ಕಲ್ಪ ಮೀಡಿಯಾ ಹೌಸ್ | ರಾಯಚೂರು |
ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಸ್ಥಾನಕ್ಕೆ ಯುವ ಪತ್ರಕರ್ತ (ಬರಹಗಾರ) ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಪಾಮನಕಲ್ಲೂರು ಮೂಲದ ಅಯ್ಯಣ್ಣ ನಾಯಕ ಪಾಮನಕಲ್ಲೂರು ರಾಜೀನಾಮೆ ನೀಡಿದ್ದಾರೆ.
ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿಯ ರಾಜ್ಯಾಧ್ಯಕ್ಷರಾಗಿರುವ ರಾಜೇಶ್ ನಾಯಕರವರಿಗೆ ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೀನಾಮೆ ಪತ್ರ ಸಲ್ಲಿಸಿದ್ದಾರೆ.
‘ಇತ್ತೀಚಿನ ಕೆಲ ವರ್ಷಗಳ ಹಿಂದೆ ರಚಿಸಲಾಗಿದ್ದ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ರಾಜ್ಯ ಘಟಕದಲ್ಲಿ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ) ನೀಡಿದ್ದು, ಕಾರಣಾಂತರಗಳಿಂದ ರಾಜ್ಯ ಘಟಕದ ಮಾಧ್ಯಮ ಸಲಹೆಗಾರರು ಹುದ್ದೆ (ಸ್ಥಾನ)ಗೆ ರಾಜೀನಾಮೆ ಸಲ್ಲಿಸುತ್ತಿದ್ದು, ತಮ್ಮ ರಾಜೀನಾಮೆಯನ್ನು ಕೂಡಲೇ ಅಂಗೀಕಾರ ಮಾಡಬೇಕೆಂದು ವಿನಂತಿಸಿದ್ದಾರೆ. ಹಾಗೂ ಸಮಿತಿಯ ಸರ್ವ ಸದಸ್ಯರಿಗೂ ಮತ್ತು ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಸಹಕರಿಸಿದ ಸರ್ವರಿಗೂ ಧನ್ಯವಾದ ತಿಳಿಸಿದ್ದಾರೆ.
Also read: ವಾಟ್ಸಾಪ್ ಮೂಲಕ ತ್ರಿವಳಿ ತಲಾಖ್ ಹಿನ್ನೆಲೆ: ಪತಿ ವಿರುದ್ಧ ದೂರು ದಾಖಲಿಸಿದ ಮಹಿಳೆ
ಇನ್ನೂ ಮುಂದೆ ತಮ್ಮ ಕುಮಾರರಾಮ ಇತಿಹಾಸ ಸಂರಕ್ಷಣಾ ಸಮಿತಿ (ರಿ) ಯ ಕಾರ್ಯಚಟುವಟಿಕೆಗಳಿಂದ ದೂರವಿರಲು ಬಯಸಿದ ನನಗೆ ತಾವು ಸಹಕರಿಸುವಿರಿ ಎಂದು ನಂಬಿದ್ದೇನೆ. ಮತ್ತೊಮ್ಮೆ ಸರ್ವರಿಗೂ ಧನ್ಯವಾದಗಳು. ತಮ್ಮ ಕಾರ್ಯಗಳಿಗೆ ಶುಭವಾಗಲಿ. ವಂದನೆಗಳು’ ಎಂದು ಅಯ್ಯಣ್ಣ ನಾಯಕ ಪಾಮನಕಲ್ಲೂರುರವರು ರಾಜೇಶ್ ನಾಯಕರಿಗೆ ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post