ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಬೆಂಗಳೂರು: ನಗರದ ಪ್ರತಿಷ್ಠಿತ ಬಡಾವಣೆಗಳಲ್ಲಿ ಒಂದಾದ ಗುರುದತ್ತ ಬಡಾವಣೆಯಲ್ಲಿ ನಿನ್ನೆ ರಾತ್ರಿ ಸುರಿದ ಅಬ್ಬರದ ಮಳೆ – ಗುರುದತ್ತ ಬಡಾವಣೆಯಲ್ಲಿ ರಾಜ ಕಾಲುವೆ ತಡೆಗೋಡೆ ಕುಸಿತವಾಗಿದೆ.
ಬನಶಂಕರಿ 3 ನೆಯ ಹಂತದ ಹೊಸಕೆರಿಹಳ್ಳಿಯ ಗುರುದತ್ತ ಬಡಾವಣೆಯಲ್ಲಿ ಸುರಿದ ಮಳೆಯಿಂದ ತಡೆ ಗೋಡೆ ಕುಸಿದು ರಾಜ ಕಾಲುವೆಯಲ್ಲಿ ಹರಿಯುವ ಕೊಳಕು ನೀರು ಕಾಲುವೆಯ ಪಕ್ಕ ಇರುವ ಗುರುದತ್ತ ಬಡಾವಣೆ ನಾಲ್ಕು – ಐದು ನಿವಾಸಿಗಳ ಮನೆಗೆ ನುಗ್ಗಿ ನಾಗರೀಕರು ಪರಾದಾಡುವಂತೆ ಮಾಡಿತ್ತು.
ನಿಮ್ಮ ಮಗು ಬುದ್ದಿಶಾಲಿಯಾಗಿ ಹುಟ್ಟಬೇಕೆ? ಸದೃಢ ಮೈಕಟ್ಟು ಹೊಂದಿ ಕಾಂತಿಯುತವಾಗಬೇಕೆ? ಇಲ್ಲಿದೆ ಮಾರ್ಗ
ವಿಷಯ ತಿಳಿದ ಬಿಬಿಎಂಪಿ ಆಯುಕ್ತ ಮಂಜುನಾಥ್ ಪ್ರಸಾದ್ ಮತ್ತು ಉಪಮುಖ್ಯಮಂತ್ರಿ ಡಾ.ಸಿ.ಎನ್. ಅಶ್ವಥ್ ನಾರಾಯಣ್ ಸ್ಥಳಕ್ಕೆ ಆಗಮಿಸಿದ್ದರು.
80 ಕಿಮೀ ರಾಜಕಾಲುವೆಯಿದ್ದು ಅದರಲ್ಲಿ ಸಿಎಂಸಿ ವ್ಯಾಪ್ತಿಯಲ್ಲಿ ಬರುತ್ತಿತ್ತು. ಈಗ ಮಹಾನಗರ ಪಾಲಿಕೆಗೆ ಒಳಪಟ್ಟಿದೆ. ಜೋರಾಗಿ ಮಳೆ ಬಂದ ಕಾರಣ ತಡೆ ಗೋಡೆ ಕುಸಿತವಾಗಿದ್ದು ಅದಕ್ಕೆ ಶೀಘ್ರದಲ್ಲೇ ಶಾಶ್ವತ ಪರಿಹಾರ ಕಂಡುಕೊಳ್ಳಲು ಕ್ರಮಕೈಗೊಳ್ಳಲಾಗುವುದು ಎಂದು ಡಿಸಿಎಂ ಅಶ್ವಥ್ ನಾರಾಯಣ ಹೇಳಿದರು.
ವರಾಹ ಅಪಾಟ್ಮೆಂಟ್ ಕಾರ್ಯದರ್ಶಿ ಕೇಶವ್ ಭಟ್ ಅವರೊಂದಿಗೆ ಮಾತನಾಡಿದ ಡಿಸಿಎಂ, ಕಾಂಕ್ರೀಟ್ ತಡೆಗೋಡೆ ಕಟ್ಟಿಸಿ ಕೊಡುವ ಹಾಗೂ ವರಾಹ ಅಪಾರ್ಟ್ಮೆಂಟ್’ನ ಕಾಂಪೌಂಡ್ ಬಿರುಕು ಬಿಟ್ಟಿರುವುದನ್ನು ಸರಿಪಡಿಸುವ ಭರವಸೆ ನೀಡಿದರು.
