ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಕ್ರಿಕೆಟ್ #Cricket ಪಂದ್ಯಾವಳಿಯಲ್ಲಿ ಆಟವಾಡುತ್ತಿದ್ದ ವೇಳೆ ಹೃದಯಾಘಾತಕ್ಕೆ #HeartAttack ಒಳಗಾಗಿ ಕ್ರೀಡಾಪಟುವೊಬ್ಬರು ಸಾವನ್ನಪ್ಪಿರುವ ದುರ್ಘಟನೆ ನಡೆದಿದೆ.
#Shivamogga ಶಿವಮೊಗ್ಗ ಮೂಲದ ಟಿ.ಎಲ್. ಅಕ್ಷಯ್ (38) ಮೃತರು. ಅಕ್ಷಯ್ ಅವರು ಬೆಂಗಳೂರಿನಲ್ಲಿ ಬ್ಯಾಂಕ್ ಆಫ್ ಬರೋಡಾದಲ್ಲಿ ಉದ್ಯೋಗದಲ್ಲಿದ್ದರು.
Also Read>> ಉತ್ತರ ಕನ್ನಡ | ಕಡಲತೀರದಲ್ಲಿ ಭೀಕರ ದುರಂತ | ಮೃತರ ಸಂಖ್ಯೆ 11ಕ್ಕೆ ಏರಿಕೆ | ಹೇಗಾಯ್ತು ಘಟನೆ?
ನಿನ್ನೆ ನಡೆದ ಕ್ರಿಕೆಟ್ ಟೂರ್ನಿಯಲ್ಲಿ ಬೌಲಿಂಗ್ ಮಾಡುತ್ತಿದ್ದ ವೇಳೆ ಸುಸ್ತಾಗುತ್ತಿದೆ ಎಂದು ಹೇಳಿ ಪೆವಿಲಿಯನ್’ಗೆ ತೆರಳಿದ್ದರು. ಬಳಿಕ ಮತ್ತೆ ಮೈದಾನಕ್ಕಿಳಿದು ಬೌಲಿಂಗ್ ಮಾಡಲು ಮುಂದಾದಾಗ ಏಕಾಏಕಿ ಕುಸಿದು ಬಿದ್ದಿದ್ದಾರೆ. ತಕ್ಷಣ ಅವರನ್ನು ಸಮೀಪದ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಮಾರ್ಗ ಮಧ್ಯದಲ್ಲೇ ಅವರು ಮೃತಪಟ್ಟಿದ್ದಾರೆ.
ಮೃತರ ತಂದೆ ದಿ. ಲೋಕೇಶ್ ಅವರು ಶಿವಮೊಗ್ಗದ ವಿವಿಧ ಪೊಲೀಸ್ ಠಾಣೆಗಳಲ್ಲಿ ಹಾಗೂ ಎಸ್ಪಿ ಕಚೇರಿಯಲ್ಲಿ ಸೇವೆ ಸಲ್ಲಿಸಿದ್ದರು.
ಅಕ್ಷಯ್ ಅವರು ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್’ನಲ್ಲಿ ತರಬೇತಿ ಪಡೆದು, ನಂತರ ಕೆಪಿಎಲ್ ಹಾಗೂ ಅಂಡರ್-19 ತಂಡಗಳಿಗೆ ಬೌಲಿಂಗ್ ಕೋಚ್ ಆಗಿ ಸೇವೆ ಸಲ್ಲಿಸಿದ್ದರು.
2014-15ರ ರಣಜಿ ಟ್ರೋಫಿ #RanjiTrophy ವಿಜೇತ ಕರ್ನಾಟಕ ತಂಡದ ಸದಸ್ಯರಾಗಿದ್ದ ಅವರು, ಬಳಿಕ ಅಂಡರ್-19 ತಂಡದ ಕೋಚ್ ಆಗಿ ಕಾರ್ಯನಿರ್ವಹಿಸಿ ಬಿಸಿಸಿಐ ಕೂಚ್ ಬೆರ್ಹಾ ಟ್ರೋಫಿಯಲ್ಲಿ ಕರ್ನಾಟಕ ತಂಡ ಚಾಂಪಿಯನ್ ಆಗುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.
