2014ರ ಚುನಾವಣೆಯಲ್ಲಿ ದೇಶದಲ್ಲಿ ಆರಂಭವಾದ ನರೇಂದ್ರ ಮೋದಿ ಅಲೆ, ಆನಂತರವಂತೂ ವಿಶ್ವದೆಲ್ಲೆಡೆ ವ್ಯಾಪಿಸಿದ್ದು ಒಂದು ವೈಭವೋಪೇತ ಇತಿಹಾಸವೇ ಹೌದು.
ಮೋದಿಯವರ ಒಂದೊಂದು ನಡೆ, ಹೇಳಿಕೆ ಹಾಗೂ ಹೆಜ್ಜೆಗಳು ಇಡಿಯ ದೇಶದ ಕೋಟ್ಯಂತರ ದೇಶಭಕ್ತರ ಮೇಲೆ ಪರಿಣಾಮ ಬೀರುವ ಜೊತೆಯಲ್ಲಿ ಕೋಟ್ಯಂತರ ಮಂದಿ ಜೀವನ ಕಟ್ಟಿಕೊಳ್ಳುವಲ್ಲಿಯೂ ಪ್ರೇರಿತವಾಗಿದೆ. ಮಾತ್ರವಲ್ಲ ಎಷ್ಟೋ ಮಂದಿ ಮೋದಿಯವರ ಹೆಸರನ್ನು ತಮ್ಮ ಮಕ್ಕಳಿಗೆ ನಾಮಕರಣ ಮಾಡಿದ್ದರೆ, ಇನ್ನು ಕೆಲವು ಮಂದಿ ತಮ್ಮ ಅಂಗಡಿ/ಮಳಿಗೆಗಳಿಗೆ ನಮೋ ಹೆಸರಿಟ್ಟಿದ್ದಾರೆ. ಈ ರೀತಿ ಪ್ರಧಾನಿಯವರ ಹೆಸರಿಟ್ಟು ಶಿವಮೊಗ್ಗ-ಭದ್ರಾವತಿ ಹೆದ್ದಾರಿಯಲ್ಲಿ ಟೀ ಸ್ಟಾಲ್ ನಡೆಸುತ್ತಿದ್ದಾರೆ ವಿಜಯ್ ಕುಮಾರ್.
ಭದ್ರಾವತಿಯಿಂದ ಶಿವಮೊಗ್ಗಕ್ಕೆ ತೆರಳುವ ದಾರಿಯಲ್ಲಿ ಶಿವಮೊಗ್ಗ ಪ್ರವೇಶಿಸುವ ಮುನ್ನ ಹರಿಗೆ ಎಂಬಲ್ಲಿ ನಮೋ ಟೀ ಸ್ಟಾಲ್ ಇದೆ. ಹರಿಗೆ ಬಡಾವಣೆಯ ನಿವಾಸಿ ವಿಜಯ್ ಕುಮಾರ್ ಎನ್ನುವವರು ಇಲ್ಲಿ ಸಣ್ಣದೊಂದು ಟೀ ಸ್ಟಾಲ್ ಇಟ್ಟುಕೊಂಡಿದ್ದು, ಇದಕ್ಕೆ ತನ್ನ ನೆಚ್ಚಿನ ನಾಯಕನ ಹೆಸರಿಟುವ ಮೂಲಕ ಅಭಿಮಾನ ಮೆರೆದಿದ್ದಾರೆ.
ಹಿಂದೆ ಈ ಅಂಗಡಿಯನ್ನು ಬೇರೆಯವರು ನಡೆಸುತ್ತಿದ್ದರು. 2016ರಲ್ಲಿ ಇದನ್ನು ಕೊಂಡುಕೊಂಡ ವಿಜಯ್ ಅವರು ಇದನ್ನು ನವೀಕರಣ ಮಾಡಿ, ಇದಕ್ಕೆ ನಮೋ ಟೀ ಸ್ಟಾಲ್ ಎಂದು ಹೆಸರಿಟ್ಟು, ಪ್ರಧಾನಿಯವರ ಸುಂದರ ಭಾವಚಿತ್ರವನ್ನೂ ಸಹ ಹಾಕಿಕೊಂಡಿದ್ದಾರೆ.
