ಕಲ್ಪ ಮೀಡಿಯಾ ಹೌಸ್ | ಮುಂಬೈ |
ಟಾಕ್ಸಿಕ್ #Toxic ಚಿತ್ರದ ಟೀಸರ್ ದೃಶ್ಯಗಳು ಭಾರೀ ವಿವಾದಕ್ಕೆ ಕಾರಣವಾಗಿರುವ ನಡುವೆಯೇ ದೇಶದಾದ್ಯಂತ ಹವಾ ಸಹ ಸೃಷ್ಠಿಸಿದೆ. ಇದರ ನಡುವೆಯೇ ರಾಕಿಭಾಯ್ ಯಶ್ ಮುಂಬೈ #Mumbai ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದು, ಇದರ ಫೋಟೋಗಳು ವೈರಲ್ ಆಗಿವೆ.
ಮುಂಬೈ ವಿಮಾನ ನಿಲ್ದಾಣದ ಮುಂಭಾಗದಲ್ಲಿ ಕಾಣಿಸಿಕೊಂಡ ಯಶ್, ಮುಖಕ್ಕೆ ಪೂರ್ಣ ಮಾಸ್ಕ್ ಧರಿಸಿ ಕಾರು ಹತ್ತುವಾಗಿನ ದೃಶ್ಯಗಳು ವೈರಲ್ ಆಗಿವೆ. ಕೆಲವು ನಿಮಿಷಗಳ ಕಾಲ ನಿಂತು ಕ್ಯಾಮೆರಾಗೆ ಫೋಸ್ ಕೊಟ್ಟು, ಕೈ ಮುಗಿದ ಕಾರು ಹತ್ತಿದ್ದಾರೆ.
ಟಾಕ್ಸಿಕ್ ಚಿತ್ರದ ಟೀಸರ್’ನ ಕೆಲವು ದೃಶ್ಯಗಳು ಅಶ್ಲೀಲವಾಗಿದೆ ಎಂಬ ಕಾರಣದಿಂದ ಭಾರೀ ವಿರೋಧ ವ್ಯಕ್ತವಾಗಿದೆ. ಇದರ ಪರ ಹಾಗೂ ವಿರೋಧದ ಅಲೆ ಆರಂಭವಾಗಿದೆ. ಇದಾದ ನಂತರ ಯಶ್ #Yash ಅವರು ಸಾರ್ವಜನಿಕವಾಗಿ ಎಲ್ಲಿಯೂ ಸಹ ಕಾಣಿಸಿಕೊಂಡಿರಲಿಲ್ಲ.
ಟಾಕ್ಸಿಕ್ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಮುಂಬೈನಲ್ಲೇ ನಡೆಯುತ್ತಿರುವುದರಿಂದ ಯಶ್ ಅಲ್ಲಿಯೇ ಹಲವು ದಿನಗಳಿಂದ ತಂಗಿದ್ದಾರೆ ಎನ್ನಲಾಗಿದೆ. ಮುಂಬೈ ಮಾತ್ರವಲ್ಲದೇ ವಿದೇಶದಲ್ಲೂ ಸಹ ಈ ಚಿತ್ರದ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ ಎನ್ನಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















