ಕಲ್ಪ ಮೀಡಿಯಾ ಹೌಸ್
ಸೌದಿ ಅರೇಬಿಯಾ: ಸೌದಿ ಅರೇಬಿಯಾ ಮುಸ್ಲಿಂ ರಾಷ್ಟ್ರವಾದರೂ ಅಲ್ಲಿನ ಶಾಲಾ ಮಕ್ಕಳ ಪಠ್ಯದಲ್ಲಿ ಭಾರತದ ಮಹಾಭಾರತ-ರಾಮಾಯಣ ಸೇರ್ಪಡೆಗೊಳಿಸುವ ಮಹತ್ವದ ತೀರ್ಮಾನ ಕೈಗೊಂಡಿದೆ. ಪ್ರಿನ್ಸ್ ಮೊಹಮ್ಮದ್ ಬಿನ್ ಸಲ್ಮಾನ್ ಕೈಗೆ ಸೌದಿ ಸಿಗುತ್ತಿದ್ದಂತೆ ಭಾರೀ ಮಹತ್ವದ ನಿರ್ಧಾರ ಕೈಗೊಳ್ಳುತ್ತಿದ್ದಾರೆ. ಸೌದಿಯಲ್ಲಿ ಉದಾರೀಕರಣದ ನೀತಿಯನ್ನು ಒಂದೊಂದಾಗಿ ಜಾರಿಗೆ ತರುತ್ತಿದ್ದಾರೆ. ಇದು ಹಲವರ ಕೆಂಗಣ್ಣಿಗೆ ಗುರಿಯಾಗಿದೆ. ಮುಸ್ಲಿಂ ಮಹಿಳೆಯರನ್ನು ಉದ್ಯೋಗಕ್ಕೆ ನೇಮಿಸುವ ತೀರ್ಮಾನವನ್ನು ಇದೇ ಪ್ರಿನ್ಸ್ ಮೊಹಮ್ಮದ್ ಸಲ್ಮಾನ್ ಜಾರಿಗೆ ತಂದಿದ್ದರು. ಶಿಕ್ಷಣ ಕ್ಷೇತ್ರಕ್ಕೆ ವಿಷನ್ 2030 ಯೋಜನೆ ಜಾರಿ ಮಾಡಿದೆ.
ಸೌದಿ ಅರೇಬಿಯಾ ವಿಷನ್ 2030 ಯೋಜನೆ ಅಡಿಯಲ್ಲಿ ವಿದ್ಯಾರ್ಥಿಗಳಿಗೆ ರಾಮಾಯಣ ಮತ್ತು ಮಹಾಭಾರತವನ್ನು ಬೋಧಿಸಲು ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳ ಸಾಂಸ್ಕೃತಿಕ ಜ್ಞಾನ, ವಿದ್ಯಾರ್ಥಿಗಳಿಗೆ ಇತರ ದೇಶದ ಇತಿಹಾಸ, ಸಾಂಸ್ಕೃತಿಕ ವಿಭಿನ್ನತೆ, ಜ್ಞಾನ ಸಂಪಾದಿಸಲು ನೆರವಾಗಲಿದೆ. ಈ ಅಧ್ಯಯನವು ಜಾಗತಿಕವಾಗಿ ಮಹತ್ವದ ಭಾರತೀಯ ಸಂಸ್ಕೃತಿಗಳಾದ ಯೋಗ ಮತ್ತು ಆಯುರ್ವೇದದ ಮೇಲೆ ಕೇಂದ್ರೀಕರಿಸಲಿದೆ ಎಂದು ವರದಿಯಾಗಿದೆ.
ಸೌದಿ ಅರೇಬಿಯಾದ ವಿದ್ಯಾರ್ಥಿಗಳ ಪಠ್ಯಕ್ರಮದಲ್ಲಿ ರಾಮಾಯಣ ಮತ್ತು ಮಹಾಭಾರತವನ್ನು ಪರಿಚಯಿಸುವುದರ ಜೊತೆಗೆ, ಹೊಸ ವಿಷನ್ 2030 ರಲ್ಲಿ ಇಂಗ್ಲಿಷ್ ಭಾಷೆಯನ್ನು ಕಡ್ಡಾಯಗೊಳಿಸಲಾಗಿದೆ ಎಂದು ಸೌದಿ ಅರೇಬಿಯಾ ಹೇಳಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post