ಕಲ್ಪ ಮೀಡಿಯಾ ಹೌಸ್
ರಘು ದೀಕ್ಷಿತ್ ಹಾಡುಗಳೆಂದರೆ ಹಾಗೆ ಒಂದು ರೀತಿಯ ಮ್ಯಾಜಿಕ್ ಕ್ರಿಯೇಟ್ ಮಾಡುತ್ತೆ. ಈಗ ಇಂತಹುದ್ದೇ ಮತ್ತೊಂದು ಸೆನ್ಸೇಷನ್ ಕ್ರಿಯೇಟ್ ಮಾಡ್ತಿದೆ ಟ್ರೆಂಡಿ ಮ್ಯೂಸಿಕ್.
ನಿನ್ನ ಸನಿಹಕೆ… ಹಾಡುಗಳಿಂದ್ಲೇ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಎರಡು ರೊಮ್ಯಾಂಟಿಕ್ ವಿಡಿಯೋ ಹಾಡುಗಳಿಂದ ಕನ್ನಡ ಚಿತ್ರಾಭಿಮಾನಿಗಳಲ್ಲಿ ವಿಶೇಷ ನಿರೀಕ್ಷೆ ಹುಟ್ಟಿಸಿದೆ.ದಿ ಸೌಂಡ್ ಆಫ್ ಕೆಯಾಸ್ ಅನ್ನೋ ಹೊಸ ಸೌಂಡಿಂಗ್ ಇರೋ, ರಘು ದೀಕ್ಷಿತ್ ಕಂಪೋಸ್ ಮಾಡಿ ಹಾಡಿರೋ ರ್ಯಾಪ್ ಸಾಂಗ್. ಹೀರೋ ಲವ್ ಫೇಲ್ ಆಗಿ ಹಾಡುವಂತಿರೋ ಈ ಹಾಡಿಗೆ, ವಾಸುಕಿ ವೈಭವ್ ಸಾಹಿತ್ಯ ಬರೆದಿದ್ದಾರೆ. ಯಾರು ಯಾರು ನಾನ್ ಯಾರು ಈ ನಶೆಯೂ ಹೇಳಿದೆ ಪತ್ತೆಯಾ.
ಅನ್ನೋ ಕ್ಯಾಚಿ ಲಿರಿಕ್ಸ್ ಇರೋ ಈ ಹಾಡು ಕೇಳೋದಕ್ಕೆ ಸಖತ್ ಮಜವಾಗಿದೆ. ವಿರಹ ಮನಸುಗಳಿಗೆ ನೇರವಾಗಿ ನಾಟುವಂತಿದೆ. ಮ್ಯೂಸಿಕಲಿ ಸಖತ್ ಸ್ಪೆಷಲ್ ಆಗಿ ಕಾಣ್ತಿರೋ ನಿನ್ನ ಸನಿಹಕೆ ಸಿನಿಮಾದ ಈ ಹಾಡು ಚಿತ್ರದ ಮೇಲಿನ ಭರವಸೆಯನ್ನು ಮತ್ತಷ್ಟು ಹೆಚ್ಚಿಸಿದೆ.
ಈಗಾಗ್ಲೇ ವಿಡಿಯೋ ಹಾಡುಗಳಿಂದ ದೊಡ್ಡ ನಿರೀಕ್ಷೆಯನ್ನು ಹುಟ್ಟಿಸಿರೋ ನಿನ್ನ ಸನಿಹಕೆ ಟೀಮ್ ವರ್ಕ್ ನೋಡಿದ್ರೆ ಎಲ್ಲಾ ಆಂಗಲ್ ನಿಂದ್ಲೂ ಇದು ಮಾಮೂಲಿ ಸಿನಿಮಾ ಅಲ್ಲ. ಇದ್ರಲ್ಲೇನೂ ಇದೆ ಅನ್ನೋದನ್ನ ಪ್ರತಿ ಹಂತದಲ್ಲೂ ತೋರಿಸುತ್ತಲೇ ಇದೆ.ಸೂರಜ್ ಗೌಡ ನಟಿಸಿ ನಿರ್ದೇಶಿಸಿರೋ ಈ ಚಿತ್ರದಲ್ಲಿ ಧನ್ಯರಾಮ್ ಕುಮಾರ್ ಚೊಚ್ಚಲ ಬಾರಿಗೆ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ವೈಟ್ ಅಂಡ್ ಗ್ರೇ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ಅಕ್ಷಯ್ ರಾಜಶೇಖರ್, ರಂಗನಾಥ್ ಕುಡ್ಲಿ ನಿರ್ಮಿಸಿದ್ದಾರೆ. ಸದ್ಯ ಈ ಲಿರಿಕಲ್ ವಿಡಿಯೋದಿಂದ ಸದ್ದು ಸುದ್ದಿ ಮಾಡ್ತಿರೋ ನಿನ್ನ ಸನಿಹಕೆ ತಂಡ ಇಷ್ಟರಲ್ಲೇ ಟ್ರೈಲರ್ ರಿಲೀಸ್ ಮಾಡೋ ಪ್ಲಾನ್’ನಲ್ಲಿದೆ.ಬ್ಯಾಕ್ ಟು ಬ್ಯಾಕ್ ಬಹುಭಾಷೆಯಲ್ಲಿ ಕನ್ನಡ ಸಿನಿಮಾಗಳು ಬರ್ತಿರೋ ಹೊತ್ತಲ್ಲಿ, ಕನ್ನಡದಲ್ಲಿ ಮಾತ್ರ ಬಿಡುಗಡೆ ಅನ್ನೋ ಟ್ಯಾಗ್ ಲೈನ್’ನೊಂದಿಗೆ ನಿನ್ನ ಸನಿಹಕೆ ಸಿನಿಮಾ ತಂಡ ಎಪ್ರಿಲ್ 16ಕ್ಕೆ ಪ್ರೇಕ್ಷಕರೆದುರಿಗೆ ಬರ್ತಿದೆ. ವಿಶ್ವದಾದ್ಯಂತ ಕೆ.ಆರ್.ಜಿ. ಸ್ಟುಡಿಯೋ ಈ ಚಿತ್ರವನ್ನು ರಿಲೀಸ್ ಮಾಡ್ತಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post