ಕಲ್ಪ ಮೀಡಿಯಾ ಹೌಸ್ | ಬೆಂಗಳೂರು |
ನಗರದ ಕುಂದಲಹಳ್ಳಿಯಲ್ಲಿರುವ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ #RameshwaramCafeBlast ಪ್ರಕರಣಕ್ಕೆ ಸಂಬಂಧಿಸಿದಂತೆ ರಾಷ್ಟ್ರೀಯ ತನಿಖಾ ದಳದ ಅಧಿಕಾರಿಗಳಿಗೆ (NIA) ಮಹತ್ವದ ಸುಳಿವು ದೊರೆತ್ತಿದ್ದು, ಸ್ಫೋಟಕ್ಕೂ ಹಾಗೂ ಚೆನ್ನೈಗೂ ಸಂಬಂಧ ಇರುವುದನ್ನು ಎನ್ಎಐ #NIA ತನಿಖೆಯಲ್ಲಿ ಬೆಳಕಿಗೆ ಬಂದಿದೆ.
ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಶಂಕಿತನ ಜಾಡು ಹಿಡಿದ ಎನ್ಐಎಗೆ ಚೆನ್ನೈ ಲಿಂಕ್ ಸಿಕ್ಕಿದ್ದು, ತಮಿಳುನಾಡಿನಿಂದ #TamilNadu ಬಂದು ಬಾಂಬ್ ಇಟ್ಟು ಶಂಕಿತ ಪರಾರಿಯಾಗಿದ್ದಾನೆ. ಸ್ಫೋಟಕ್ಕೂ ಮುನ್ನ 2 ತಿಂಗಳು ಇತ ತಮಿಳುನಾಡಿನಲ್ಲಿದ್ದ ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ. 1000ಕ್ಕೂ ಹೆಚ್ಚು ಸಿಸಿಟಿವಿ #CCTV ದೃಶ್ಯಗಳ ಪರಿಶೀಲನೆ ಬಳಿಕ ಇಬ್ಬರು ಶಂಕಿತರನ್ನು ಪತ್ತೆಹಚ್ಚಲಾಗಿದೆ.
ಶಂಕಿತ ಧರಿಸಿದ್ದ ಟೋಪಿಯ ಮೂಲ ಪತ್ತೆ ಹಚ್ಚಿದ್ದ ಎನ್ಐಎಗೆ ತಮಿಳುನಾಡಿನ ಪ್ರತಿಷ್ಠಿತ ಮಾಲ್ ಒಂದರಲ್ಲಿ ಖರೀದಿಸಲಾಗಿರುವ ಮಾಹಿತಿ ದೊರೆತಿದ್ದು, ಜೊತೆಗೆ ಟೊಪ್ಪಿ ಖರೀದಿ ವೇಳೆ ಶಂಕಿತನ ಜೊತೆಗೆ ಮತ್ತೋರ್ವ ವ್ಯಕ್ತಿ ಇರುವುದು ಮಾಲ್ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮತ್ತೊಂದೆಡೆ ಪತ್ತೆಯಾದ ಕ್ಯಾಪ್ನಲ್ಲಿ ಶಂಕಿತನ ಕೂದಲು ಪತ್ತೆಯಾಗಿದ್ದು, ಎನ್ಐಎ ಅಧಿಕಾರಿಗಳು ಡಿಎನ್ಎ ಟೆಸ್ಟ್ ಗೆ ನೀಡಿದ್ದಾರೆ.
