ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೇಶದಲ್ಲಿ ಇಂಧನ ದರ ಏರಿಕೆಯ ಸರಣಿ ಮುಂದುವರಿದಿದ್ದು, ಸಾರ್ವಜನಿಕರ ಮೇಲೆ ಮತ್ತೊಮ್ಮೆ ಬೆಲೆ ಏರಿಕೆಯ ಹೊರೆ ಬಿದ್ದಿದೆ. ಸೋಮವಾರ ಪೆಟ್ರೋಲ್ #Petrol ದರವನ್ನು ಲೀಟರ್‌ಗೆ ₹2.61 ಹಾಗೂ #Diesel ಡೀಸೆಲ್ ದರವನ್ನು ₹2.71 ಹೆಚ್ಚಿಸಲಾಗಿದೆ. ಕಳೆದ ಎರಡು ವಾರಗಳಲ್ಲಿ ಇದು ನಾಲ್ಕನೇ ಬಾರಿ ದರ ಏರಿಕೆಯಾಗಿದೆ.
ಮೇ 15ರಿಂದ ಆರಂಭವಾದ ಈ ನಿರಂತರ ಏರಿಕೆಯಿಂದ ಪೆಟ್ರೋಲ್ ಮತ್ತು ಡೀಸೆಲ್ ದರಗಳಲ್ಲಿ ಒಟ್ಟಾರೆ ಸುಮಾರು ₹7.5ರಷ್ಟು ಹೆಚ್ಚಳವಾಗಿದ್ದು, ಜನಸಾಮಾನ್ಯರಲ್ಲಿ ಆತಂಕಕ್ಕೆ ಕಾರಣವಾಗಿದೆ.
Also Read>> ಉತ್ತರ ಕನ್ನಡ | ಕಡಲತೀರದಲ್ಲಿ ಭೀಕರ ದುರಂತ | ಮೃತರ ಸಂಖ್ಯೆ 11ಕ್ಕೆ ಏರಿಕೆ | ಹೇಗಾಯ್ತು ಘಟನೆ?
ಹೊಸ ದರ ಪರಿಷ್ಕರಣೆಯ ನಂತರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಪೆಟ್ರೋಲ್ ದರ ಲೀಟರ್‌ಗೆ ₹102.12ಕ್ಕೆ ಏರಿಕೆಯಾಗಿದ್ದು, ಡೀಸೆಲ್ ₹95.20ಕ್ಕೆ ತಲುಪಿದೆ. ಮುಂಬೈನಲ್ಲಿ ಪೆಟ್ರೋಲ್ ₹111.21 ಮತ್ತು ಡೀಸೆಲ್ ₹97.83 ಆಗಿದೆ. ಕೊಲ್ಕತ್ತಾದಲ್ಲಿ ಪೆಟ್ರೋಲ್ ₹113.51 ಹಾಗೂ ಡೀಸೆಲ್ ₹99.82 ದರಕ್ಕೆ ಮಾರಾಟವಾಗುತ್ತಿದೆ.
ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ಪೆಟ್ರೋಲ್ ದರ ₹108.09 ಆಗಿದ್ದು, ಡೀಸೆಲ್ ಕೂಡ ₹108.09ಕ್ಕೆ ಏರಿಕೆಯಾಗಿದೆ. ಚೆನ್ನೈನಲ್ಲಿ ಪೆಟ್ರೋಲ್ ₹107.77 ಹಾಗೂ ಡೀಸೆಲ್ ₹99.55 ಆಗಿದೆ.
ರಾಜ್ಯ ಸರ್ಕಾರಗಳು ವಿಧಿಸುವ ಸ್ಥಳೀಯ ತೆರಿಗೆಗಳಲ್ಲಿ ವ್ಯತ್ಯಾಸ ಇರುವುದರಿಂದ ಪ್ರತಿ ರಾಜ್ಯದಲ್ಲೂ ಇಂಧನ ದರಗಳಲ್ಲಿ ಬದಲಾವಣೆ ಕಂಡು ಬರುತ್ತಿದೆ.
Also Read>> ಬಹುತೇಕ ಜನರ ಸಮಸ್ಯೆಗೆ ಅವಿಭಕ್ತ ಕುಟುಂಬವೇ ಅಂತಿಮ ಪರಿಹಾರ | ಸತ್ಯಾತ್ಮ ತೀರ್ಥ ಸ್ವಾಮೀಜಿ
ಮೇ 15ರಂದು ಮೊದಲ ಬಾರಿಗೆ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ ₹3ರಷ್ಟು ಹೆಚ್ಚಿಸಲಾಗಿತ್ತು. ಬಳಿಕ ಮೇ 19ರಂದು ಸುಮಾರು 90 ಪೈಸೆ ಏರಿಕೆ ಮಾಡಲಾಗಿದ್ದು, ಮೇ 23ರಂದು ಮತ್ತೆ ಪೆಟ್ರೋಲ್‌ಗೆ ₹0.87 ಮತ್ತು ಡೀಸೆಲ್‌ಗೆ ₹0.91 ಹೆಚ್ಚಳ ಮಾಡಲಾಗಿತ್ತು.
ಇಂಧನ ದರ ಏರಿಕೆಯಿಂದ ಸಾರಿಗೆ ವೆಚ್ಚ, ಆಹಾರ ಪದಾರ್ಥಗಳ ಬೆಲೆ ಹಾಗೂ ಕೈಗಾರಿಕಾ ಉತ್ಪಾದನಾ ವೆಚ್ಚಗಳಲ್ಲಿ ಏರಿಕೆ ಸಂಭವಿಸುವ ಸಾಧ್ಯತೆ ಇದ್ದು, ಒಟ್ಟಾರೆ ದರ ಏರಿಕೆಯ ಭೀತಿ ಹೆಚ್ಚಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















