ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಜಿಲ್ಲೆಯಲ್ಲಿ ಈ ಬಾರಿಯ ಮಳೆಗಾಲ ಆರಂಭವಾದಂತಾಗಿದ್ದು, ನಿನ್ನೆ ಜಿಟಿಜಿಟಿ ಮಳೆ ಸುರಿದಿದೆ. ಪರಿಣಾಮವಾಗಿ ಬಿರು ಬೇಸಿಗೆಯ ಬಿಸಿಲಿಗೆ ಕಾದ ಕಾವಲಿಯಂತಾಗಿದ್ದ ಜಿಲ್ಲೆಯ ಬಹುತೇಕ ಪ್ರದೇಶ ಈಗ ತಂಪಾಗಿದೆ.
ಎಲ್ಲೆಲ್ಲಿ ಎಷ್ಟು ಮಳೆಯಾಗಿದೆ?
ಜಿಲ್ಲೆಯಲ್ಲಿ ಕಳೆದ 24 ಗಂಟೆಗಳ ಅವಧಿಯಲ್ಲಿ ಒಟ್ಟು 81.14 ಮಿಮಿ ಮಳೆಯಾಗಿದ್ದು, ಸರಾಸರಿ 11.59 ಮಿಮಿ ಮಳೆ ದಾಖಲಾಗಿದೆ. ಜೂನ್-2020 ತಿಂಗಳ ಸಾಮಾನ್ಯ ಮಳೆಯ ಸರಾಸರಿ ಪ್ರಮಾಣ 390.67 ಮಿಮಿ ಇದ್ದು, ಇದುವರೆಗೆ ಸರಾಸರಿ 18.57 ಮಿಮಿ ಮಳೆ ದಾಖಲಾಗಿದೆ.
ಶಿವಮೊಗ್ಗ 03.20 ಮಿಮಿ., ಭದ್ರಾವತಿ 04.40 ಮಿಮಿ., ತೀರ್ಥಹಳ್ಳಿ 11.60 ಮಿಮಿ., ಸಾಗರ 06.04 ಮಿಮಿ., ಶಿಕಾರಿಪುರ 13.40 ಮಿಮಿ., ಸೊರಬ 10.10 ಮಿಮಿ. ಹಾಗೂ ಹೊಸನಗರ 32.40 ಮಿಮಿ. ಮಳೆಯಾಗಿದೆ.
ಜಲಾಶಯಗಳ ನೀರಿನ ಮಟ್ಟ(ಅಡಿಗಳಲ್ಲಿ ಮತ್ತು ಹರಿವು ಕ್ಯೂಸೆಕ್ಸ್‌ಗಳಲ್ಲಿ ಜೂನ್ 12ರ ಮಾಹಿತಿಯಂತೆ)
ಜಿಲ್ಲೆಯ ಲಿಂಗನಮಕ್ಕಿ: 1819 (ಗರಿಷ್ಠ), 1759.85 (ಇಂದಿನ ಮಟ್ಟ), 2530.00 (ಒಳಹರಿವು), 6085.00 (ಹೊರಹರಿವು)
ಭದ್ರಾ: 186 (ಗರಿಷ್ಠ), 133.10 (ಇಂದಿನ ಮಟ್ಟ), 307.00 (ಒಳಹರಿವು), 157.00 (ಹೊರಹರಿವು)
ತುಂಗಾ: 588.24 (ಗರಿಷ್ಠ), 587.42 (ಇಂದಿನ ಮಟ್ಟ), 417.00 (ಒಳಹರಿವು), 35.00 (ಹೊರಹರಿವು)
Get In Touch With Us info@kalpa.news Whatsapp: 9481252093

















