ಕಲ್ಪ ಮೀಡಿಯಾ ಹೌಸ್ | ಸಾಗರ |
ಮನೆ ಎದುರು ಆಟವಾಡುತ್ತಿದ್ದ ಎರಡೂವರೆ ವರ್ಷದ ಮಗುವಿಗೆ ಹಾವು ಕಚ್ಚಿದ ಪರಿಣಾಮ ಆ ಬಾಲಕ ಸಾವನ್ನಪ್ಪಿರುವ Child died bitten by snake ಘಟನೆ ನಗರದ ಎಸ್’ಎನ್ ನಗರದಲ್ಲಿ ನಡೆದಿದೆ.
ಮೃತ ಬಾಲಕನನ್ನು ಭುವಿನ್(2.5 ವರ್ಷ) ಎಂದು ಗುರುತಿಸಲಾಗಿದೆ.
ಹಾವು ಕಚ್ಚಿದಾಕ್ಷಣ ಮಗು ಕೂಗಿಕೊಂಡಿದ್ದು, ಪೋಷಕರು ಹೊರಕ್ಕೆ ಬಂದು ನೋಡಿದ್ದಾರೆ. ಮಗುವಿನ ಪಕ್ಕದಲ್ಲಿ ಹಾವು ಹರಿದುಹೋಗುತ್ತಿದ್ದನ್ನು ಗಮನಿಸಿದ್ದಾರೆ.
ತಕ್ಷಣವೇ ಮಗುವನ್ನು ಸಾಗರದ ಉಪವಿಭಾಗೀಯ ಆಸ್ಪತ್ರೆಗೆ ಕರೆದುಕೊಂಡು ಹೋಗಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿದ್ದಾರೆ. ವೈದ್ಯರ ಶಿಫಾರಸ್ಸಿನ ಮೇರೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಮಗು ಉಸಿರು ಚೆಲ್ಲಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




