ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ಕಲಬುರಗಿಯಲ್ಲಿ ನಡೆಯಲಿರುವ 85ನೆಯ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಹಿರಿಯ ಸಾಹಿತಿ ಎಚ್.ಎಸ್. ವೆಂಕಟೇಶಮೂರ್ತಿ ಆಯ್ಕೆಯಾಗಿದ್ದಾರೆ.
ಈ ಕುರಿತಂತೆ ಸುದ್ಧಿಗೋಷ್ಠಿಯಲ್ಲಿಂದು ಮಾತನಾಡಿದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಮನು ಬಳಿಗಾರ್, ಈ ಬಾರಿ ಕಲಬುರಗಿಯಲ್ಲಿ ನಡೆಯಲಿರುವ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆ ವೇಳೆ ಕಾರ್ಯಕಾರಿಣಿಯಲ್ಲಿ ಹಲವು ಹೆಸರುಗಳು ಪ್ರಸ್ತಾಪವಾಗಿತ್ತು. ಆದರೂ, ಒಮ್ಮತದಿಂದ ವೆಂಕಟೇಶ ಮೂರ್ತಿ ಅವರನ್ನು ಅಂತಿಮವಾಗಿ ಆಯ್ಕೆ ಮಾಡಲಾಯಿತು.
ನಾಡು ಕಂಡ ಹೆಮ್ಮೆ ಸಾಹಿತಿಯ ಸಾಹಿತ್ಯ ಕೃಷಿಗೆ ಒಲಿದ ಗೌರವ ಇದಾಗಿದ್ದು, ಎಚ್.ಎಸ್. ವೆಂಕಟೇಶ್ ಮೂರ್ತಿ ಅವರನ್ನು ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಅಭಿನಂದಿಸುತ್ತದೆ.
Get in Touch With Us info@kalpa.news Whatsapp: 9481252093















