ಕಲ್ಪ ಮೀಡಿಯಾ ಹೌಸ್
ಸಾಗರ: ಲಾಕ್ ಡೌನ್ ಅವಧಿಯಲ್ಲಿ ನಕಲಿ ಪಾಸ್ ಹಾಗೂ ಐಡಿ ಕಾರ್ಡ್ ಬಳಸಿ ಸಂಚರಿಸುವವರು ಕಂಡು ಬಂದರೆ ಅವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಿ ಎಂದು ಶಾಸಕ ಹಾಲಪ್ಪ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಸಾಗರ ನಗರಸಭೆಯಲ್ಲಿ ಕೋವಿಡ್-19 ಸಹಾಯವಾಣಿಗೆ ಚಾಲನೆ ನೀಡಿದ ನಂತರ ಅಧಿಕಾರಿಗಳ ಸಭೆ ನಡೆಸಿ ಅವರು ಮಾತನಾಡಿದರು.

ಸರ್ಕಾರ ಸಾರ್ವಜನಿಕರ ಹಿತದೃಷ್ಟಿಯಿಂದ ಲಾಕ್ ಡೌನ್ ಮಾಡಿದೆ. ರೈತರು ಹಾಗೂ ಸಾರ್ವಜನಿಕರು ಕೆಲ ಸಮಸ್ಯೆ ಮತ್ತಿತರ ಅನಿವಾರ್ಯ ಕಾರಣಗಳಿಂದ ಪಟ್ಟಣಗಳಿಗೆ ಬರುತ್ತಾರೆ. ಅವರೊಂದಿಗೆ ಸೌಜನ್ಯಯುತವಾಗಿ ವರ್ತಿಸಿ. ಆದರೆ, ಅನವಶ್ಯವಾಗಿ ಅಲೆದಾಡುವವರು, ನಕಲಿ ಪಾಸ್ ಮತ್ತು ಐಡಿಗಳನ್ನು ಬಳಸಿ ಸಂಚರಿಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳುವಂತೆ ಪೊಲೀಸ್ ಅಧಿಕಾರಿಗಳಿಗೆ ಸೂಚಿಸಿದರು.

ಸಾರ್ವಜನಿಕರು ಸಾಗರ ನಗರಸಭೆಯಲ್ಲಿ ವ್ಯಾಪ್ತಿಯಲ್ಲಿ ಕೋವಿಡ್-19 ಸಹಾಯವಾಣಿಗಾಗಿ ಮೊ: 9483772119 ಸಂಖ್ಯೆಗೆ ಸಂಪರ್ಕಿಸಬಹುದು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















