆದಿದೆ.
ವಿನೋಬನಗರದ ಲಕ್ಷ್ಮೀ ಚಿತ್ರಮಂದಿರದ ಸಮೀಪ ಮಟನ್ ಅಂಗಡಿಯೊಂದರ ಬಳಿ ಮಾರುದ್ದದ ಸಾಲು ಕಂಡುಬಂದಿತು. ಪಾಲಿಕೆ ಅಧಿಕಾರಿ-ಸಿಬ್ಬಂದಿಗಳು, ಪೊಲೀಸರು ಸ್ಥಳಕ್ಕೆ ಆಗಮಿಸಿ ಜನರನ್ನು ಚದುರಿಸಿದರು. ಮಾಂಸ ಮಾರಾಟ ಮಾಡುವವರಿಗೂ ಎಚ್ಚರಿಕೆ ನೀಡಿದರು. ಸೋಶಿಯಲ್ ಡಿಸ್ಟೆನ್ಸಿಂಗ್ ಕಾಪಾಡುವಂತೆ ಸೂಚಿಸಿದರು. ಕೆಲ ಗಂಟೆಗಳ ನಂತರ ಬಹುತೇಕ ಮಾಂಸದ ಅಂಗಡಿಗಳ ಬಾಗಿಲು ಕೂಡ ಬಂದ್ ಆದವು.
(ವರದಿ: ಬಿ. ರೇಣುಕೇಶ್)
Discussion about this post