Also Read>> ಮತ್ತೊಮ್ಮೆ ಬೆಲೆ ಏರಿಕೆಯ ಹೊರೆ | ಪೆಟ್ರೋಲ್, ಡೀಸೆಲ್ ದರ ಹೆಚ್ಚಳ
ಅಕ್ಷಯ್ ಅವರ ನಿಧನಕ್ಕೆ ದುರ್ಗಿಗುಡಿ ಕ್ರಿಕೆಟ್ ಅಸೋಸಿಯೇಷನ್ ಹಾಗೂ ಕ್ರಿಕೆಟ್ ವಲಯದ ಗಣ್ಯರು ತೀವ್ರ ಸಂತಾಪ ವ್ಯಕ್ತಪಡಿಸಿದ್ದಾರೆ.
ವಿಧಾನ ಪರಿಷತ್ ಶಾಸಕರು, ರಾಜ್ಯ ಬಿಜೆಪಿ ಕಾರ್ಯದರ್ಶಿಗಳು ಹಾಗೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ ವಲಯ ಸಂಚಾಲಕರಾದ ಡಿ.ಎಸ್. ಅರುಣ್ ಅವರು ಸಹ ಸಂತಾಪ ಸೂಚಿಸಿ, ಅವರ ಅಗಲಿಕೆ ಕರ್ನಾಟಕ ಕ್ರಿಕೆಟ್ ಕ್ಷೇತ್ರಕ್ಕೆ ಅಪಾರ ನಷ್ಟವಾಗಿದೆ ಎಂದು ತಿಳಿಸಿದ್ದಾರೆ.
ಕರ್ನಾಟಕ ಕ್ರಿಕೆಟ್ ವಲಯದ ಪ್ರತಿಭಾವಂತ ಆಟಗಾರ ಹಾಗೂ ಕೋಚ್ ಆಗಿದ್ದ ಅಕ್ಷಯ್ ಅವರು ನಿನ್ನೆ ಬೆಂಗಳೂರಿನಲ್ಲಿ ಹೃದಯಾಘಾತದಿಂದ ನಿಧನರಾಗಿರುವುದು ಅಪಾರ ದುಃಖದ ಸಂಗತಿಯಾಗಿದೆ ಎಂದು ಕಂಬನಿ ಮಿಡಿದಿದ್ದಾರೆ.
ಆಟಗಾರನಾಗಿಯೂ, ಕೋಚ್ ಆಗಿಯೂ ಕರ್ನಾಟಕ ಕ್ರಿಕೆಟ್’ಗೆ ಅವರು ನೀಡಿದ ಸೇವೆ ಸದಾ ಗೌರವದಿಂದ ಸ್ಮರಿಸಲ್ಪಡುತ್ತದೆ. ಅವರ ಅಗಲಿಕೆಯಿಂದ ಕುಟುಂಬದವರಿಗೆ, ಸ್ನೇಹಿತರಿಗೆ, ಸಹ ಆಟಗಾರರಿಗೆ ಹಾಗೂ ಅಪಾರ ಅಭಿಮಾನಿಗಳಿಗೆ ಉಂಟಾದ ದುಃಖದಲ್ಲಿ ನಾವು ಭಾಗಿಯಾಗಿದ್ದೇವೆ ಭಗವಂತನು ಅವರ ಆತ್ಮಕ್ಕೆ ಶಾಂತಿ ಕೋರಲಿ ಎಂದು ಸಂತಾಪ ಸೂಚಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
ಬಹುತೇಕ ಜನರ ಸಮಸ್ಯೆಗೆ ಅವಿಭಕ್ತ ಕುಟುಂಬವೇ ಅಂತಿಮ ಪರಿಹಾರ | ಸತ್ಯಾತ್ಮ ತೀರ್ಥ ಸ್ವಾಮೀಜಿ


















