ಹಂಪಿ: ಹಂಪಿ ಉತ್ಸವ ಹಾಗೂ ಆನೆಗುಂದಿ ಉತ್ಸವಕ್ಕೆ ಸಿದ್ದತೆ ನಡೆಯುತ್ತಿದ್ದು, ಈ ಕುರಿತಂತೆ ಪೂರ್ವಭಾವಿ ಸಭೆ ನಡೆಸಿ, ಹಲವು ವಿಚಾರಗಳನ್ನು ಚರ್ಚಿಸಲಾಗಿದೆ.
ಹಂಪೆ ಉತ್ಸವ ಮತ್ತು ಆನೆಗುಂದಿ ಉತ್ಸವ ಜನವರಿ 10 ಮತ್ತು 11 ನಡೆಯಲಿದ್ದು, ಈ ಬಾರಿ ಸ್ಥಳೀಯ ಕಲಾವಿದರಿಗೆ ಹೆಚ್ಚಿನ ಆದ್ಯತೆಯನ್ನು ನೀಡುವುದಾಗಿ ಡಿಸಿಎಂ ಲಕ್ಷ್ಮಣ್ ಸವದಿ ಜೊತೆ ಮಾತನಾಡಿ ಕನ್ನಡ ಮತ್ತು ಸಂಸ್ಕೃತಿ ಸಚಿವರಾದ ಸಿ.ಟಿ.ರವಿಯವರು ತಿಳಿಸಿದರು.
2020ರ ಜನವರಿ 10ರಂದು ಮುಖ್ಯಮಂತ್ರಿ ಬಿ.ಎಸ್. ಯಡಿಯುರಪ್ಪನವರು ಉತ್ಸವದಲ್ಲಿ ಭಾಗವಹಿಸಿ, ಕಾರ್ಯಕ್ರಮ ಉದ್ಘಾಟಿಸಲಿದ್ದು, ಜ.11ರಂದು ಸಮಾರಂಭಕ್ಕೆ ಕೇಂದ್ರದ ಸಂಸ್ಕೃತಿ ಸಚಿವರನ್ನು ಆಹ್ವಾನಿಸಲಾಗುತ್ತದೆ ಎಂದರು.
ಪ್ರತಿ ವರ್ಷದಂತೆ ಸ್ಥಳೀಯ ಕಲಾವಿದರಿಗೆ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಅವಕಾಶ ಹೆಚ್ಚಿಗೆ ನೀಡಲು ತಿಳಿಸಿದರು. ಅದರಂತೆ ಹೊರ ರಾಜ್ಯದ ಮತ್ತು ಬೇರು ದೇಶದ ಕಲಾವಿದರನ್ನು ಸಹ ಅವಕಾಶ ನೀಡಲಾಗುತ್ತದೆ. ಈ ಸಾರಿ ಮಹಿಳಾ ಸಂಘ ಸಂಸ್ಥೆಗಳನ್ನು ಹೆಚ್ಚಿನ ಪ್ರಮಾಣದಲ್ಲಿ ಬಳಸಿಕೊಳ್ಳುಲು ನಿರ್ಧರಿಸಲಾಗಿದೆ. ಹಂಪೆ ಉತ್ಸವಕ್ಕೆ ಬೇಕಾಗುವ ಅನುದಾನ ಬಿಡುಗಡೆ ಮಾಡಲಾಗುತ್ತದೆ ಎಂದು ತಿಳಿಸಿದರು.
(ವರದಿ: ಮುರಳೀಧರ್ ನಾಡಿಗೇರ್)
Discussion about this post