ಕಲ್ಪ ಮೀಡಿಯಾ ಹೌಸ್ | ಮೈಸೂರು |
ಸಾಂಸ್ಕೃತಿಕ ರಾಜಧಾನಿ ಮೈಸೂರಿನಲ್ಲಿ ಗುರುವಾರ ಶ್ರೀ ರಾಘವೇಂದ್ರ ಗುರು ಸಾರ್ವಭೌಮರ ಉತ್ತರ ಆರಾಧನೆ ವಿಜೃಂಭಣೆಯಿಂದ ನೆರವೇರಿತು.
ನಗರದ ಕೃಷ್ಣಮೂರ್ತಿ ಪುರಂನ ರಾಘವೇಂದ್ರ ಸ್ವಾಮಿಗಳ ಸನ್ನಿಧಾನದಲ್ಲಿ ಬೆಳಗ್ಗೆ ವೃಂದಾವನಕ್ಕೆ ಫಲ ಪಂಚಾಮೃತ ಅಭಿಷೇಕ ನೆರವೇರಿತು. ಈ ಸಂದರ್ಭದಲ್ಲಿ ರಾಘವೇಂದ್ರ ಸ್ವಾಮಿಗಳ ಅಷ್ಟೋತ್ತರ ಪಾರಾಯಣ, ವಿಷ್ಣು ಸಹಸ್ರನಾಮ ಪಾರಾಯಣ ಇತ್ಯಾದಿಗಳು ಅನುರಣಿಸಿದವು.


ಅಲಂಕೃತ ರಥದಲ್ಲಿ ಶ್ರೀ ಪ್ರಹ್ಲಾದ ರಾಯರ ಮೂರ್ತಿಯನ್ನು ಪ್ರತಿಷ್ಠಾಪಿಸಿ ಬಡಾವಣೆಯ ಪ್ರಮುಖ ರಸ್ತೆಗಳಲ್ಲಿ ಮಂಗಳವಾದ್ಯ, ಕೋಲಾಟ, ಭಜನೆ, ವೇದಘೋಷ, ಮಂಗಳವಾದ್ಯ ನಾದದೊಂದಿಗೆ ಮೆರವಣಿಗೆಯನ್ನು ಮಾಡಲಾಯಿತು.
ಸಾವಿರಾರು ಭಕ್ತರು ಇದಕ್ಕೆ ಸಾಕ್ಷಿಯಾದರು. ನಂತರ ಎರಡು ಸಾವಿರಕ್ಕೂ ಹೆಚ್ಚು ಭಕ್ತರಿಗೆ ಅನ್ನ ಸಂತರ್ಪಣೆ ನೆರವೇರಿಸಲಾಯಿತು.
ರಾಮಸ್ವಾಮಿ ವೃತ್ತದ ಚಾಮರಾಜ ಜೋಡಿ ರಸ್ತೆಯಲ್ಲಿರುವ ಉಡುಪಿ ಭಂಡಾರಿ ಕೇರಿ ಮಠದ ವೆಂಕಟಾಚಲಧಾಮದಲ್ಲಿ ಗುರುವಾರ ಬೆಳಗ್ಗೆ ರಾಯರ ಬೃಂದಾವನಕ್ಕೆ ಎಳ ನೀರು ಅಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿತು. ಪ್ರಧಾನ ಅರ್ಚಕ ರಾಘವೇಂದ್ರ ಆಚಾರ್ಯರ ನೇತೃತ್ವದಲ್ಲಿ ವೃಂದಾವನಕ್ಕೆ ವಿಶೇಷ ಪುಷ್ಪಲಂಕಾರ ಮಾಡಿದ್ದು ಗಮನ ಸೆಳೆಯಿತು.


ನಾವು ಆಧ್ಯಾತ್ಮದ ಕಡೆಗೆ, ದೇವರ ಕಡೆಗೆ ಸಾಗಬೇಕು ಎಂದರೆ ಅದಕ್ಕೆ ಪ್ರಧಾನವಾಗಿ ದಾರಿ ತೋರುವವರೇ ಗುರುಗಳು ಎಂದು ಹೇಳಿದರು.
ಕಲಿಯುಗದಲ್ಲಿ ಸಮಗ್ರವಾಗಿ ದೇವರನ್ನು ತಿಳಿದವರು, ದೇವರ ಅಸ್ತಿತ್ವವನ್ನು ನೋಡಿದವರು, ದೇವರ ಬಗ್ಗೆ ಸಮಗ್ರವಾಗಿ ಅರಿತವರು ಮತ್ತು ನಮ್ಮ ಎಲ್ಲರ ಅಪೇಕ್ಷೆಗಳನ್ನು ಈಡೇರಿಸುವ ಏಕೈಕ ಗುರು ಎಂದರೆ ಶ್ರೀ ರಾಘವೇಂದ್ರ ಸ್ವಾಮಿಗಳು. ನಾವು ಮೊದಲು ಅವರನ್ನು ತಿಳಿಯಬೇಕು. ಈ ನಿಟ್ಟಿನಲ್ಲಿ ಆರಾಧನೆ ಸಂದರ್ಭ ವಿಶೇಷವಾಗಿದೆ ಎಂದರು.
ನಮಗೆ ಸಂಸಾರದ ಅನೇಕ ತೊಂದರೆಗಳು, ಜಂಜಾಟ, ಕಲಹಗಳು, ಅನಾರೋಗ್ಯ ಸಮಸ್ಯೆ ಕಾಡುವುದು ಸಹಜ. ಈ ಎಲ್ಲವನ್ನು ಸಮಗ್ರವಾಗಿ ಪರಿಹರಿಸಿ ಬದುಕನ್ನು ವಿಕಸನಗೊಳಿಸುವ ಶಕ್ತಿ ಇರುವ ಏಕೈಕ ಗುರು ಎಂದರೆ ಅದು ಶ್ರೀ ರಾಘವೇಂದ್ರ ಸ್ವಾಮಿಗಳು ಎಂದು ಹೇಳಿದರು.


