ಕಲ್ಪ ಮೀಡಿಯಾ ಹೌಸ್ | ಸಾಗರ |
ಪಟ್ಟಣದ ಕೋರ್ಟ್ ಎದುರು ಬೆರಳಚ್ಚುಗಾರನಾಗಿ ಕಾರ್ಯನಿರ್ವಹಿಸುತ್ತಿದ್ದ ನಿತ್ಯಾನಂದ ಎಂಬಾತ ಕೆಳದಿ ಕೆರೆಯ ಬಳಿ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ.
ಘಟನೆ ವಿವರ:
ಕಳೆದ 40 ವರ್ಷಗಳಿಂದ ಸಾಗರದ ಕೋರ್ಟ್ ಎದುರಿನಲ್ಲಿ ಬೆರಳಚ್ಚುಗಾರನಾಗಿ ಕೆಲಸ ಮಾಡಿಕೊಂಡು ಬಂದಿದ್ದ ನಿತ್ಯಾನಂದ, ತಾನು ಕಿವಿಯ ಸಮಸ್ಯೆಯಿಂದ ಬಳಲುತ್ತಿರುವ ಹಿನ್ನೆಲೆ ಆತ್ಮಹತ್ಯೆ ಮಾಡಿಕೊಳ್ಳುತ್ತಿರುವುದಾಗಿ ಡೆತ್‌ನೋಟ್‌ನಲ್ಲಿ ನಮೂದಿಸಿದ್ದಾರೆ ಎನ್ನಲಾಗಿದೆ.
ತನ್ನ ಎರಡೂ ಕಿವಿಗಳು ನಿಶ್ಚಲಗೊಂಡು ಕಿವಿ ಕೇಳಿಸುತ್ತಿರುವುದಿಲ್ಲ. ಕಿವಿಗೆ ಚಿಕಿತ್ಸೆ ಪಡೆದರೂ ಮಿಷನ್ ಹಾಕಿದರೂ ಒಂದು ಕಿವಿ ಸಂಪೂರ್ಣ ಡೆಡ್ ಆಗಿದೆ. ಇನ್ನೊಂದು ಕಿವಿ ಸ್ವಲ್ಪಮಾತ್ರ ಕೇಳಿಸುತ್ತಿದೆ. ಇನ್ನು ಕೆಲವು ದಿನಗಳಲ್ಲಿ ಅದೂ ಸಹ ನಿಶ್ಚಲವಾಗುವ ಸಂಭವ ಇದ್ದು ತನ್ನ ಕೆಲಸ ಮಾಡಲು ಸಾಧ್ಯವಾಗುವುದಿಲ್ಲ. ಪ್ರಯೋಜನವಿಲ್ಲದ ವ್ಯಕ್ತಿಯಾಗಿ ಬದುಕಲು ಇಷ್ಟವಿಲ್ಲ. ಆದ್ದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ. ನನ್ನ ಸಾವಿಗೆ ನಾನೇ ಕಾರಣ ಬೇರೆ ಯಾರೂ ಹೊಣೆಗಾರರಲ್ಲ. ನಾನು ನನ್ನ ಸ್ವ ಹಸ್ತಾಕ್ಷರದಿಂದ ಸಹಿ ಮಾಡಿರುತ್ತೇನೆ. ನಾನು ಮಾನಸಿಕ ಮಾತ್ರೆ ಸಹ ತೆಗೆದು ಕೊಳ್ಳುತ್ತಿದ್ದೇನೆ ಎಂದು ಡೆತ್ ನೋಟ್ ನಲ್ಲಿ ಬರೆಯಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post