ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಭಾರತದ ಖ್ಯಾತ ಕೈಗಾರಿಕೋದ್ಯಮಿ ರತನ್ ಟಾಟಾ #RatanTata ಅವರು ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವವಾದ ಆರ್ಡರ್ ಆಫ್ ಆಸ್ಟ್ರೇಲಿಯಾ ಪ್ರಶಸ್ತಿಗೆ #OrderofAustralia ಪಾತ್ರರಾಗಿದ್ದಾರೆ.
ಈ ಕುರಿತಂತೆ ಭಾರತದಲ್ಲಿರುವ ಆಸ್ಟ್ರೇಲಿಯಾದ ರಾಯಭಾರಿ ಬ್ಯಾರಿ ಓ ಫಾರೆಲ್ ಟ್ವಿಟರ್’ನಲ್ಲಿ ಮಾಹಿತಿ ನೀಡಿದ್ದು, ರತನ್ ಟಾಟಾ ಅವರು ಭಾರತದಲ್ಲಿ ಹಿರಿಯ ಕೈಗಾರಿಕೋದ್ಯಮಿ ಮಾತ್ರವಲ್ಲ, ಅವರ ಕೊಡುಗೆ ಆಸ್ಟ್ರೇಲಿಯಾದಲ್ಲೂ ಗಮನಾರ್ಹ ಪರಿಣಾಮ ಬೀರಲಿದೆ ಎಂದಿದ್ದಾರೆ.ರತನ್ ಟಾಟಾ ಅವರು ಆಸ್ಟ್ರೇಲಿಯಾ-ಭಾರತ ದ್ವಿಪಕ್ಷೀಯ ಸಂಬಂಧಗಳಿಗೆ, ವಿಶೇಷವಾಗಿ ವ್ಯಾಪಾರ, ಹೂಡಿಕೆ ಮತ್ತು ಲೋಕೋಪಕಾರ ಕ್ಷೇತ್ರಗಳಲ್ಲಿ ಅವರ ಸೇವೆಗಳಿಗಾಗಿ ಆಡರ್ ಆಫ್ ಆಸ್ಟ್ರೇಲಿಯಾದ ಅತ್ಯುನ್ನತ ನಾಗರಿಕ ಗೌರವ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದ್ದು, ಇತ್ತೀಚೆಗೆ ನಡೆದ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post