ನಂತರ ಶ್ರೀಮಠದಲ್ಲಿ ರಾಯರ ಪಲ್ಲಕ್ಕಿ ಉತ್ಸವ ಅಷ್ಟಾವಧಾನ ಸೇವೆ ಮತ್ತು ರಂಗ ಪೂಜೆಗಳು ನೆರವೇರಿತು.
ಜಯಲಕ್ಷ್ಮಿಪುರಂನ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ರಾಯರ ಉತ್ತರಾರಾಧನೆ ಭಕ್ತಿ ಭಾವದಿಂದ ನೆರವೇರಿದ್ದು ವಿಶೇಷವಾಗಿತ್ತು.
ಪ್ರಧಾನ ಅರ್ಚಕ ಆದ್ಯ ಗೋವಿಂದಾಚಾರ್ಯ ಮತ್ತು ಪ್ರದೀಪ ಆಚಾರ್ಯ ಅವರ ನೇತೃತ್ವದಲ್ಲಿ ರಾಯರ ಬೃಂದಾವನಕ್ಕೆ ವಿಶೇಷ ಪೂಜೆ ಅಲಂಕಾರ ಮಾಡಲಾಯಿತು.

ಸಂಜೆ ಪ್ರಖ್ಯಾತ ಪ್ರಖ್ಯಾತ ಕಲಾವಿದ ಶಿವಕುಮಾರ ಸ್ವಾಮ ಮತ್ತು ತಂಡದಿಂದ ವಿಶೇಷ ತಾಳವಾದ್ಯ ಕಚೇರಿ ಭಕ್ತರನ್ನು ರಂಜಿಸಿತು.
ಮೈಸೂರಿನ ಅಗ್ರಹಾರದಲ್ಲಿರುವ ಶ್ರೀ ದೇವೇಂದ್ರ ತೀರ್ಥರಿಂದ ಪ್ರತಿಷ್ಠಾಪಿತ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಗುರುವಾರ ಬೃಂದಾವನಕೆ ವಿಶೇಷ ಪೂಜಾರಿಗಳು ಭಕ್ತಿ ಭಾವದಿಂದ ನೆರವೇರಿದವು ಬೃಂದಾವನಕ್ಕೆ ನಡೆಸಿದ ಕ್ಷೀರಾ ಭಿಷೇಕ ಗಮನ ಸೆಳೆಯಿತು. ಪ್ರಧಾನ ಅರ್ಚಕ ಮತ್ತು ಗಾಯಕ ಪಂಡಿತ ವ್ಯಾಸ ತೀರ್ಥ ಆಚಾರ್ಯರಿಂದ ಆರಾಧನಾ ಮಹೋತ್ಸವ ಮತ್ತು ತಾರತಮ್ಯೋಕ್ತ ಸಂಗೀತ ಸೇವೆಗಳು ನೆರವೇರಿದ್ದು ವಿಶೇಷವಾಗಿತ್ತು.
ನಗರದ ನಾರಾಯಣ ಶಾಸ್ತ್ರಿ ರಸ್ತೆಯಲ್ಲಿರುವ ಸುಬ್ಬರಾಯನಕೆರೆ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಆರಾಧನೆ ಅಂಗವಾಗಿ ಸಾವಿರಾರು ಭಕ್ತರಿಗೆ ಅನ್ನದಾನ ಮಾಡಿದ್ದು ವಿಶೇಷವಾಗಿತ್ತು. ಬೆಳಗಿನ ಅವಧಿಯಿಂದಲೇ ರಾಯರ ಬೃಂದಾವನಕ್ಕೆ ಸಕಲ ವಿಧಿ ವಿಧಾನಗಳೊಂದಿಗೆ ಪೂಜೆ ಸಂಪನ್ನಗೊಂಡಿತು.
ರಾಯರ ಕೃತಿಗಳ ಬಗ್ಗೆ ಪ್ರವಚನ ವ್ಯಾಖ್ಯಾನ ರಾಯರ ಬಗ್ಗೆ ರಚಿಸಿದ ಅಷ್ಟೋತ್ತರ ಸ್ತುತಿಗಳ ಪಾರಾಯಣ ನೆರವೇರಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news








Discussion about this post