ಕಲ್ಪ ಮೀಡಿಯಾ ಹೌಸ್ | ಸಕಲೇಶಪುರ |
ಭಾರೀ ಮಳೆಯಿಂದಾಗಿ ಗುಡ್ಡ ಕುಸಿತದ ಹಿನ್ನೆಲೆಯಲ್ಲಿ ಬೆಂಗಳೂರು-ಮAಗಳೂರು ಸಂಪರ್ಕಿಸುವ ರಾಷ್ಟ್ರೀಯ ಹೆದ್ದಾರಿ 75ರ ಶಿರಾಡಿ ಘಾಟ್’ನಲ್ಲಿ ಹೇರಲಾಗಿದ್ದ ಸಂಚಾರ ನಿಷೇಧ ಆದೇಶದಲ್ಲಿ ಮಾರ್ಪಾಡು ಮಾಡಲಾಗಿದೆ.
ಈ ಕುರಿತಂತೆ ಹಾಸನ ಜಿಲ್ಲಾಡಳಿತ ಆದೇಶವನ್ನು ಮಾರ್ಪಾಡು ಮಾಡಿದ್ದು, ಶಿರಾಡಿ ಘಾಟಿಯಲ್ಲಿ ಬೆಳಗ್ಗೆ 6ರಿಂದ ಸಂಜೆ 6 ಗಂಟೆಯವೆರಗೂ ವಾಹನ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ.
ಈ ಬಗ್ಗೆ ಸಕಲೇಶಪುರ ಉಪವಿಭಾಗಾಧಿಕಾರಿಗಳು ಮಾದ್ಯಮಗಳಿಗೆ ಮಾಹಿತಿ ನೀಡಿದ್ದು, ನಿರ್ಬಂಧಿತ ನಿಯಮಗಳಡಿ ವಾಹನ ಸಂಚಾರಕ್ಕೆ ಅವಕಾಶ ನೀಡಿ ಹೊಸ ಆದೇಶ ಹೊರಡಿಸಲಾಗಿದೆ ಎಂದಿದ್ದಾರೆ.
Also read: ಕುಸಿಯುವ ಭೀತಿಯಲ್ಲಿ ಶಿರಾಡಿ ಘಾಟ್ | ಹಲವು ಮನೆ, ದೇಗುಲಗಳಿಗೆ ಜಲದಿಗ್ಬಂಧನ
ಪ್ರಮುಖವಾಗಿ ಮುಂಜಾಗ್ರತಾ ಕ್ರಮವಾಗಿ ರಾತ್ರಿ ವೇಳೆಯಲ್ಲಿ ಘಾಟಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಲಾಗಿದೆ.
ವಾಹನ ಸವಾರರ ಪರದಾಟ
ಇನ್ನು, ಗುರುವಾರ ರಾತ್ರಿಯಿಂದಲೇ ಘಾಟಿಯಲ್ಲಿ ವಾಹನ ಸಂಚಾರಕ್ಕೆ ನಿಷೇಧ ಹೇರಿದ್ದ ಪರಿಣಾಮ ಹೆದ್ದಾರಿ ಹಾಗೂ ಸಂಪರ್ಕಿತ ರಸ್ತೆಯಲ್ಲಿ ನೂರಾರು ವಾಹನಗಳು ಸಾಲುಗಟ್ಟಿ ನಿಂತಿದ್ದವು.
ಪ್ರಮುಖವಾಗಿ, ಈ ಭಾಗದಲ್ಲಿ ಹೆಚ್ಚು ಸಂಚರಿಸುವ ಲಾರಿ ಹಾಗೂ ಟ್ರಕ್ ಚಾಲಕರು ಊಟ, ತಿಂಡಿ, ಕುಡಿಯುವ ನೀರು ಹಾಗೂ ಶೌಚಾಲಯವಿಲ್ಲದೇ ಪರದಾಡುವಂತಾಯಿತು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 



















