ಕಲ್ಪ ಮೀಡಿಯಾ ಹೌಸ್ | ಸ್ಯಾಂಡಲ್ವುಡ್ |
13 ವರ್ಷಗಳ ಸುಧೀರ್ಘ ಕಾಯುವಿಕೆಯ ನಂತರ ಮೈಸೂರಿನಲ್ಲಿ ನಮ್ಮ ಪ್ರೀತಿಯ ಸಾಹಸಸಿಂಹ ಡಾ. ವಿಷ್ಣುವರ್ಧನ್ Vishnuvardhan ಅವರ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ ಎಂದು ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್ Actor Shivrajkumar ಸಂತಸ ವ್ಯಕ್ತಪಡಿಸಿದ್ದಾರೆ.
13 ವರ್ಷಗಳ ಸುಧೀರ್ಘ ಕಾಯುವಿಕೆಯ ನಂತರ ಮೈಸೂರಿನಲ್ಲಿ ನಮ್ಮ ಪ್ರೀತಿಯ ಸಾಹಸಸಿಂಹ ಡಾ.ವಿಷ್ಣುವರ್ಧನ್ ಅವರ ಸ್ಮಾರಕ ಲೋಕಾರ್ಪಣೆ ಆಗುತ್ತಿರುವುದು ಮನಸ್ಸಿಗೆ ಖುಷಿ ನೀಡಿದೆ.! ಸ್ಮಾರಕ ನಿರ್ಮಾಣಕ್ಕೆ ಕಾರಣರಾದ ವಿಷ್ಣು ಕುಟುಂಬಕ್ಕೆ ,ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ನನ್ನ ಧನ್ಯವಾದಗಳು. pic.twitter.com/zV410dmmJG
— DrShivaRajkumar (@NimmaShivanna) January 29, 2023
ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಟ್ವೀಟ್ ಮಾಡಿರುವ ಅವರು, ಸ್ಮಾರಕ ನಿರ್ಮಾಣಕ್ಕೆ ಕಾರಣರಾದ ವಿಷ್ಣು ಕುಟುಂಬಕ್ಕೆ, ಸರ್ಕಾರಕ್ಕೆ ಹಾಗೂ ಅಭಿಮಾನಿಗಳಿಗೆ ತಮ್ಮ ಧನ್ಯವಾದ ತಿಳಿಸಿದ್ದಾರೆ.
ವಿಷ್ಣುವರ್ಧನ್ ಹಾಗೂ ನಮ್ಮ ಕುಟುಂಬದ ಬಾಂಧವ್ಯ ಮತ್ತು ಒಡನಾಟ ಬಹಳಷ್ಟಿವೆ. ವಿಷ್ಣುವರ್ಧನ್ ನಮ್ಮ ತಂದೆ ಡಾ.ರಾಜ್ ಅವರನ್ನು ಬಹಳಷ್ಟು ಪ್ರೀತಿ ಗೌರವ ಅಭಿಮಾನದಿಂದ ಕಾಣುತ್ತಿದ್ದರು. ಅಪ್ಪಾಜಿ ಹಾಗೂ ನಮ್ಮ ಕುಟುಂಬ ಕೂಡ ವಿಷ್ಣು ಅವರನ್ನು ತುಂಬು ಪ್ರೀತಿಯಿಂದ ಕಂಡಿದ್ದೇವೆ.! ವಿಷ್ಣುವರ್ಧನ್ ಅವರ ಅಭಿಮಾನಿಗಳ ಕೋರಿಕೆ ಕೊನೆಗೂ ಸ್ಮಾರಕ ರೂಪದಲ್ಲಿ ಈಡೇರುತ್ತಿರುವ ವಿಷಯ ನನಗೆ ಹಾಗೂ ನಮ್ಮ ಚಿತ್ರರಂಗಕ್ಕೆ ಬಹಳ ಹೆಮ್ಮೆಯ ವಿಷಯ ಎಂದು ಬರೆದುಕೊಂಡಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post