ಕಲ್ಪ ಮೀಡಿಯಾ ಹೌಸ್
ಶಿವಮೊಗ್ಗದ ಉದಯೋನ್ಮುಖ ಕಲಾವಿದ ಅಮಿತ್ ಗಂಗೂರ್ ಪ್ರಮುಖ ಪಾತ್ರದಲ್ಲಿ ಅಭಿನಯಿಸಿರುವ ಇದೇ ಅಂತರಂಗ ಶುದ್ಧಿ ಚಲನಚಿತ್ರ ಫೆ.11ರಂದು ರಾಜ್ಯದಾದ್ಯಂತ ತೆರೆಕಾಣಲಿದೆ.
ಶಿವಮೊಗ್ಗದ ಭಾರತ್ ಸಿನಿಮಾಸ್‍ನಲ್ಲಿ ಪ್ರದರ್ಶನ ಕಾಣಲಿರುವ ಚಿತ್ರದಲ್ಲಿ ಶಿವಮೊಗ್ಗದ ಪ್ರತಿಭೆ ಅಮಿತ್ ಗಂಗೂರ್ ನೆಗೆಟಿವ್ ಪಾತ್ರದಲ್ಲಿ ಅಭಿನಯಿಸಿದ್ದು, ಇದು ಅವರ ಚೊಚ್ಚಲ ಅಭಿನಯದ ಚಿತ್ರವಾಗಿದೆ.

ಮೂಲತಃ ಜಿಲ್ಲೆಯ ಶಿಕಾರಿಪುರ ತಾಲ್ಲೂಕಿನ ಹಿತ್ಲ ಗ್ರಾಮದ ಅಮಿತ್ ಗಂಗೂರ್ ಬೆಳೆದಿದ್ದು, ಕಲಿತದ್ದು ಶಿವಮೊಗ್ಗದಲ್ಲೆ. ಕಳೆದ 6 ವರ್ಷಗಳಿಂದ ಚಿತ್ರರಂಗದಲ್ಲಿ ಹಲವು ಚಿತ್ರಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡುತ್ತಿದ್ದ, ಅಮಿತ್ ಅವರ ಪ್ರತಿಭೆಯನ್ನು ಗುರುತಿಸಿ ನಿರ್ದೇಶಕ ಕುಮಾರ್ ದತ್ ಇದೇ ಅಂತರಂಗ ಶುದ್ಧಿ ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನೀಡಿದ್ದಾರೆ.
ಚಿತ್ರವು ಕುತೂಹಲಭರಿತ ತಿರುವುಗಳನ್ನು ಹೊಂದಿದ್ದು, ಸಸ್ಪೆನ್ಸ್ ಜೊತೆಗೆ ಕಾಮಿಡಿಯ ಮಿಶ್ರಣ ಹೊಂದಿದ್ದು, 2 ಗಂಟೆಗಳ ಕಾಲ ಪ್ರೇಕ್ಷಕರ ಮನಸ್ಸನ್ನು ಹಿಡಿದಿಡುವಲ್ಲಿ ಯಶಸ್ವಿಯಾಗಲಿದೆ ಎನ್ನುವ ವಿಶ್ವಾಸ ಚಿತ್ರತಂಡದ್ದು.

ಚಿತ್ರದ ಚಿತ್ರೀಕರಣವು ಬೆಂಗಳೂರು ಸುತ್ತಮುತ್ತ ನಡೆದಿದ್ದು, ನಾಯಕರಾಗಿ ಆರ್ಯ, ನಾಯಕಿಯಾಗಿ ಪ್ರತಿಭಾ ನಟಿಸಿದ್ದು, ಅಭಿಲಾಷ್ ಚಕ್ಲ ನಿರ್ಮಾಣ ಮಾಡಿದ್ದಾರೆ.
ಶಿವಮೊಗ್ಗದ ಪ್ರತಿಭೆಯ ಚೊಚ್ಚಲ ಚಿತ್ರವನ್ನು ಚಿತ್ರಪ್ರೇಮಿಗಳು ವೀಕ್ಷಿಸಿ ಪ್ರೋತ್ಸಾಹಿಸುವಂತೆ ಚಿತ್ರತಂಡ ಮನವಿ ಮಾಡಿದೆ.

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















