ಕಲ್ಪ ಮೀಡಿಯಾ ಹೌಸ್ | ಶಿವಮೊಗ್ಗ |
ಜಿಲ್ಲೆಯ ಕೆಲವು ರೈಲ್ವೆ ಲೆವೆಲ್ ಕ್ರಾಸಿಂಗ್ ಪರೀಕ್ಷೆ ನಡೆಯಲಿರುವ ಹಿನ್ನೆಲೆಯಲ್ಲಿ ಕೆಲವು ಮಾರ್ಗಗಳಲ್ಲಿ ಸಂಚಾರ ನಿರ್ಬಂಧಿಸಲಾಗಿದ್ದು, ಬದಲಿ ಮಾರ್ಗ ಸೂಚಿಸಲಾಗಿದೆ.
ಈ ಕುರಿತಂತೆ ಜಿಲ್ಲಾಧಿಕಾರಿಗಳು ಅಧಿಸೂಚನೆ ಹೊರಡಿಸಿದ್ದು, ಶಿವಮೊಗ್ಗ-ಕುಂಸಿ ನಡುವೆ ಬರುವ ಎಲ್’ಸಿ 73, ಎಲ್’ಸಿ 67, ಎಲ್’ಸಿ 64 ಅನ್ನು ಮುಚ್ಚಲು ಎಲ್’ಸಿ ಓಪನ್ನಿಗೆ ಮತ್ತು ಪರೀಕ್ಷೆಗಾಗಿ ಲೆವೆಲ್ ಕ್ರಾಸಿಂಗ್ ಗೇಟ್’ಗಳನ್ನು ತೆರೆದು ಪರಿಶೀಲನೆ ಮಾಡಲು ಉದ್ದೇಶಿಸಿದೆ. ಈ ಹಿನ್ನೆಲೆಯಲ್ಲಿ ಈ ರಸ್ತೆಗಳಲ್ಲಿ ಬದಲಿ ಮಾರ್ಗವನ್ನು ಸೂಚಿಸಲಾಗಿದೆ.
ವಿವರಗಳು ಹೀಗಿವೆ:
1. ಸಾಗರ-ಬಾಳೆಕೊಪ್ಪ ರಸ್ತೆ(ಆ.18ರ ಬೆಳಗ್ಗೆ 7 ಗಂಟೆಯಿಂದ ಆ.19ರ ಸಂಜೆ 6ರವರೆಗೆ):
ಮಾರ್ಗ 1: ಕುಂಸಿಯಿಂದ ಚಿಕ್ಕ ಮರಸ ಬಾಳೆಕೊಪ್ಪದಿಂದ ಎಲ್’ಸಿ ಸಂಖ್ಯೆ 73, ಹಾರನಹಳ್ಳಿ, ಆಯನೂರುವರೆಗೆ(ಚಿಕ್ಕಮರಸ-ಬಾಳೆಕೊಪ್ಪ-ಹುಬ್ಬನಹಳ್ಳಿ-ಕುಂಸಿ) ಮಾರ್ಗದಲ್ಲಿ ರಸ್ತೆ ಕಿರಿದಾಗಿದ್ದು, ಭಾರೀ ವಾಹನ ಸಂಚಾರವನ್ನು ನಿಷೇಧಿಸಲಾಗಿದೆ.
ಮಾರ್ಗ 2: ಹಾರನಹಳ್ಳಿ ಎಲ್’ಸಿ 68- ಹಿಟ್ಟಿನಕೊಪ್ಪ-ಬಾಳೆಕೊಪ್ಪ ಮತ್ತು ಸಾಗರದಿಂದ ಶಿವಮೊಗ್ಗಕ್ಕೆ ಬರುವ ಭಾರೀ ವಾಹನಗಳನ್ನು ಚೋರಡಿ-ಶೆಟ್ಟಿಕೆರೆ-ಸೂಡೂರು-5ನೇ ಮೈಲಿಗಲ್ಲು.
2. ಹೊನ್ನಾಳಿ ರಸ್ತೆ(ಆ.20ರ ಬೆಳಗ್ಗೆಯಿಂದ 7ಗಂಟೆಯಿಂದ ಆ.21ರ ಸಂಜೆ 6 ಗಂಟೆವರೆಗೆ):
ಮಾರ್ಗ-1: ಆಯನೂರು/ಹಾರನಹಳ್ಳಿಯಿಂದ ಹೊನ್ನಾಳಿ ಮತ್ತು ಹೊನ್ನಾಳಿ-ಆಯನೂರು/ಹಾರನಹಳ್ಳಿ ಮೂಲಕ ಮೈಸವಳ್ಳಿ ಎಲ್’ಸಿ 64 ಕೊನಗವಳ್ಳಿ/ಮುದುವಾಲ, ಹೊನ್ನಾಳಿ, ತ್ಯಾಜವಳ್ಳಿ-ದೇವಬಾಳು-ಯಡವಾಳ-ಹಿಟ್ಟಾರು ಕ್ರಾಸ್ -ಮಲ್ಲಾಪುರ ಮೂಲಕ ಸವಳಂಗ ತಲುಪಬಹುದಾಗಿದೆ. ಮೇಲ್ಕಂಡ ರಸ್ತೆ ಕಿರಿದಾಗಿರುವುದರಿಂದ ಸದರಿ ರಸ್ತೆ ಮೂಲಕ ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದೆ. ಭಾರೀ ವಾಹನಗಳು ಆಯನೂರಿನಿಂದ ಎನ್’ಎಚ್ 206 ರಸ್ತೆ ಮೂಲಕ ಶಿವಮೊಗ್ಗ ತಲುಪುವುದು.
ಮಾರ್ಗ-2: ಹಾರನಹಳ್ಳಿ-ಹೊನ್ನಾಳಿ ಮತ್ತು ಹೊನ್ನಾಳಿಯಿಂದ ಹಾರನಹಳ್ಳಿ ಬಾಳೆಕೊಪ್ಪ-ವಿಟ್ಟಲಗೊಂಡನಕೊಪ್ಪ, ಕನಸಿನಕಟ್ಟೆ, ಹೊನ್ನಾಳಿ ಇಲ್ಲಿಯೂ ಸಹ ರಸ್ತೆ ಕಿರಿದಾಗಿದ್ದು, ಭಾರೀ ವಾಹನಗಳ ಸಂಚಾರವನ್ನು ನಿಷೇಧಿಸಿದೆ.
3. ಕೊನಗವಳ್ಳಿ ರಸ್ತೆ(ಆ.22ರ ಬೆಳಗ್ಗೆ 7 ಗಂಟೆಯಿಂದ ಆ.23ರ ಸಂಜೆ 6ರವರೆಗೆ):
ಮಾರ್ಗ -1: ಕೊನಗವಳ್ಳಿ- ತಾಂಡ- ತ್ಯಾಜವಳ್ಳಿ- ಮುದುವಾಲ- ಹಾರನಹಳ್ಳಿ (ಎಲ್’ಸಿ 67) ಕೊನಗವಳ್ಳಿ ತಾಂಡ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post