ಯಾಕೆ ನಮೋ ಟೀ ಸ್ಟಾಲ್ ಎಂದು ಹೆಸರಿಟ್ಟಿದ್ದೀರಿ ಎಂದು ಪ್ರಶ್ನಿಸಿದರೆ ವಿಜಯ್ ನೀಡಿದ ಉತ್ತರ ಎಂತಹ ಅದ್ಬುತವಾಗಿತ್ತು ಗೊತ್ತಾ?
ಸರ್, ನರೇಂದ್ರ ಮೋದಿಯವರು ಈ ದೇಶದ ಪ್ರಧಾನಿಯಾಗಿ ಆಡಳಿತ ಮಾತ್ರ ನಡೆಸುತ್ತಿಲ್ಲ. ಇಡಿಯ ದೇಶಕ್ಕೆ ಒಂದು ಸಂಸ್ಕಾರ ಕೊಟ್ಟಿದ್ದಾರೆ. ಆಡಳಿತ ನಡೆಸುವುದು ದೊಡ್ಡದಲ್ಲ. ಆದರೆ, ದೇಶದ ಪ್ರಜೆಗಳಿಗೆ, ಸಮಾಜಕ್ಕೆ ಅದರಿಂದ ಒಂದು ಸಂಸ್ಕಾರ, ಸದಭಿರುಚಿ, ಕನಸು ಹಾಗೂ ಆತ್ಮಸ್ಥೈರ್ಯ ತುಂಬುವುದು ವಿಶೇಷವಾದುದು. ಅವರವರ ಮಕ್ಕಳಿಗೆ, ಮನೆಯವರಿಗೇ ಸಂಸ್ಕಾರ, ಒಳ್ಳೆಯ ಗುಣಗಳನ್ನು ಈಗಿನ ಕಾಲದಲ್ಲಿ ಹೇಳಿಕೊಡುವುದೇ ಕಷ್ಟ. ಆದರೆ, ಇಂತಹ ಸಂದರ್ಭದಲ್ಲಿ ಮೋದಿ ತಮ್ಮ ಆಡಳಿತ, ನಡೆತೆ ಹಾಗೂ ಗುಣಗಳ ಮೂಲಕ ಇಡಿಯ ದೇಶಕ್ಕೇ ಒಂದು ಸಂಸ್ಕಾರ ಕಲಿಸಿಕೊಟ್ಟಿದ್ದಾರೆ. ಅವರಿಂದ ಪ್ರೇರಿತರಾದ ಕೋಟ್ಯಂತರ ಮಂದಿ ಇಂದು ಜೀವನವನ್ನೇ ಬದಲಿಸಿಕೊಳ್ಳುತ್ತಿದ್ದಾರೆ. ಇಂತಹ ವ್ಯಕ್ತಿಯ ಹೆಸರನ್ನು ನನ್ನ ಅಂಗಡಿಗೆ ಇಟ್ಟಿರುವುದು ನನ್ನ ಹೆಮ್ಮೆ ಎನ್ನುತ್ತಾರೆ ವಿಜಯ್.
