ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ಪತ್ರಿಕಾ ಛಾಯಾಗ್ರಾಹಕ ಶಿವಮೊಗ್ಗ ನಾಗರಾಜ್ ಅವರು ವಿವಿಧೆಡೆ ಪರಿಸರ ಹಾಗೂ ವನ್ಯಜೀವಿ ಕುರಿತ ಏಕವ್ಯಕ್ತಿ ಛಾಯಾಚಿತ್ರ ಪ್ರದರ್ಶನ ಹಾಗೂ ಜನಜಾಗೃತಿ ಮೂಡಿಸುತ್ತಿರುವ ಇವರ ಕಾರ್ಯ ಶ್ಲಾಘನೀಯ ಎಂದು ರೋಟರಿ ಜಿಲ್ಲಾ ಗೌವರ್ನರ್ ರಾಜಾರಾಮ್ ಭಟ್ ಅವರು ಹೇಳಿದರು.
ರಾಜೇಂದ್ರ ನಗರದ ರೋಟರಿ ಶಾಲೆಯಲ್ಲಿ ಇತ್ತಿಚೇಗೆ ಹಮ್ಮಿಕೊಂಡಿದ್ದ ವೃತ್ತಿ ಸೇವಾ ಪ್ರಶಸ್ತಿ ಪ್ರಧಾನ ಸಮಾಂಭದಲ್ಲಿ ಪತ್ರಿಕಾ
ಶಿವಮೊಗ್ಗ ನಾಗರಾಜ್ ಅವರು ಪತ್ರಿಕಾ ಛಾಯಾಗ್ರಹಣದ ಜೊತೆಯಲ್ಲಿ ಹವ್ಯಾಸವಾಗಿ ವನ್ಯ ಜೀವಿ, ಪ್ರಕೃತಿ, ಪ್ರಾಣಿ ಪಕ್ಷಿ, ಗ್ರಾಮೀಣ ಜನ ಜೀವನ ಛಾಯಾಚಿತ್ರ ಕಲೆಗಳಲ್ಲಿ ಅಪಾರ ಪರಿಶ್ರಮ ತೋರಿ ಅನೇಕ ರಾಜ್ಯ, ರಾಷ್ಟ್ರೀಯ, ಅಂತಾರಾಷ್ಟ್ರೀಯ ಮಟ್ಟದ ಛಾಯಾಚಿತ್ರ ಪ್ರದರ್ಶನಗಳಲ್ಲಿ ಭಾಗವಹಿಸಿ ಹಲವು ಪ್ರಶಸ್ತಿಗಳಿಗೆ ಭಾಜನರಾಗಿರುವುದು ಶಿವಮೊಗ್ಗಕ್ಕೆ ಒಂದು ಹೆಮ್ಮೆ ಎಂದರು.
ರೋಟರಿ ಅಧ್ಯಕ್ಷ ಗಣೇಶ್, ಕಾರ್ಯದರ್ಶಿ ಅಣಜಿ ಬಸವರಾಜ್, ವಸಂತ್ ಹೋಬಳಿದಾರ್, ಮಾಜಿ ಸಹಾಯಕ ಗೌವರ್ನರ್ ಜಿ. ವಿಜಯ್‌ಕುಮಾರ್, ಎಚ್.ಎಲ್. ರವಿ., ಸುಮತಿ, ಡಾ.ಪರಮೇಶ್ವರ್ ಸೇರಿದಂತೆ ಹಲವರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post