ಕಲ್ಪ ಮೀಡಿಯಾ ಹೌಸ್ | ಶಿಕಾರಿಪುರ |
ವಿವೇಕಿಗಳಾಗಬೇಕೆಂದರೆ ವಿವೇಕಾನಂದರ ಬಗ್ಗೆ ಅರಿಯಬೇಕಿದ್ದು, ಅವರ ಆದರ್ಶ ಜೀವನ ನಮ್ಮ ಬದುಕಾಗಬೇಕು ಎಂದು ಕುಮದ್ವತಿ ಕೇಂದ್ರೀಯ ವಸತಿ ಶಾಲೆಯ ಮಾಧ್ಯಮಿಕ ವಿಭಾಗದ ಸಂಯೋಜನಾಧಿಕಾರಿ ಗಿರೀಶ್ ಅಭಿಪ್ರಾಯಪಟ್ಟರು.
ವಿವೇಕಾನಂದ ಜಯಂತಿ #Vivekananda Jayanthi ಅಂಗವಾಗಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ವಿವೇಕಾನಂದರೆಂದರೆ ಅದೊಂದು ಅದಮ್ಯ ಚೇತನ, ದಿವ್ಯಜ್ಯೋತಿ, ನನ್ನ ದೇಶ, ನನ್ನ ಧರ್ಮ, ಸಂಸ್ಕೃತಿಯ ರಾಯಭಾರಿ, ವೀರ ಸನ್ಯಾಸಿ, ವಾಗ್ಮಿ, ಜ್ಞಾನದ ಚಿಲುಮೆ, ದೇಶ ಭಕ್ತ, ವಿಶ್ವಗುರು ಎಂದರೆ ಅತಿಶಯೋಕ್ತಿಯಲ್ಲ ಎಂದರು.
ವಿವೇಕಾನಂದರ ಭಾವಚಿತ್ರಕ್ಕೆ ಶಿಕ್ಷಕರ ವೃಂದದವರು ಪುಷ್ಪಾರ್ಚನೆ ಮಾಡಿ ನಮನ ಸಲ್ಲಿಸಿದರು. ವಿದ್ಯಾರ್ಥಿಗಳು, ಬೋಧಕ-ಬೋಧಕೇತರ ವರ್ಗ ದವರು ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಕೋ -ಆಡಿರ್’ನೇಟರ್ ಪ್ರಭುರವರು ನಡೆಸಿಕೊಟ್ಟರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