ಶಂಕಿತ ಶಿವಮೊಗ್ಗ #Shivamogga ಜಿಲ್ಲೆಯ ತೀರ್ಥಹಳ್ಳಿಯವ #Thirthahalli ಎಂದು ಗೊತ್ತಾಗಿದ್ದು, ಜನವರಿಯಿಂದ ಚೆನ್ನೈನಲ್ಲಿ ಒಂದು ತಿಂಗಳಿಗೂ ಹೆಚ್ಚು ಕಾಲ ತಂಗಿದ್ದ ಎಂದು ತಿಳಿದುಬಂದಿದೆ. ಶಂಕಿತನನ್ನು ಮುಸಾವೀರ್ ಹುಸೇನ್ ಶಜೀಬ್ ಎಂದು ಗುರುತಿಸಲಾಗಿದೆ. ಆತ ಹಾಕಿಕೊಂಡ ಟೋಪಿಯನ್ನು ಆತನ ಸಹಾಯಕ ಚೆನ್ನೈನ ಆರ್‌ಕೆ ಸಲಾಯ್ ಮಾಲ್‌ನಲ್ಲಿ ಖರೀದಿಸಿದ್ದಾನೆ. ಇಬ್ಬರು ಕೂಡ ಚೆನ್ನೈನ ಟ್ರಿಪ್ಲಿಕೇನ್‌ನಲ್ಲಿ ತಿಂಗಳಿಗೂ ಹೆಚ್ಚು ಕಾಲ ತಂಗಿದ್ದರು ಎಂದು ತನಿಖೆ ವೇಳೆ ಬೆಳಕಿಗೆ ಬಂದಿದೆ.
ಮುಸಾವೀರ್ ಹುಸೇನ್ ಶಜೀಬ್‌ನ ಸಹಾಯಕನನ್ನು ಅಬ್ದುಲ್ ಮಾಥರ್ನ್ ತಹಾ ಎಂದು ಗುರುತಿಸಲಾಗಿದ್ದು, ಆತ ಕೂಡ ತೀರ್ಥಹಳ್ಳಿಯವನಾಗಿದ್ದು, ಶಿವಮೊಗ್ಗ ಐಸಿಸ್ ಮಾಡ್ಯೂಲ್‌ನ ಭಾಗವಾಗಿದ್ದಾರೆ ಎಂದು ಮೂಲಗಳು ತಿಳಿಸಿವೆ. ತಹಾ ತಲೆಯಲ್ಲಿ ಕೂದಲು ಇಲ್ಲದ್ದರಿಂದ ಟೋಪಿ ಹಾಕುತ್ತಿದ್ದ, ಟ್ರಪ್ಲಿಕೇನ್‌ನ ಲಾಡ್ಜ್‌ನಲ್ಲಿ ತಂಗಿದ್ದಾಗ ಟೋಪಿ ಖರೀದಿಸಿದ್ದ ಎನ್ನಲಾಗಿದೆ. ಅದೇ ಟೋಪಿಯನ್ನು ಮುಸಾವೀರ್ ಹುಸೇನ್ ಶಜೀಬ್ ಧರಿಸಿ ರಾಮೇಶ್ವರಂ ಕೆಫೆ ಬಾಂಬ್‌ನಲ್ಲಿ ಸ್ಫೋಟ ನಡೆಸಿದ್ದ ಎನ್ನಲಾಗಿದೆ.
ಮಾರ್ಚ್ 01ರಂದು ಬೆಂಗಳೂರಿನ ರಾಮೇಶ್ವರಂ ಕೆಫೆಯಲ್ಲಿ ಸಂಭವಿಸಿದ ಬಾಂಬ್ ಬ್ಲಾಸ್ಟ್ ಪ್ರಕರಣಕ್ಕೆ ಸಂಬಂಧಿಸಿ ಮಾ.13 ರಂದು ಎನ್ಐಎ ತಂಡ ಬಳ್ಳಾರಿಯಲ್ಲಿ ಓರ್ವನನ್ನು ಅರೆಸ್ಟ್ ಮಾಡಿದ್ದರು. ಶಬ್ಬೀರ್ ಎಂಬಾತನನ್ನು ಎನ್ಐಎ ಆಧಿಕಾರಿಗಳು ವಶಕ್ಕೆ ಪಡೆದು ಬೆಂಗಳೂರಿಗೆ ಕರೆತಂದಿದ್ದರು. ಜೊತೆಗೆ ರಾಮೇಶ್ವರಂ ಕೆಫೆ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಾಂಬರ್ ಬಗ್ಗೆ ಸುಳಿವು ನೀಡಿದ್ರೆ 10 ಲಕ್ಷ ಬಹುಮಾನ ನೀಡುವುದಾಗಿ NIA ಘೋಷಣೆ ಮಾಡಿತ್ತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post