ಚೆನ್ನೈ: ತಮಿಳುನಾಡಿನ ಚೆನ್ನೈ ಮೂಲದ ಈ ಬಾಲಕ ದೇಶದ ಹೆಸರನ್ನು ವಿಶ್ವದಾದ್ಯಂತ ವಿಜೃಂಭಿಸುವಂತೆ ಸಾಧನೆ ಮಾಡಿದ್ದಾನೆ. ಚೆಸ್ ಕ್ರೀಡೆಯಲ್ಲಿ ಅತ್ಯಂತ ವಿಶ್ವದ ಎರಡನೆಯ ಕಿರಿಯ ಹಾಗೂ ಭಾರತದ ಮೊಟ್ಟ ಮೊದಲ ಅತ್ಯಂತ ಕಿರಿಯ ಗ್ರಾಂಡ್ ಮಾಸ್ಟರ್ ಕಿರೀಟ ಮುಡಿಗೇರಿಸಿಕೊಂಡಿರುವ 12 ವರ್ಷದ ಪ್ರಜ್ಞಾನಂದ.
ವಾಸ್ತವವಾಗಿ ರಮೇಶ್ ಬಾಬು 10 ವರ್ಷ 10 ತಿಂಗಳು 19 ದಿನದ ವಯಸ್ಸಿನಲ್ಲಿರುವಾಗಲೇ ಚೆಸ್‌ನಲ್ಲಿ ಅಂತಾರಾಷ್ಟ್ರೀಯ ಮಾಸ್ಟರ್ ಕಿರೀಟ ಮುಡಿಗೇರಿಸಿಕೊಂಡು ಇತಿಹಾಸ ನಿರ್ಮಿಸಿದ್ದ.
ಇಟಲಿಯ ಆರ್ಟಿಸಿಯಲ್ಲಿ ನಡೆದ ಗ್ರೆಡಿನ್ ಓಪನ್‌ನಲ್ಲಿ ಇರಾನ್ ನ ಆರ್ಯನ್ ಗೊಲಮಿ ಹಾಗೂ ಇಟಾಲಿಯನ್ ಗ್ರಾಂಡ್ ಮಾಸ್ಟರ್ ಲುಕಾ ಮೊರೋನಿ ಅವರುಗಳನ್ನು ಮಣಿಸಿದ್ದ. ನಿನ್ನೆ ನಡೆದ ಫೈನಲ್ ನಲ್ಲಿ ಡಚ್ ನ ಜಿಎಂ ರೋಲ್ಯಾಂಡ್ ಅವರನ್ನು ಮಣಿಸಿ ವಿಜಯಿಯಾಗಿದ್ದಾನೆ.
ಇನ್ನು ಈ ಬಾಲ ಪ್ರತಿಭೆಯ ಸಾಧನೆಗೆ ಎಐಸಿಸಿ ಅಧ್ಯಕ್ಷ ರಾಹುಲ್‌ಗಾಂಧಿ ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
Just 12 yrs old, Chennai boy R Praggnanandaah has become the second youngest Chess Grand Master ever!
Congratulations to him and his coach @RameshChess. This is truly an incredible achievement. https://t.co/p5RxSNEXbx
— Rahul Gandhi (@RahulGandhi) June 24, 2018
ಈ ಕುರಿತಂತೆ ಟ್ವೀಟ್ ಮಾಡಿರುವ ಅವರು, ಇದೊಂದು ಐತಿಹಾಸಿಕ ಸಾಧನೆ, ಈ ಸಾಧನೆ ಪ್ರಶಂಸನೀಯ ಎಂದಿದ್ದಾರೆ.
Discussion about this post