ಗುರುದತ್ತ ಬಡಾವಣೆ ವಾರ್ಡ್ ನಂಬರ್ 160 ರಾಜರಾಜೇಶ್ವರಿ ನಗರ (ಆರ್.ಆರ್. ನಗರ ವಾರ್ಡ್) ವ್ಯಾಪ್ತಿಯಲ್ಲಿ ಬರುತ್ತದೆ. ಆದರೆ ರಾಜ ಕಾಲುವೆ ಆರ್.ಆರ್. ನಗರ ವಾರ್ಡ್ ಮತ್ತು ಪದ್ಮನಾಭ ನಗರ ವಾರ್ಡ್ ಮಧ್ಯೆ ಇದೆ. ಗೋಡೆ ಕುಸಿಯವು ಭೀತಿ ಇರುವ ಕುರಿತು ಇಲ್ಲಿನ ನಾಗರೀಕರು ಹಲವು ಬಾರಿ ಮನವಿ ಮಾಡಿದರೂ ಇದರ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಗಮನ ಹರಿಸದೆ ಇರುವುದು ಇಂದು ತಡೆಗೋಡೆ ಕುಸಿತ ಕಾಣಲು ಕಾರಣ ಎಂಬುದು ಗುರುದತ್ತ ಬಡಾವಣೆಯ ನಿವಾಸಿಗಳಾದ ರವಿ, ಚಂದ್ರು, ಕೇಶವ್ ಭಟ್, ಸುಧಾ, ರಜನಿ, ಗುರುರಾಜ ಆಚಾರ್, ಮಂಜುನಾಥ್ ಅವರುಗಳ ಆರೋಪವಾಗಿದೆ.
ದತ್ತ ಪೀಠದ ಕಡೆಯಿಂದ ಇಟ್ಟಮಡುವಿನ ಕಡೆಗೆ ಹೋಗುವ ದಾರಿಯಲ್ಲಿ ಇರುವ ರಾಜಕಾಲುವೆ ತಡೆಗೋಡೆ ಕುಸಿತವಾದರೆ ಅದೇ ದಾರಿಯಲ್ಲಿ ಮುಂದೆ ಸಾಗಿದರೆ ಗುರುದತ್ತ ಬಡಾವಣೆಯಲ್ಲಿ ಇರುವ ಮತ್ತೊಂದು ಕಡೆ ತಡೆ ಗೋಡೆಯೇ ಇಲ್ಲ ಅಪಾಯ ಸಂಭವಿಸುವ ಸಾಧ್ಯತೆಯಿದೆ. ಈ ಮುನ್ನ ಸಂಪೂರ್ಣವಾಗಿ ತಡೆಗೋಡೆ ನಿರ್ಮಿಸಲಿ ಎಂಬುದು ಇಲ್ಲಿನ ನಾಗರೀಕರ ವಿನಂತಿ.
ಗುರುದತ್ತ ಬಡಾವಣೆಯಲ್ಲಿ ರಾಜ ಕಾಲುವೆ ನಿರ್ಮಾಣ ಮತ್ತು ಜಲ ಮಂಡಳಿಯಿಂದ ಒಳಚರಂಡಿ ಕೊಳವೆ ಅಳವಡಿಕೆ ಕಾಮಗಾರಿ ನಡೆಯುತ್ತಿದೆ.
ಈಗಾಗಲೇ ರಾಜಕಾಲುವೆ ಒತ್ತುವರಿ ಮಾಡಿದ್ದ 1100 ಕಟ್ಟಡಗಳನ್ನು ತೆರವುಗೊಳಿಸಲಾಗಿದೆ. ಇನ್ನೂ 700 ಕಟ್ಟಡಗಳನ್ನು ತೆರವು ಕಾರ್ಯ ಬಾಕಿ ಇದೆ.
ಕೋವಿಡ್ ಹಿನ್ನಲೆಯಲ್ಲಿ ನವೆಂಬರ್ ವರೆಗೆ ಯಾವುದೇ ತೆರವು ಕಾರ್ಯ ಕೈಗೊಳ್ಳದಂತೆ ನ್ಯಾಯಾಲಯ ಸೂಚಿಸಿದೆ. ನವೆಂಬರ್ ಬಳಿಕ ತೆರವು ಕಾರ್ಯಚರಣೆ ಕೈಗೊಳ್ಳಲಾಗುವುದು ಎಂದು ಉಪಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ್ ತಿಳಿಸಿದರು.
ಆಯುಕ್ತ ಮಂಜುನಾಥ್ ಪ್ರಸಾದ್ ಮಾತನಾಡಿ ಗುರುದತ್ತ ಲೇಔಟ್ ನ ತಡೆ ಗೋಡೆ ಜಾಗದಲ್ಲಿ ಮಣ್ಣಿನ ಕೊರತೆ ಉಂಟಾಗಿದ್ದು ಅದರ ಪರಿಣಾಮವಾಗಿ ಗೋಡೆ ಕುಸಿದು ಬಿದ್ದಿದೆ. ಒಂದು ತಿಂಗಳೊಳಗೆ ಪೂರ್ಣಗೊಳಿಸಲಾಗುವುದು. ಕಾಲುವೆಯ ಪಕ್ಕದಲ್ಲಿನ ಎರಡು ಮನೆಗಳಲ್ಲಿ ಎಂಟು ಕುಟುಂಬಗಳು ವಾಸ ವಾಗಿದ್ದು ಅವರನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ತಿಳಿಸಿದರು.
(ಚಿತ್ರ ವರದಿ: ತೀರ್ಥಹಳ್ಳಿ ಅನಂತ ಕಲ್ಲಾಪುರ)
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post