ಸುಮಾರು 30 ವರ್ಷಗಳಿಂದ ಆರ್’ಎಸ್’ಎಸ್ ಕಾರ್ಯಕರ್ತರಾಗಿರುವ ವಿಜಯ್, 2014ರ ಚುನಾವಣೆಯಲ್ಲಿ ಮೋದಿ ಪ್ರಧಾನಿಯಾಗುವಲ್ಲಿ ಕೆಲಸ ಮಾಡಿದ್ದಾರೆ. ಈ ಬಗ್ಗೆ ಮಾತನಾಡಿದ ವಿಜಯ್ ‘ಗೋವಾ ಕಾರ್ಯಕಾರಣಿಯಲ್ಲಿ ಮೋಹನ್ ಭಾಗ್ವತ್ ಅವರ ಹೇಳಿಕೆಯಂತೆ ನಿತಿನ್ ಗಡ್ಕರಿ ಅವರು ಮೋದಿ ಅವರ ಹೆಸರನ್ನು ಹೇಳಿದ ನಂತರ, ಓರ್ವ ವ್ಯಕ್ತಿ ದೇಶದ ನಾಯಕನಾಗಿ ಹೊರಹೊಮ್ಮುತ್ತಿದ್ದಾರೆ. ಇವರ ಪರವಾಗಿ ಕೆಲಸ ಮಾಡಬೇಕು ಎಂದು ನಿರ್ಧರಿಸಿದೆ. ಇದಕ್ಕಾಗಿ ವೋಟರ್ ಲಿಸ್ಟ್’ಗೆ ಹೆಸರು ಸೇರಿಸುವ ಕಾರ್ಯವನ್ನು ಆರಂಭಿಸಿದೆವು. ಇದಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ಬಂದಿತು. ಅಲ್ಲದೇ, ಯುವಕರು ಮೋದಿಯವರನ್ನು ಬೆಂಬಲಿಸುವುದು ಖಚಿತವಾಯಿತು.
ಆದರೆ, ಈ ಬಾರಿ ವೋಟರ್ ಲಿಸ್ಟ್ ಎನ್ರೋಲ್’ಮೆಂಟ್ ಮಾಡಿಸುವ ಎಂದರೆ ಜನರ ಅಷ್ಟು ಅವಕಾಶವನ್ನೇ ನೀಡಿಲ್ಲ. ಬಹಳಷ್ಟು ಮಂದಿ ಸ್ವಯಂ ಪ್ರೇರಿತರಾಗಿ ನೋಂದಣಿ ಮಾಡಿಕೊಂಡಿದ್ದಾರೆ. ಮಾತ್ರವಲ್ಲ, ಸ್ಥಳೀಯ ಹಾಗೂ ರಾಜ್ಯ ಮಟ್ಟದಲ್ಲಿ ಯಾರಿಗೆ ಬೇಕಾದರೂ ಮತ ಹಾಕುತ್ತೇವೆ. ಆದರೆ, ರಾಷ್ಟ್ರ ಮಟ್ಟದಲ್ಲಿ ಮೋದಿಯವರಿಗೆ ಮಾತ್ರ ನಮ್ಮ ಬೆಂಬಲ ಎನ್ನುತ್ತಿದ್ದಾರೆ. ಅದರಲ್ಲೂ ಶೇ.30 ರಿಂದ40ರಷ್ಟು ಯುವಕರು ಈಗಾಗಲೇ ಮೋದಿಯವರನ್ನು ಬೆಂಬಲಿಸಲು ನಿರ್ಧರಿಸಿದ್ದಾರೆ ಎನ್ನುತ್ತಾರೆ ವಿಜಯ್.
ಇಂದಿರಾ ಗಾಂಧಿ ನಿರ್ಮಿಸಿದ್ದ ದಾಖಲೆಯನ್ನು ಮೋದಿಯವರು ಈ ಬಾರಿ ಮುರಿಯಲಿದ್ದು, ನನ್ನ ವೈಯಕ್ತಿಕ ಅಭಿಪ್ರಾಯದ ಪ್ರಕಾರ 410ಕ್ಕೂ ಅಧಿಕ ಸ್ಥಾನ ಪಡೆಯುವುದು ನಿಶ್ಚಿತ. ಅಷ್ಟೇ ಏಕೆ ಖುದ್ದು ಇಂದಿರಾಗಾಂಧಿಯೇ ಪ್ರಸ್ತುತ ಮೋದಿ ಎದುರು ಸ್ಪರ್ಧಿಸಿದ್ದರೇ ಅವರ ಸೋಲುವುದು ನಿಶ್ಚಿತ. ಹಾಗಿದೆ ದೇಶದಲ್ಲಿ ಮೋದಿಯವರ ಬೆಂಬಲ ಎಂಬ ದಿಟ್ಟ ನುಡಿಗಳನ್ನು ಆಡುತ್ತಾರೆ ವಿಜಯ್.
Discussion about this post